Home latest ಕೆಲಸ ಕೊಡುವುದಾಗಿ ನಂಬಿಸಿ 17 ವರ್ಷದ ಅಪ್ರಾಪ್ತ ಯುವತಿಯನ್ನು ನಿರಂತರವಾಗಿ ರೇಪ್ ಮಾಡಿದ 15...

ಕೆಲಸ ಕೊಡುವುದಾಗಿ ನಂಬಿಸಿ 17 ವರ್ಷದ ಅಪ್ರಾಪ್ತ ಯುವತಿಯನ್ನು ನಿರಂತರವಾಗಿ ರೇಪ್ ಮಾಡಿದ 15 ಮಂದಿ!

Hindu neighbor gifts plot of land

Hindu neighbour gifts land to Muslim journalist

ಕೆಲಸ ಕೊಡುವುದಾಗಿ ಹೇಳಿ, 17 ವರ್ಷದ ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ನಿರಂತರವಾಗಿ ಒಂದೂವರೆ ವರ್ಷ ಅತ್ಯಾಚಾರ ಎಸಗಿರುವ ಆರೋಪದ ಮೇಲೆ 6 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಒಟ್ಟು 15 ಮಂದಿ ಹುಡುಗಿಯ ಮೇಲೆ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ.

ಹುಡುಗಿ ಬಡ ಕುಟುಂಬದವಳಾಗಿದ್ದು, ಇದೀಗ ಐದು ತಿಂಗಳ ಗರ್ಭಿಣಿಯಾಗಿದ್ದಾಳೆ. ಬಂಧಿತರನ್ನು ಕುಮಾರಮಂಗಳಂ ಮೂಲದ ಬೋಕರ್ ರಘು (ಬೇಬಿ 51), ವೆಲ್ಲರಮ್‌ಕುಲು ಮೂಲದ ಕೆಎಸ್‌ಇಬಿ ಉದ್ಯೋಗಿ ವಲಂಪಿಲಿಲ್ ಸಜೀವ್ (55), ಕೊಟ್ಟಾಯಂ, ರಾಮಪುರಂನ ಮನಿಯಾದುಪರದ ಕಲ್ಲುರ್ಕಾಡು ಕೊಟ್ಟೂರು ಥಾಂಕಚನ್ (56), ವಲ್ಲಿಯಜರಾಮ್, ಪೊಕ್ಕಲಥು ವೀಡುವಿನ ಬಿನು (43), ಪಿನಾಕಟ್ಟು ವೀಡುವಿನ ಥಾಮಸ್ ಚಾಕೋ (27) ಮಲಪ್ಪುರಂ ಮೂಲದ ಜಾನ್ (50) ಎಂದು ಗುರುತಿಸಲಾಗಿದೆ.

15 ಮಂದಿ ದೌರ್ಜನ್ಯ ಎಸಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಹುಡುಗಿ 15 ವರ್ಷ ವಯಸ್ಸಾಗಿದ್ದಾಗಲೂ ಹುಡುಗಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತೆಗೆ ತಂದೆ ಇಲ್ಲ. ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಬ್ರೋಕರ್ ರಘು 2020ರಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.

ರಘು ಮಾತನ್ನು ನಂಬಿದ ಸಂತ್ರಸ್ತೆ ಆತನನ್ನು ಭೇಟಿಯಾಗಲು ಬಂದಾಗ ಮೊದಲು ಆಕೆಯ ಮೇಲೆ ಈತ ರೇಪ್ ಮಾಡಿದ್ದಾನೆ. ಇದಾದ ಬಳಿಕ ಕೆಲವರ ಬಳಿ ಹಣ ತಗೊಂಡು ಸಂತ್ರಸ್ತೆಯನ್ನು ಅವರತ್ರ ಕಳಿಸಿದ್ದಾನೆ. ಇದು ಹೀಗೆ ಕಳೆದ ಎರಡು ತಿಂಗಳವರೆಗೂ ಮುಂದುವರಿದಿತ್ತು. ಹೊಟ್ಟೆ ನೋವಿನಿಂದ ಸಂತ್ರಸ್ತೆ ಆಸ್ಪತ್ರೆಗೆ ದಾಖಲಾದಾಗ ತಾನು ಗರ್ಭಿಣಿ ಆಗಿರುವುದು ಆಕೆಗೆ ಗೊತ್ತಾಗಿದೆ.

ಇದಾದ ಬಳಿಕ ಆಸ್ಪತ್ರೆಯ ವೈದ್ಯರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ಮುಟ್ಟಿತು. ಆಸ್ಪತ್ರೆಗೆ ಧಾವಿಸಿದ ಅಧಿಕಾರಿಗಳು ಸಂತ್ರಸ್ತೆಯಿಂದ ಹೇಳಿಕೆ ಪಡೆದುಕೊಂಡ ಬಳಿಕ ಕಾರ್ಯಾಚರಣೆಗೆ ಇಳಿದು 6 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿಗಳ ಮೇಲೆ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.