Home latest ತವರು ಮನೆಗೇ ಕನ್ನ ಕೊರೆದ ಪ್ರೀತಿಯ ಮಗಳು

ತವರು ಮನೆಗೇ ಕನ್ನ ಕೊರೆದ ಪ್ರೀತಿಯ ಮಗಳು

Hindu neighbor gifts plot of land

Hindu neighbour gifts land to Muslim journalist

ಹೆಣ್ಣು ಮಕ್ಕಳಿಗೆ ತವರು ಮನೆ ಎಂದರೆ ಬಲು ಪ್ರೀತಿ ಎಂದರೆ ತಪ್ಪಾದೀತು ಕಾರಣ ಅದು ಅವರಿಗೆ ಪ್ರಾಣ. ಹೀಗಾಗಿ ತವರಿಗೆ ಬರುವ ಅವಕಾಶ ಸಿಕ್ಕರೆ ಆಕೆಯ ಮನಸ್ಸು ಮುದಗೊಳ್ಳುತ್ತದೆ. ಅಮ್ಮನ ಮನೆಯ ಬಗ್ಗೆ ಸುಮ್ಮನೆ ತಮಾಷೆಗೆ ಏನು ಅಂದರು ಮಗಳು ಸುಮ್ಮನೆ ಇರುವುದಿಲ್ಲ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಮನೆಮಗಳೇ ತವರಿಗೆ ವಿಲನ್ ಆಗಿದ್ದಾಳೆ.

ಹೌದು, ಇಂಥದೊಂದು ವಿಚಿತ್ರ ಘಟನೆ ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ನಡೆದಿದ್ದು, ಪ್ರವೀಣೆ ಎಂಬಾಕೆ ತನ್ನ ಪತಿ ಗಣೇಶ್ ಎಂಬಾತನ ಜೊತೆ ಸೇರಿ ನಕಲಿ ಕೀ ಮೂಲಕ ತನ್ನ ತವರು ಮನೆ ಪ್ರವೇಶಿಸಿ ಕಳ್ಳತನ ಮಾಡಿದ್ದಾಳೆ.

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಹೇಮಾವತಿ ವಸತಿಗೃಹದಲ್ಲಿದ್ದ ತನ್ನ ಪೋಷಕರು ಹೊರ ಹೋಗಿದ್ದನ್ನು ತಿಳಿದಿದ್ದ ಪ್ರವೀಣೆ, ಜುಲೈ 9ರಂದು ಪತಿ ಜೊತೆ ಸೇರಿ 300 ಗ್ರಾಂ ಚಿನ್ನ, ಮೂರು ಲಕ್ಷ ರೂ ನಗದು ಕಳವು ಮಾಡಿದ್ದಳು.

ಮನೆಯಲ್ಲಿ ನಗ ನಗದು ಕಳುವಾಗಿದ್ದನ್ನು ಕಂಡ ಪ್ರವೀಣೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ವೇಳೆ ಈ ಈ ಆಘಾತಕಾರಿ ಸಂಗತಿ ಬಯಲಾಗಿದೆ. ಕಳ್ಳತನದಲ್ಲಿ ಮಗಳ ಕೈಚಳಕ ಪತ್ತೆಯಾಗಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.