Home latest ವಾಟ್ಸಾಪ್‌ನಲ್ಲಿ ಪ್ರಿಯಕರ ನಂಬರ್ ಬ್ಲಾಕ್ ಮಾಡಿದ್ದಕ್ಕೆ ನೇಣಿಗೆ ಶರಣಾದ ಯುವತಿ!

ವಾಟ್ಸಾಪ್‌ನಲ್ಲಿ ಪ್ರಿಯಕರ ನಂಬರ್ ಬ್ಲಾಕ್ ಮಾಡಿದ್ದಕ್ಕೆ ನೇಣಿಗೆ ಶರಣಾದ ಯುವತಿ!

Hindu neighbor gifts plot of land

Hindu neighbour gifts land to Muslim journalist

ಹದಿಹರೆಯದ ಪ್ರೀತಿ ಅಂದರೆ ಹೀಗೆ. ಭವಿಷ್ಯದ ಚಿಂತೆ ಇರಲ್ಲ. ತಂದೆ ತಾಯಿ ನೆನಪಿಗೆ ಬರಲ್ಲ. ಕಣ್ಣಲ್ಲಿ, ಮನಸ್ಸಲ್ಲಿ ಕೇವಲ ಪ್ರೀತಿ ಮಾತ್ರ ಕಾಣುತ್ತೆ. ಆತ/ ಆಕೆ ಮಾತ್ರ ಇಲ್ಲಿ ಮುಖ್ಯ. ಈ ಹದಿಹರೆಯದ ಪ್ರೀತಿಯಲ್ಲಿ ಫೋನ್ ಕೂಡಾ ಮುಖ್ಯ ಪಾತ್ರ ವಹಿಸುತ್ತದೆ. ಈಗ ಈ ಫೋನೇ ಪ್ರಿಯತಮೆಯ ಸಾವಿಗೆ ಕಾರಣವಾಗಿದೆ.

ಹೌದು. ಪ್ರಿಯಕರ ವಾಟ್ಸಾಪ್‌ನಲ್ಲಿ ತನ್ನ ನಂಬರ್ ಬ್ಲಾಕ್ ಮಾಡಿದಕ್ಕೆ 20 ವರ್ಷದ ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪನಗರದ ದಹಿಸರ್‌ನಲ್ಲಿ ರೈಲ್ವೆ ಹಳಿಯ ಬದಿಯಲ್ಲಿ ನಡೆದಿದೆ.

ಪ್ರಣಾಲಿ ಲೋಕರೆ ಮೃತ ಯುವತಿ ಎಂದು ಗುರುತಿಸಲಾಗಿದೆ. ಯುವತಿ ಮತ್ತು ಆಕೆಯ 27 ವರ್ಷದ ಯುವಕ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಭಾನುವಾರ ರಾತ್ರಿ ಪರಿಚಯಸ್ಥರ ಮದುವೆಗೆ ತೆರಳಿದ್ದರು. ಇದಾದ ಬಳಿಕ ಯವತಿ ತನ್ನ ಪ್ರೇಮಿಯೊಂದಿಗೆ ರಾತ್ರಿ ಅವನ ಮನೆಯಲ್ಲಿ ಇರಬೇಕೆಂದು ಯಾಕೋ ತುಂಬಾ ಒತ್ತಾಯ ಮಾಡಿದ್ದಾಳೆ. ಆದರೆ ಯುವಕ ಒಪ್ಪದೆ ಯುವತಿಯನ್ನು ಮನೆಗೆ ಹೋಗುವಂತೆ ಹೇಳಿದ್ದಾನೆ.

ಇದಾದ ನಂತರ ಹೊರಡ್ತೇನೆ ಎಂದು ಹೋದ ಯುವತಿ, ತಕ್ಷಣ ತನ್ನ ಗೆಳೆಯನಿಗೆ ಪದೇ ಪದೇ ಕರೆ ಮಾಡಲು ಪ್ರಾರಂಭಿಸಿದ್ದಾಳೆ. ಯುವತಿಯ ಕಿರಿ ಕಿರಿಯಿಂದ ಬೇಸತ್ತು ಯುವಕ, ಯುವತಿಯ ನಂಬರ್ ಅನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಯುವತಿ, ಯುವಕನ ಮನೆಗೆ ತೆರಳಿ ವಾಟ್ಸಾಪ್‌ನಲ್ಲಿ ತನ್ನ ನಂಬರ್ ಬ್ಲಾಕ್ ಮಾಡಿದ್ದನ್ನು ಪ್ರಶ್ನಿಸಿದ್ದಾಳೆ. ಅನಂತರ ಇಬ್ಬರ ನಡುವೆ ಜಗಳವಾಗಿದೆ.

ಬಳಿಕ ಯುವತಿ, ಯವಕನ ಮನೆಯಲ್ಲಿ ಉಳಿದ್ದಿದ್ದಾಳೆ. ಬೆಳಗ್ಗೆ ಎದ್ದು ನೋಡಿದಾಗ ಆಕೆ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಯುವಕ ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.