Home latest Chennai: ಇತರರನ್ನು ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ; ಬೆಂಗಳೂರಿನ ನಾಲ್ವರ ಬಂಧನ!!

Chennai: ಇತರರನ್ನು ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ; ಬೆಂಗಳೂರಿನ ನಾಲ್ವರ ಬಂಧನ!!

Chennai
Image source: TV9 kannada

Hindu neighbor gifts plot of land

Hindu neighbour gifts land to Muslim journalist

Chennai: ಜಗತ್ತು ಮುಂದುವರಿದಂತೆ ಜನರ ನಡವಳಿಕೆಗಳೂ ಬದಲಾಗುತ್ತಾ ಹೋಗುತ್ತದೆ. ಅಂತೆಯೇ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ‌. ಇತ್ತೀಚೆಗಂತೂ ಸೋಷಿಯಲ್ ಮೀಡಿಯಾವನ್ನು ಬಳಸಿ, ಅಮಾಯಕರಿಗೆ ಮೋಸ ಮಾಡಿ ಅವರ ಖಾತೆಯಿಂದ ಹಣ ಎಗರಿಸುವ ಪ್ರಕರಣ ಹೆಚ್ಚಾಗಿದೆ. ಆದರೆ, ಈ ಘಟನೆ ಸ್ವಲ್ಪ ವಿಭಿನ್ನ. ಆಶ್ಚರ್ಯಕರವೂ ಹೌದು. ಸ್ಟೈಲೀಶ್ ಆಗಿ ಕಾಣಲು ಹೆಚ್ಚಾಗಿ ಎಲ್ಲಾರೂ ಕನ್ನಡಕ ಧರಿಸುತ್ತಾರೆ‌. ಆದರೆ, ಇದು ಮಾಯಾ ಕನ್ನಡಕ. ಈ ಕನ್ನಡಕ ಧರಿಸಿದರೆ ಎದುರಿಗಿರುವವರು ನಗ್ನರಾಗಿ ಕಾಣುತ್ತಾರೆ. ಹೀಗೆ ಹೇಳಿಕೊಂಡು ನಕಲಿ ಕನ್ನಡಕ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏನಪ್ಪಾ ಈ ಪ್ರಕರಣ? ಈ ಲೇಖನ ಓದಿ ಗೊತ್ತಾಗುತ್ತೆ!!.

ಬೆಂಗಳೂರು (Bengaluru) ಮೂಲದ ನಾಲ್ವರು ಎದುರಿಗಿರುವ ವ್ಯಕ್ತಿ ನಗ್ನವಾಗಿ ಕಾಣುತ್ತಾರೆ ಎಂದು ಜನರಿಗೆ ನಂಬಿಸಿ ನಕಲಿ ಕನ್ನಡಕವನ್ನು ದೊಡ್ಡ ಮೊತ್ತದ ಹಣಕ್ಕೆ ಮಾರಾಟ ಮಾಡಲು ಯತ್ನಿಸಿದ್ದು, ವಿಷಯ ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಶಿವ ಅಲಿಯಾಸ್ ಸೂರ್ಯ (39), ಕುಗೈಪ್ (37), ಜಿತು (24) ಮತ್ತು ಇರ್ಷಾದ್ (21).

ಪೊಲೀಸರಿಗೆ ಕೆಲವು ವ್ಯಕ್ತಿಗಳು ನಗ್ನವಾಗಿ ಕಾಣುವ ನಕಲಿ ಕನ್ನಡಕವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು, ಮಾಹಿತಿ ಮೇರೆಗೆ ಪೊಲೀಸರು ಕೋಯಂಬೇಡು ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಶೋಧ ಕಾರ್ಯ ನಡೆಸಿದ್ದು, ಆರೋಪಿಗಳನ್ನು ಚೆನ್ನೈ (Chennai) ಪೊಲೀಸರು ಬಂಧಿಸಿದ್ದಾರೆ.

ಈ ಕಿರಾತಕರು ಸುಳ್ಳು ಹೇಳಿ ದುಬಾರಿ ಬೆಲೆಗೆ ಕನ್ನಡಕ ಮಾರಾಟ ಮಾಡಿದ್ದು, ಜನರು ಖರೀದಿಗೆ ಮುಗಿಬಿದ್ದಿದ್ದಾರೆ. ಹಾಗೆಯೇ ಜನರು ಕನ್ನಡಕವನ್ನು ಕಣ್ಣಿಗೆ ಇಟ್ಟು ಇನ್ನೊಬ್ಬರನ್ನು ನೋಡಿದ್ದಾರೆ. ಆದರೆ, ಅವರಿಗೆ ಎದುರಿಗಿರುವವರು ನಗ್ನವಾಗಿ ಕಾಣಿಸಿಲ್ಲ, ಅದು ನಕಲಿ ಕನ್ನಡಕವಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಈ ಕಿರಾತಕರು ನಕಲಿ ಪಿಸ್ತೂಲ್‌ನಿಂದ ಜನರನ್ನು ಬೆದರಿಸಿದ್ದು, ಹಣವನ್ನೂ ದೋಚಿದ್ದಾರೆ. ಈ ಆರೋಪಿಗಳು ಇನ್ನೆಷ್ಟು ಜನರಿಗೆ ಮೋಸ ಮಾಡಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ಶೀಘ್ರವೇ 8ನೇ ಆಯೋಗ ರಚನೆ ; ಫಿಟ್ಮೆಂಟ್ ಅಂಶ ಹೆಚ್ಚಳ!