Home latest ಹಿಜಾಬ್‌ ಧರಿಸದ ಕಾರಣಕ್ಕೆ ಯುವತಿಯನ್ನು ಬಂಧಿಸಿದ ಪೊಲೀಸರು, ಕೋಮಾ ಸ್ಥಿತಿ ತಲುಪಿ ಯುವತಿ ಸಾವು !

ಹಿಜಾಬ್‌ ಧರಿಸದ ಕಾರಣಕ್ಕೆ ಯುವತಿಯನ್ನು ಬಂಧಿಸಿದ ಪೊಲೀಸರು, ಕೋಮಾ ಸ್ಥಿತಿ ತಲುಪಿ ಯುವತಿ ಸಾವು !

Hindu neighbor gifts plot of land

Hindu neighbour gifts land to Muslim journalist

ಹಿಜಾಬ್ ಧರಿಸಿಲ್ಲ ಎಂದು ಬಂಧನಕ್ಕೊಳಗಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹ್ಸಾ ಆಮಿನಿ (22 ) ಎಂಬಾಕೆಯೇ ಮೃತಪಟ್ಟ ಯುವತಿ.

ಈಕೆ ತನ್ನ ಕುಟುಂಬದೊಂದಿಗೆ ಇರಾನ್‌ ರಾಜಧಾನಿ ತೆಹ್ರಾನ್‌ಗೆ ಹೋಗುತ್ತಿದ್ದಳು. ಆಕೆ ಹಿಜಾಬ್ ಧರಿಸಿರಲಿಲ್ಲ. ಆಕೆ ಹಿಜಬ್‌ ಧರಿಸದೇ ಇದ್ದ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ
ಪೊಲೀಸ್‌ರು ಯುವತಿಯನ್ನು ಬಂಧಿಸಿದ್ದರು.

ಬಂಧನದಿಂದ ಶಾಕ್‌ಗೆ ಒಳಗಾದ ಯುವತಿ ಕೋಮಾ ಸ್ಥಿತಿ ತಲುಪಿದ್ದಾಳೆ. ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ದುರದೃಷ್ಟವಶಾತ್‌ ಆಕೆ ಬದುಕುಳಿದಿಲ್ಲ. ಆಕೆಯ ಸಾವಿಗೆ ತಲೆಗೆ ಬಿದ್ದ ಬಲವಾದ ಪ್ರಹಾರವೇ ಕಾರಣ ಎನ್ನಲಾಗುತ್ತಿದೆ. ಈಗ ಅಲ್ಲಿನ ಆಡಳಿತ ವ್ಯವಸ್ಥೆ ಮತ್ತು ಪೊಲೀಸರ ಮೇಲೆ ಪ್ರತಿಭಟನೆಗಳು ಶುರುವಾಗಿದೆ. ಅಸ್ಪತ್ರೆಯ ಮುಂದೆ ಜನರು ಜಮಾಯಿಸಿ ಪ್ರತಿಭಟನಾ ಸ್ಲೋಗನ್ ಗಳನ್ನು ಕೂಗಿದರು.

ಇರಾನ್ ದೇಶದಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಹಿಜಬ್‌ (ಶಿರವಸ್ತ್ರ) ಧರಿಸುವುದು ಕಡ್ಡಾವಾಗಿದೆ. ಈ ಇಸ್ಲಾಮಿಕ್‌ ಗಣರಾಜ್ಯದಲ್ಲಿ ಸಮವಸ್ತ್ರ ಕಡ್ಡಾಯ. ಇಲ್ಲಿ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಕೂಡ ಜಾರಿಯಲ್ಲಿದ್ದು ಮಹಿಳೆಯರು ಜೈಲಿನ ಮತ್ತು ಹಿಂಸೆಯ ಭಯದಲ್ಲೇ ಬದುಕುತ್ತಿದ್ದಾರೆ. ಇದೀಗ ವಿಶ್ವಸಂಸ್ಥೆಯ ಅಧಿಕಾರಿಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿದ್ದಾರೆ.