Home latest Indina Railway : ರೈಲ್ವೆ ಪ್ರಯಾಣಕ್ಕೆ ಇನ್ಮುಂದೆ ಮೊಬೈಲಲ್ಲಿ ಟಿಕೆಟ್ ತೋರಿಸುವಂತಿಲ್ಲ, ಟಿಕೆಟ್‌ ಮುದ್ರಿತ ಪ್ರತಿ...

Indina Railway : ರೈಲ್ವೆ ಪ್ರಯಾಣಕ್ಕೆ ಇನ್ಮುಂದೆ ಮೊಬೈಲಲ್ಲಿ ಟಿಕೆಟ್ ತೋರಿಸುವಂತಿಲ್ಲ, ಟಿಕೆಟ್‌ ಮುದ್ರಿತ ಪ್ರತಿ ಕಡ್ಡಾಯ !!

Hindu neighbor gifts plot of land

Hindu neighbour gifts land to Muslim journalist

Indina Railway : ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಪ್ರಯಾಣಿಕರು ಟಿಕೆಟ್ ಅನ್ನು ಬುಕ್ ಮಾಡಿದಾಗ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಚೆಕಿಂಗ್ ವೇಳೆ ತೋರಿಸುತ್ತಿದ್ದರು. ಇದುವರೆಗೂ ಈ ನಿಯಮ ಮಾನ್ಯವಾಗಿತ್ತು. ಆದರೆ ಇನ್ನು ಮುಂದೆ ಬರೀ ಮೊಬೈಲ್ ನಲ್ಲಿ ಟಿಕೆಟ್ ತೋರಿಸಿದರೆ ಸಾಲದು, ಟಿಕೆಟಿನ ಮುದ್ರಿತ ಪ್ರತಿಯನ್ನು ಕಡ್ಡಾಯವಾಗಿ ತರಬೇಕೆಂದು ರೈಲ್ವೆ ಇಲಾಖೆ ತಿಳಿಸಿದೆ.

ಡಿಜಿಟಲ್ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಭಾರತೀಯ ರೈಲ್ವೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಕಾಯ್ದಿರಿಸದ ರೈಲು ಪ್ರಯಾಣಕ್ಕೆ ಕೇವಲ ಮೊಬೈಲ್ ನಲ್ಲಿ ಟಿಕೆಟ್ ತೋರಿಸಿದರೆ ಸಾಕಾಗೋದಿಲ್ಲ. ಕಡ್ಡಾಯವಾಗಿ ಮುದ್ರಿತ ಟಿಕೆಟ್ ಪ್ರಯಾಣಿಕರ ಕೈಯಲ್ಲಿರಬೇಕು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜೈಪುರದಲ್ಲಿ ನಡೆದ ತನಿಖೆಯ ವೇಳೆ, ಕೆಲವರು ಒಂದೇ ಟಿಕೆಟ್‌ನಲ್ಲಿ ಅನೇಕ ಪ್ರಯಾಣಿಕರ ವಿವರಗಳನ್ನು ತೋರಿಸುವಂತೆ ಎಐ ಉಪಕರಣಗಳ ಮೂಲಕ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ. ಮೊಬೈಲ್‌ನಲ್ಲಿ ತೋರಿಸಿದ ಟಿಕೆಟ್ ಮೇಲ್ನೋಟಕ್ಕೆ ನಿಜವಾಗಿಯೇ ಕಾಣಿಸಿಕೊಂಡರೂ, ಸೂಕ್ಷ್ಮ ಪರಿಶೀಲನೆಯಲ್ಲಿ ವಂಚನೆ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ. ಈ ಹೊಸ ನಿಯಮದಂತೆ, ಯುಟಿಎಸ್, ಎಟಿವಿಎಂ ಅಥವಾ ಕೌಂಟರ್ ಮೂಲಕ ಖರೀದಿಸಿದ ಕಾಯ್ದಿರಿಸದ ಟಿಕೆಟ್‌ಗಳ ಮುದ್ರಿತ ಪ್ರತಿಯನ್ನು ಕೊಂಡೊಯ್ಯುವುದು ಕಡ್ಡಾಯವಾಗಿದೆ.