Home latest ತಂದೆಯ ಮೇಲಿನ ಅಗಾಧ ಪ್ರೀತಿ | ಅಪ್ಪನ ಸಮಾಧಿಗೆ ಮಗ ಮಾಡಿದ ಪುಷ್ಪಾರ್ಚನೆಯ ರೀತಿ ಅಮೋಘ

ತಂದೆಯ ಮೇಲಿನ ಅಗಾಧ ಪ್ರೀತಿ | ಅಪ್ಪನ ಸಮಾಧಿಗೆ ಮಗ ಮಾಡಿದ ಪುಷ್ಪಾರ್ಚನೆಯ ರೀತಿ ಅಮೋಘ

Hindu neighbor gifts plot of land

Hindu neighbour gifts land to Muslim journalist

ತಂದೆಯ ಮೇಲಿನ ಅಗಾಧ ಪ್ರೀತಿಗೆ ಇಲ್ಲೋರ್ವ ಮಗ ಹೆಲಿಕಾಪ್ಟರ್ ಮೂಲಕ ಪುಷ್ಪನಮನ ಮಾಡಿದ ಅಪರೂಪದ ಘಟನೆಯೊಂದು ನಡೆದಿದೆ.

ಅಪರೂಪದಲ್ಲಿ ಅಪರೂಪದ ಈ ಘಟನೆಯು ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೊತ್ತೂರು ರಾಮಾಪುರ ಗ್ರಾಮದ ಲೋಕೇಶ್ ಎಂಬುವರು ಒಂದು ವರ್ಷದ ಹಿಂದೆಯಷ್ಟೇ ಮೃತಪಟ್ಟಿದ್ದ ತಮ್ಮ ತಂದೆ ಗೋವಿಂದ ರಾಜ್ ಎಂಬುವರ ಸಮಾದಿಗೆ ಹೆಲಿಕಾಪ್ಟರ್ ಮೂಲಕ‌ ಪುಷ್ಪ ನಮನ ಸಲ್ಲಿಸಿದ್ದಾರೆ.
ಲೋಕೇಶ್ ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಸಂಬಂಧಿಯಾಗಿರುವ ಲೋಕೇಶ್. ತನ್ನ ತಂದೆ ಮೃತಪಟ್ಟು ಒಂದು ವರ್ಷವಾಗಿದ್ದು ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ಇಂದು ಹೆಲಿಕಾಪ್ಟರ್ ಮೂಲಕ ಪುಷ್ಪರ್ಚಾನೆ ಹಾಗೂ ನೂರಾರು ಜನರಿಗೆ ಅನ್ನದಾನ ಮಾಡಿದ್ದಾರೆ.

ತಮ್ಮ ಹುಟ್ಟೂರಿನಲ್ಲಿ ಸುಮಾರು 25 ಲಕ್ಷ ಖರ್ಚುಮಾಡಿ ಬೃಹತ್ ತನ್ನ ತಂದೆಯ ಸಮಾಧಿ ಕಟ್ಟಿಸಿದ್ದಾರೆ. ಈ ನಡುವೆ ಇಂದು ಒಂದು ವರ್ಷದ ಅಂಗವಾಗಿ ವಿಶೇಷವಾಗಿ ಆಚರಣೆ ಮಾಡುವ ಸಲುವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನ ಮಾಡಿದ್ದಾರೆ. ನಮ್ಮ ತಂದೆ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ, ಯಾವುದಕ್ಕೂ ಏನೂ ಕಡಿಮೆಯಾದಂತೆ ನೋಡಿಕೊಂಡಿದ್ದಾರೆ ಹಾಗಾಗಿ ಅವರು ಸತ್ತಮೇಲೂ ಎಲ್ಲೋ ಒಂದು ಕಡೆ ನೋಡುತ್ತಾ ಇರುತ್ತಾರೆ ಅದಕ್ಕಾಗಿ ಅವರಿಗೆ ಸಂತೋಷ ಪಡಿಸಲು ಹೀಗೆ ವಿಭಿನ್ನವಾಗಿ ಮಾಡಲಾಗಿದೆ ಎಂದು ಹೇಳುತ್ತಾ ತಂದೆಯ ಮೇಲಿನ ಅಗಾಧ ಪ್ರೀತಿಯನ್ನು ತೋರಿಸಿದ್ದಾರೆ.