Home Karnataka State Politics Updates Pratap Simha Brother Arrest:ಆ ಟೈಮ್ ಬರಲಿ ಎಲ್ಲಾ ಸತ್ಯ ಬಾಯಿಬಿಡ್ತೀನಿ – ಪ್ರತಾಪ್ ಸಿಂಹ...

Pratap Simha Brother Arrest:ಆ ಟೈಮ್ ಬರಲಿ ಎಲ್ಲಾ ಸತ್ಯ ಬಾಯಿಬಿಡ್ತೀನಿ – ಪ್ರತಾಪ್ ಸಿಂಹ ಸಹೋದರನಿಂದ ಹೊಸ ಬಾಂಬ್

Hindu neighbor gifts plot of land

Hindu neighbour gifts land to Muslim journalist

Vikram Simha Arrested: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ ಸರ್ಕಾರಿ ಜಮೀನಿನಲ್ಲಿದ್ದ 126 ಮರಗಳನ್ನು ಅಕ್ರಮವಾಗಿ ಕಡಿದು ಅವುಗಳನ್ನು ಸಾಗಾಣಿಕೆ ಮಾಡಿರುವ ಆರೋಪದ ಮೇರೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ(MP Pratap Simha) ಅವರ ಸಹೋದರ ವಿಕ್ರಂ ಸಿಂಹ(Vikram Simha) ಅವರನ್ನು ಅರಣ್ಯಾಧಿಕಾರಿಗಳು(Pratap Simha Brother Arrest) ಬಂಧಿಸಿದ್ದಾರೆ.

 

ಹಾಸನ ಅರಣ್ಯ ಪ್ರದೇಶದಲ್ಲಿ ಮರ ಕಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾದ ವಿಕ್ರಮ್ ಸಿಂಹ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆರೋಗ್ಯ ತಪಾಸಣೆಗಾಗಿ (Medical Checkup) ಹಾಸನದ ಹಿಮ್ಸ್ ಆಸ್ಪತ್ರೆಗೆ ವಿಕ್ರಮ್ ಸಿಂಹ ಅವರನ್ನು ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ತೆರಳುವ ಸಂದರ್ಭ ” ನಮ್ಮನ್ನ ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ. ನಮ್ಮ ಅಣ್ಣನನ್ನ ಟಾರ್ಗೆಟ್ ಮಾಡಲಾಗಿದ್ದು, ಇದೆಲ್ಲಾ ವ್ಯವಸ್ಥಿತವಾಗಿ ನಡೆಯುತ್ತಿರುವ ಪಿತೂರಿ ಎಂದು ವಿಕ್ರಂ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ. ಹೇಳುವುದಕ್ಕೆ ತುಂಬಾ ವಿಷಯಗಿಳಿದ್ದು, ಸೂಕ್ತ ಕಾಲ ಬರಲಿ ಎಲ್ಲಾ ಹೇಳುತ್ತೇನೆ. ಎಷ್ಟು ಪಿತೂರಿ ಮಾಡುತ್ತಿದ್ದಾರೆ ಎನ್ನುವುದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಅಷ್ಟೇ ಅಲ್ಲದೆ, ಯಾರ ಕೈವಾಡವಿದೆ ಎಂಬುದನ್ನು ಬಹಿರಂಗ ಪಡಿಸುವುದಾಗಿ ವಿಕ್ರಂ ಸಿಂಹ ಹೇಳಿದ್ದಾರೆ. ಯಾರನ್ನ ನೀವು ನಿಷ್ಟಾವಂತ ಅಧಿಕಾರಿ ಎನ್ನುತ್ತಿದ್ದಿರೋ ಅವರ ನಿಷ್ಟೆ ಯಾರಿಗೆ ಅನ್ನೋದನ್ನು ಹೇಳುತ್ತೇನೆ ಎಂದು ವಿಕ್ರಂ ಸಿಂಹ ಕಿಡಿ ಕಾರಿದ್ದಾರೆ.