Home latest ‘ ನೀನು ಜಗತ್ತಿನ ಬೆಸ್ಟ್ ಅಮ್ಮ…ಈ ಜನ್ಮದಲ್ಲಿ ನಿನ್ನನ್ನು ಅಮ್ಮನಾಗಿ ಪಡೆದ ನಾನು ಧನ್ಯ’...

‘ ನೀನು ಜಗತ್ತಿನ ಬೆಸ್ಟ್ ಅಮ್ಮ…ಈ ಜನ್ಮದಲ್ಲಿ ನಿನ್ನನ್ನು ಅಮ್ಮನಾಗಿ ಪಡೆದ ನಾನು ಧನ್ಯ’ ಎಂದು ಸುಸೈಡ್ ನೋಟ್ ಬರೆದು ಬಾಲಕ ಆತ್ಮಹತ್ಯೆ!

Hindu neighbor gifts plot of land

Hindu neighbour gifts land to Muslim journalist

ಖಾಸಗಿ ಶಾಲೆಯ 10 ನೇ ತರಗತಿಯೋರ್ವ ವಿದ್ಯಾರ್ಥಿ ತನ್ನ ಅಪಾರ್ಟ್‌ಮೆಂಟ್ ನ 15 ನೇ ಮಹಡಿಯಿಂದ ಹಾರಿ 15 ವರ್ಷದ ಬಾಲಕ ತನ್ನ ಜೀವನವನ್ನು ಕೊನೆಗಾಣಿಸಿದ್ದಾನೆ.

ಈ ಘಟನೆ ನಡೆದಿರುವುದು ಹರಿಯಾಣದ ಗ್ರೇಟರ್ ಫರಿದಾಬಾದ್ ನಲ್ಲಿ. ಈ ಬಾಲಕ ಡಿಸ್ಲೆಕ್ಸಿಯಾ ( ಕಲಿಕೆಯ ಅಸ್ವಸ್ಥತೆ)ಯಿಂದ ಬಳಲುತ್ತಿದ್ದ. ಶಾಲೆಯ ಟೀಚರ್ ಗಳು, ಇತರೆ ಮಕ್ಕಳು ಹೆದರಿಸುತ್ತಿದ್ದರು. ಕಿರುಕುಳ ನೀಡುತ್ತಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆ ಬಾಲಕ ಸೂಸೈಡ್ ನೋಟ್ ನಲ್ಲಿ ಬರೆದಿದ್ದಾನೆ.

ಇದರ ಜೊತೆಗೆ ಆತ ಸುಸೈಡ್ ನೋಟ್ ನಲ್ಲಿ ಆತ ತನ್ನ ತಾಯಿ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದಾನೆ. ನೀನು ನನಗಾಗಿ ನಿಮಗೇನು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೀರಿ. ಆದರೆ ನಾನು ಧೈರ್ಯವಂತನಾಗಿರಲು ಸಾಧ್ಯವಾಗಲಿಲ್ಲ. ಅಮ್ಮಾ …ನೀನು ಈ ಜಗತ್ತಿನಲ್ಲೇ ಬೆಸ್ಟ್ ಅಮ್ಮ. ನಾನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ. ನನ್ನ ಕ್ಷಮಿಸಿಬಿಡಿ’ ಎಂದು ಬರೆದಿದ್ದಾನೆ.

ಬಾಲಕ ಬರೆದಿರುವ ಸುಸೈಡ್ ನೋಟ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಮುಖ್ಯೋಪಾಧ್ಯಾಯಿನಿ ಮತ್ತು ಇತರ ಮಕ್ಕಳು ತನಗೆ ಕಿರುಕುಳ ನೀಡಿ, ಬೆದರಿಸುತ್ತಿದ್ದರು ಎಂದು ಆತ ಆರೋಪಿಸಿದ್ದಾನೆ.

ಗುರುವಾರ ಮನೆಯಲ್ಲಿ ಯಾರೂ ಇಲ್ಲದೇ ಇರುವ ಸಮಯದಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಪಡೆಯುತ್ತಿರುವಾಗಲೇ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದಾಗಿ ಬಾಲಕನ ಕುಟುಂಬ ದಿಗ್ಭ್ರಮೆಗೊಳಿಸಿದೆ.

ಈ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದೆ.