Home latest ಮಹಾಮಳೆಯ ನಿಮಿತ್ತ ಉಡುಪಿ ಶಾಲೆಗಳಿಗೂ ನಾಳೆ( ಜು.11) ರಜೆ ಘೋಷಣೆ

ಮಹಾಮಳೆಯ ನಿಮಿತ್ತ ಉಡುಪಿ ಶಾಲೆಗಳಿಗೂ ನಾಳೆ( ಜು.11) ರಜೆ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ಉಡುಪಿ : ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 11ರ ಸೋಮವಾರದಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.

ಉಡುಪಿಯಲ್ಲಿ ನಿರಂತರ ವರ್ಷಘೋಷಗಳು ಮೊಳಗುತ್ತಿರುವ ಕಾರಣ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಹಳ್ಳ ಕೊಳ್ಳಗಳಲ್ಲಿ ಕೆಂಪು ಮಣ್ಣು ಮಿಶ್ರಿತ ನೀರು ಹರಿಯುತ್ತಿದೆ. ನದಿಗಳು ಉತ್ತುಂಗ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಇಂತಹಾ ಸಂದರ್ಭದಲ್ಲಿ, ಸಣ್ಣ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಉಡುಪಿ ಜಿಲ್ಲಾಧಿಕಾರಿಗಳು ಜಿಶಾಲೆಗಳಿಗೆ ನಾಳೆ ಜುಲೈ 11 ರಂದು ರಜೆ ಘೋಷಿಸಲಾಗಿದೆ.

ಜಿಲ್ಲೆಯಲ್ಲಿ ಸೋಮವಾರ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಪಿಯುಸಿ, ಸೇರಿದಂತೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ನಾಳೆ ಪಿಯುಸಿ ಸೇರಿದಂತೆ ಕಾಲೇಜುಗಳು ಪುನರಾರಂಭಗೊಳ್ಳಲಿದೆ. ಅಂಗನವಾಡಿ, ಖಾಸಗಿ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಮಕ್ಕಳಿಗೆ ರಜೆ ಘೋಷಣೆಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರಿ, ಏಡೆಡ್ ಮತ್ತು ಖಾಸಗಿ ಪ್ರೌಢ ಶಾಲಾವರೆಗಿನ ಎಲ್ಲಾ ಮಕ್ಕಳಿಗೆ ನಾಳೆ ಮಳೆಯ ನಿಮಿತ್ತ ರಜೆ ಸಾರಲಾಗಿದೆ.
ಆದರೆ ಪಿಯುಸಿ ಮತ್ತು ಮೇಲ್ಪಟ್ಟ ಎಲ್ಲಾ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯಾಚರಿಸಲಿವೆ. ಕಾಲೇಜು, ಡಿಪ್ಲೋಮ ಗಳಿಗೆ ರಜೆ ಇರುವುದಿಲ್ಲ. ಐಟಿಐ ಗಳಿಗೆ ರಜೆ ಇರುವುದಿಲ್ಲ.

ದಕ್ಷಿಣ ಕನ್ನಡ update:

ದಕ್ಷಿಣ ಕನ್ನಡ ಕೂಡಾ ನಾಳೆ ದಿನಾಂಕ 11/07/2022 ರಂದು ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಸಾರಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲಿನ ಸರ್ಕಾರಿ, ಏಡೆಡ್ ಮತ್ತು ಖಾಸಗಿ ಪ್ರೌಢ ಶಾಲಾವರೆಗಿನ ಎಲ್ಲಾ ಮಕ್ಕಳಿಗೆ ನಾಳೆ ಮಳೆಯ ನಿಮಿತ್ತ ರಜೆ ಸಾರಲಾಗಿದೆ. ಆದರೆ ಪಿಯುಸಿ ಮತ್ತು ಮೇಲ್ಪಟ್ಟ ಎಲ್ಲಾ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯಾಚರಿಸಲಿವೆ. ಕಾಲೇಜು, ಡಿಪ್ಲೋಮ ಗಳಿಗೆ ರಜೆ ಇರುವುದಿಲ್ಲ. ಐಟಿಐ ಗಳಿಗೆ ರಜೆ ಇರುವುದಿಲ್ಲ.

ಉಳಿದಂತೆ ಕಾರವಾರದಲ್ಲಿ ಶಾಲಾಕಾಲೇಜುಗಳಿಗೆ ರಜೆ ಇರೋದಿಲ್ಲ. ನಾಳೆಯಿಂದ ಅಲ್ಲಿ ಎಂದಿನಂತೆ ತರಗತಿಗಳು ಶುರುವಾಗಲಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಶೃಂಗೇರಿ, ಕೊಪ್ಪ, ಎನ್. ಆರ್. ಪುರ, ಮೂಡಿಗೆರೆ, ಕಳಸ ಮತ್ತು ಚಿಕ್ಕಮಗಳೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ಜುಲೈ 11 ಮತ್ತು 12 ರಂದು ರಜೆ ಘೋಷಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.