Home latest 15,000 ಶಾಲಾ ಶಿಕ್ಷಕರ ನೇಮಕಾತಿಯ ‘ಮೂಲದಾಖಲೆ ಪರಿಶೀಲನೆ’ ಬಗ್ಗೆ ಮಹತ್ವದ ಮಾಹಿತಿ

15,000 ಶಾಲಾ ಶಿಕ್ಷಕರ ನೇಮಕಾತಿಯ ‘ಮೂಲದಾಖಲೆ ಪರಿಶೀಲನೆ’ ಬಗ್ಗೆ ಮಹತ್ವದ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ಸಾರ್ವಜನಿಕ ಶಿಕ್ಷಣ ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ಶಿಕ್ಷಕರಿಗೆ ನೀಡಿದೆ. 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ( Recruitment of Graduate Primary Teachers ) ಸಂಬಂಧಿಸಿದಂತೆ 1:2 ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ಮೂಲದಾಖಲೆಗಳ ಪರಿಶೀಲನೆಗೆ ( Document Verification ) ನಿಗದಿತ ದಿನಾಂಕದೊಳಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department) ಸೂಚಿಸಿದೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ 2022 ( Teacher Recruitment 2022) ಸಂಬಂಧಿಸಿದಂತೆ 1:2 ಪರಿಶೀಲನಾ ಪಟ್ಟಿಯನ್ನು ಇಲಾಖಾ ವೆಬ್ ಸೈಟ್ ನಲ್ಲಿ (Website) ಪ್ರಕಟಿಸಲಾಗಿದೆ ಎಂದಿದ್ದಾರೆ.

ಪ್ರಕಟಿತ ಪಟ್ಟಿಗಳಲ್ಲಿ ಪರಿಗಣಿಸಲ್ಪಟ್ಟಿರುವ ಅಭ್ಯರ್ಥಿಗಳ
ಮೂಲದಾಖಲೆಗಳ ಪರಿಶೀಲನೆಯನ್ನು ಆಯಾ ಜಿಲ್ಲೆಯ
ಉಪನಿರ್ದೇಶಕರು(ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರದವರ ಕಚೇರಿಗಳಲ್ಲಿ ದಿನಾಂಕ 06-10-2022ರಿಂದ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಅಭ್ಯರ್ಥಿಗಳು ಇಲಾಖೆಯಿಂದ ಸೂಚಿಸಿರುವಂತ ಸೂಚನೆಗಳನ್ನು ಪಾಲಿಸಿ ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ http://schooleducation.kar.nic.in ಗೆ ಭೇಟಿ ನೀಡಲು ತಿಳಿಸಿದ್ದಾರೆ.