Home latest ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ‘ಆಧಾರ್’ ಕಡ್ಡಾಯ!

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ‘ಆಧಾರ್’ ಕಡ್ಡಾಯ!

Tirupati temple

Hindu neighbor gifts plot of land

Hindu neighbour gifts land to Muslim journalist

TTD Darshan :ಚಿನ್ನ, ಬೆಳ್ಳಿ, ವಜ್ರ ವೈಢೂರ್ಯ, ನಗದು ಹಣ, ಅಮೂಲ್ಯ ರತ್ನ ಗಳಿಂದ ಶೋಭಿಸುವ, ಕಲಿಯುಗದ ವೈಕುಂಠ ಎಂದು ಕರೆಯಲ್ಪಡುವ ತಿರುಪತಿಯು ತಿಮ್ಮಪ್ಪನ (Tirupati) ದೇವಸ್ಥಾನ (temple ) ಕ್ಕೆ ಪ್ರತಿ ನಿತ್ಯ ಲಕ್ಷಾಂತರ ಭಕ್ತರಿಂದ ಪೂಜೆಗೊಳ್ಳುತ್ತದೆ. ಇದುವರೆಗೆ ಯಾವುದೇ ಗುರುತಿನ ಚೀಟಿ ಸಲ್ಲಿಸಿ ಆನ್‌ಲೈನ್‌ನಲ್ಲಿ (online ) ಟಿಕೆಟ್ ಕಾಯ್ದಿರಿಸುವ ತಿಮ್ಮಪ್ಪನ ದರುಶನ ಪಡೆಯಲಾಗುತ್ತಿತ್ತು.ಆದರೆ ಸದ್ಯ ಈ ಪದ್ಧತಿಯನ್ನು ರದ್ದುಪಡಿಸಲಾಗಿದೆ.

ಹೌದು ಆಧಾರ್ (aadhaar ) ಇದ್ದರೆ ಮಾತ್ರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ (TTD Darshan) ಪಡೆಯಬಹುದಾಗಿದೆ. ಈ ಹಿಂದೆ ಆಧಾರ್ ಇಲ್ಲದ ಭಕ್ತರು ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ (ration card ), ಡ್ರೈವಿಂಗ್ ಲೈಸೆನ್ಸ್ ಬಳಸಿ ದರ್ಶನ ಟಿಕೆಟ್ ಪಡೆಯುತ್ತಿದ್ದರು. ಈಗ ಈ ನಿಯಮವನ್ನು ರದ್ದುಗೊಳಿಸಲಾಗಿದೆ. ಗುರುತಿನ ಏಕೈಕ ರೂಪವಾಗಿ ಆಧಾರ್ ಅನ್ನು ಕಡ್ಡಾಯಗೊಳಿಸಲಾಗಿದೆ.

ಈ ಕುರಿತು ತಿರುಮಲದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಆಗಿರುವ ಧರ್ಮಾ ರೆಡ್ಡಿ ಅವರು , ಈಗಾಗಲೇ 300 ರೂಪಾಯಿ ದರ್ಶನ ಟಿಕೆಟ್, ಉಚಿತ ದರ್ಶನ ಟೋಕನ್ ಸೇರಿದಂತೆ ಯಾವುದೇ ದರ್ಶನ ಟಿಕೆಟ್ ಖರೀದಿಸಿದ ಭಕ್ತರು ನಡೆದುಕೊಂಡು ಬೆಟ್ಟ ಹತ್ತುವಾಗ ಅಲ್ಲಿ ನೀಡಿದ ದರ್ಶನ ಟೋಕನ್ ಅನ್ನು ಸಹ ಖರೀದಿಸುತ್ತಿದ್ದಾರೆ. ಹೀಗೆ ಒಂದೇ ದಿನದಲ್ಲಿ ಒಂದೇ ಭಕ್ತನಿಗೆ ಎರಡು ರೀತಿಯ ದರ್ಶನ ಅವಕಾಶಗಳು ಸಿಗುತ್ತವೆ. ಇದರಿಂದಾಗಿ ಆಡಳಿತಾತ್ಮಕ ಮಟ್ಟದಲ್ಲಿ ಇದು ವಿವಿಧ ಅಡಚಣೆಗಳನ್ನು ಉಂಟುಮಾಡುತ್ತದೆ. ಇದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡ ನಂತರ ದಿವ್ಯ ದರ್ಶನ ಟೋಕನ್‌ಗಳನ್ನು ಭಕ್ತರಿಗೆ ಹಿಂತಿರುಗಿಸಲಾಗುವುದು ಎಂದರು ಧರ್ಮಾರೆಡ್ಡಿ ತಿಳಿಸಿದ್ದಾರೆ.

ಅಲ್ಲದೆ ಭಕ್ತರು ಇನ್ನು ಮುಂದೆ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿಯನ್ನು ಸೇರಿದಂತೆ ಇತರೆ ಯಾವುದೇ ದಾಖಲಾತಿಗಳನ್ನು ನೀಡಿ ತಿರುಮಲ ಒಡೆಯನ ದರ್ಶನದ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ ಎಂದು ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಇನ್ನುಮುಂದೆ ತಿರುಪತಿಯಿಂದ ತಿರುಮಲಕ್ಕೆ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ನೀಡಲಾಗುತ್ತಿದ್ದ ದಿವ್ಯ ದರ್ಶನ ಟೋಕನ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಶೀಘ್ರದಲ್ಲೇ ಮತ್ತೆ ಆರಂಭಿಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ, ಎಂದು ಈ ಮೂಲಕ ತಿಳಿಸಲಾಗಿದೆ.