Home latest ಮುಂಜಾನೆ ಗಾಢ ನಿದ್ದೆಯಲ್ಲಿದ್ದ ಪತಿಯ ಕತ್ತನ್ನು ಬ್ಲೇಡ್ ನಿಂದ ಕೊಯ್ದ ನವವಧು! ಕಾರಣ ಕೇಳಿದರೆ ನೀವು...

ಮುಂಜಾನೆ ಗಾಢ ನಿದ್ದೆಯಲ್ಲಿದ್ದ ಪತಿಯ ಕತ್ತನ್ನು ಬ್ಲೇಡ್ ನಿಂದ ಕೊಯ್ದ ನವವಧು! ಕಾರಣ ಕೇಳಿದರೆ ನೀವು ಬೆಚ್ಚಿಬೀಳುವುದು ಖಂಡಿತ!!!

Hindu neighbor gifts plot of land

Hindu neighbour gifts land to Muslim journalist

ಗಾಢ ನಿದ್ದೆಯಲ್ಲಿದ್ದ ಗಂಡನನ್ನು ನವ ವಿವಾಹಿತೆಯೊಬ್ಬಳು ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಘಟನೆಯೊಂದು ಎ‌.25 ರ ನಸುಕಿನ ಜಾವ ಈ ಘಟನೆ ನಡೆದಿದೆ. ಈ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಹನಮಕೊಂಡ ಜಿಲ್ಲೆಯ ದಾಮೆರ ಮಂಡಲದ ಪಸರಗೊಂಡ ಗ್ರಾಮದಲ್ಲಿ ನವವಿವಾಹಿತೆಯೊಬ್ಬಳು ತನ್ನ ಪತಿಯನ್ನು ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾಳೆ. ಇಂದು(ಏ.25) ನಸುಕಿನ ಜಾವ ಈ ವಿಲಕ್ಷಣ ಮತ್ತು ಆಘಾತಕಾರಿ ಘಟನೆ ನಡೆದಿದೆ.

ಪತ್ನಿಯಿಂದ ಹಲ್ಲೆಗೊಳಗಾದ ಪತಿ 30 ವರ್ಷದ ಮಾದಿಶೆಟ್ಟಿ ರಾಜು ಅವರ ಚಿಂತಾಜನಕವಾಗಿದ್ದು ವಾರಂಗಲ್‌ನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ರಾಜು ಮಾರ್ಚ್ 25 ರಂದು ಅರ್ಚನಾಳನ್ನು ವಿವಾಹವಾಗಿದ್ದರು.

ಮದುವೆ ವೇಳೆ ಸರಿ ಇದ್ದ ಅರ್ಚನಾ ಈ ನಡುವೆ ವಿಚಿತ್ರವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 2 ಗಂಟೆ ಸುಮಾರಿಗೆ, ಆಕೆ ನಿದ್ದೆಯಲ್ಲಿದ್ದ ಗಂಡನ ಮೇಲೆ ಬ್ಲೇಡ್‌ನಿಂದ ದಾಳಿ ಮಾಡಿ ಆತನ ಕುತ್ತಿಗೆ ಕತ್ತರಿಸಿದ್ದಾಳೆ. ಬ್ಲೇಡ್‌ನಿಂದ ಕೊಯ್ದ ಪರಿಣಾಮ ತೀವ್ರ ರಕ್ತಸ್ರಾವಕ್ಕೊಳಗಾದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ದಾಮೆರ ಪೊಲೀಸರು ಮನೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದಕ್ಕೆ
ಸಂಬಂಧಿಸಿದಂತೆ ಸಂತ್ರಸ್ತನ ಕುಟುಂಬದಿಂದ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.