Home latest Self Harming: ಗರಡಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ 13ರ ಕುಸ್ತಿಪಟು ಬಾಲಕಿ !!

Self Harming: ಗರಡಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ 13ರ ಕುಸ್ತಿಪಟು ಬಾಲಕಿ !!

Self Harming

Hindu neighbor gifts plot of land

Hindu neighbour gifts land to Muslim journalist

Self Harming: ದಾವಣಗೆರೆ ಜಿಲ್ಲೆಯಲ್ಲಿ ಸಣ್ಣ ಹರೆಯದಲ್ಲೇ ಕುಸ್ತಿಪಟುವಾಗಿ (Wrestler) ಮಿಂಚಿದ್ದ 13ರ ಹರೆಯದ ಹುಡುಗಿ (13 year old Girl)ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವತಿಯನ್ನು ದಾವಣಗೆರೆ ಜಿಲ್ಲೆಯ (Davanagere)ಹರಿಹರ ಪಟ್ಟಣದ ನಿವಾಸಿಯಾಗಿರುವ ಕಾವ್ಯಾ ಪೂಜಾರ್ (13)ಎನ್ನಲಾಗಿದ್ದು, ಈಕೆ ಹರಿಹರದ ಶಿಬಾರ ಸರ್ಕಲ್ ಬಳಿ ಇರುವ ಗರಡಿ ಮನೆಯಲ್ಲಿ ಆತ್ಮಹತ್ಯೆ(Self Harming) ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಧಾರವಾಡ ಕುಸ್ತಿ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾವ್ಯಾ ಎರಡು ದಿನಗಳ ಹಿಂದೆ ಹರಿಹರದ ಮನೆಗೆ ತೆರಳಿದ್ದಳು. ಹಲವು ಪ್ರಶಸ್ತಿಗಳನ್ನು ಪಡೆದಿದ್ದ ಈಕೆ ಬೆಳಗ್ಗೆ ಎದ್ದು ಗರಡಿ ಮನೆಗೆ ತರಬೇತಿಗೆ ಹೋಗಿದ್ದ ಆಕೆ ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಯುವತಿ ಯಾವ ಕಾರಣಕ್ಕೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ‌ ಎನ್ನುವ ಕಾರಣ ತಿಳಿದುಬಂದಿಲ್ಲ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಪ್ರಿಯತಮನ ಜೊತೆ ಸೇರಿ ಅತ್ತೆಯನ್ನೇ ಪರಂದಾಮಕ್ಕೆ ಕಳಿಸಿದ್ಲು ಈ ಖತರ್ನಾಕ್ ಸೊಸೆ – ಸಾವಿನ ಸುಳಿವು ಕೊಡ್ತು ಮೊಬೈಲ್ ಚಾಟ್