Home latest ನವ ವಿವಾಹಿತನಿಗೆ ಹಲವು ರೌಂಡ್ ಗಳ ಸೆಕ್ಸ್ ಗೆ ಸ್ಪರ್ಧೆ ಒಡ್ಡಿದ ಫ್ರೆಂಡ್ಸ್ | ಮಿತಿಮೀರಿದ...

ನವ ವಿವಾಹಿತನಿಗೆ ಹಲವು ರೌಂಡ್ ಗಳ ಸೆಕ್ಸ್ ಗೆ ಸ್ಪರ್ಧೆ ಒಡ್ಡಿದ ಫ್ರೆಂಡ್ಸ್ | ಮಿತಿಮೀರಿದ ವೈಯಾಗ್ರ ಸೇವನೆ, ಇನ್ನು ಲೈಫ್ ಟೈಮ್ ನಿಮಿರುವಿಕೆ ಇಳಿಯಲ್ಲ ಎಂದ ವೈದ್ಯರು!

Hindu neighbor gifts plot of land

Hindu neighbour gifts land to Muslim journalist

ಗಂಡಸರ ಶಿಶ್ನ ನಿಮಿರುವಿಕೆಯ ಸಾಮಾನ್ಯ ಕ್ರಿಯೆಗೆ ಚಿಕಿತ್ಸೆ ನೀಡಲು ಬಳಸಲಾಗುವ ವಯಾಗ್ರ ಔಷಧವನ್ನು ಮಿತಿಮೀರಿದ ಸೇವನೆ ಮಾಡಿ ವಿವಾಹಿತನೊಬ್ಬಆಸ್ಪತ್ರೆ ಪಾಲಾದ ಘಟನೆ ನಡೆದಿದೆ.

ಕೆಲ ತಿಂಗಳ ಹಿಂದೆ ವಿವಾಹವಾಗಿದ್ದ ವ್ಯಕ್ತಿ ತನ್ನ ಸ್ನೇಹಿತರ ಸಲಹೆ ಮೇರೆಗೆ ವಯಾಗ್ರ ಸೇವಿಸಲು ಆರಂಭಿಸಿದ್ದ. ನಿಜ ವಿಷಯ ಏನೆಂದರೆ, ಗೆಳೆಯರು ಆತನಲ್ಲಿ ಹಲವು ರೌಂಡ್ ಸೆಕ್ಸ್ ಮಾಡಿ ನಿನ್ನ ಪೌರುಷ ಪ್ರೂವ್ ಮಾಡು ಅಂದಿದ್ದರು. ಮೊದಲೇ ಸಣ್ಣ ಮಟ್ಟಿನ ನಿಮಿರುವಿಕೆ ಸಮಸ್ಯೆಯಿಂದ ಆತ ಬಳಲುತ್ತಿದ್ದ. ಈಗ ಗೆಳೆಯರ ಶಿಫಾರಸು, ಮತ್ತು ಜಾಸ್ತಿ ರೌಂಡ್ಸ್ ಮಾಡಲು ಹೇಳಿದ ಒತ್ತಾಸೆಯ ಮೇರೆಗೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ವೈಯಾಗ್ರ ಸೇವಿಸಿ ಆತ ಸೆಕ್ಸ್ ಗೆ ತೊಡಗಿದ್ದ. ಹಾಗೆ ಆತ ಮದ್ದು ಸೇವಿಸಲು ಪ್ರಾರಂಭಿಸಿ ಆರೋಗ್ಯಕ್ಕೆ ತೊಂದರೆ ತಂದುಕೊಂಡಿದ್ದಾನೆ. ಆತನ ಮಿತಿಮೀರಿದ ಪ್ರಮಾಣದ ವಯಾಗ್ರ ಸೇವನೆ ಕೊನೆಗೆ ಆಸ್ಪತ್ರೆಗೆ ಸೇರಲು ಕಾರಣವಾಗಿದ್ದು ಮಾತ್ರವಲ್ಲ, ಜೀವನ ಪರ್ಯಂತ ಒಂದು ದೊಡ್ಡ ಸಮಸ್ಯೆಗೆ ಕಾರಣ ಆಗಿದೆ.

ಅವರು ತಮ್ಮ ಸ್ನೇಹಿತರ ಶಿಫಾರಸುಗಳ ಮೇರೆಗೆ ಆತ ದಿನಕ್ಕೆ, ನಾಲ್ಕು ಬಾರಿ ಒಟ್ಟು 200 ಮಿಗ್ರಾಂ ಆ ಔಷಧಿಯನ್ನು ಸೇವಿಸಿದ್ದ. ಇದು ನಿಗದಿತ ಪ್ರಮಾಣಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು. ಇದರಿಂದಾಗಿ ಆತನ ಶಿಶ್ನ ನಿರಂತರವಾಗಿ ನಿಮಿರಿ ನಿಂತಿದೆ. ಅದರ ಪರಿಣಾಮ ಆತ ಪತ್ನಿಯ ಜತೆ ಗಂಟೆಗಟ್ಟಲೆ ಮತ್ತು ಆಗಾಗ ಸಂಭೋಗ ನಡೆಸುತ್ತಿದ್ದ. ಮೊದಮೊದಲು ಎಲ್ಲವೂ ಚೆನ್ನಾಗಿತ್ತು. ಆದರೆ ಕೊನೆಗೆ ಸಂಕಟ ಶುರುವಾಗಿತ್ತು. ಮಾತ್ರೆ ತೆಗೆದುಕೊಂಡ 20 ದಿನಗಳ ನಂತರವೂ ನಿಮಿರುವಿಕೆ ಕಡಿಮೆಯಾಗಿಲ್ಲ. ಇದೆಲ್ಲ ಸರಣಿ ಸಂಭೋಗಗಳಿಂದ ಸಾಕಾಗಿ ಆತನ ಪತ್ನಿ ಕೂಡಾ ಸಣ್ಣ ಮಟ್ಟಿನ ಹುಷಾರು ತಪ್ಪಿದ್ದಳು. ಹಾಗೆ ಅಸಮಾಧಾನ ಮತ್ತು ನಿರಾಶೆಗೊಂಡ ಅವನ ಹೆಂಡತಿ ಆತನ್ನು ಬಿಟ್ಟು ತನ್ನ ತಾಯಿಯ ಮನೆಗೆ ಮರಳಿದ್ದಾಳೆ.

ಪುರುಷನ ಕುಟುಂಬದಿಂದ ಸಾಕಷ್ಟು ವಿನಂತಿ ಮಾಡಿದ ನಂತರ ಆತನ ಪತ್ನಿ ಹಿಂತಿರುಗಿದ್ದಾಳೆ. ಆದರೆ ತನ್ನ ಪತಿಯನ್ನು ಆಸ್ಪತ್ರೆಗೆ ಸೇರಿಸಿ ನಂತರ ಶೀಘ್ರದಲ್ಲೇ ಮತ್ತೆ ತಾಯಿ ಮನೆಗೆ ಮರಳಿದ್ದಾಳೆ.
ಇದೀಗ ಆಸ್ಪತ್ರೆಯ ವೈದ್ಯರು ಪುರುಷನಿಗೆ ಶಿಶ್ನ ಕೃತಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಆದಾಗ್ಯೂ, ಈ ಮನುಷ್ಯನನ್ನ ಜೀವನ ಪೂರ್ತಿ ಒಂದು ಸಮಸ್ಯೆ ಕಾಡಲಿದೆ. ಅದು ಜೀವನದುದ್ದಕ್ಕೂ ಇರುತ್ತದೆ.
ವೈದ್ಯರ ಪ್ರಕಾರ, ಈ ಮನುಷ್ಯನು ಮಕ್ಕಳನ್ನು ಹೊಂದಬಹುದಾದರೂ, ಅವನ ಶಿಶ್ನದ ಒತ್ತಡವು ಎಂದಿಗೂ ಕಡಿಮೆಯಾಗುವುದಿಲ್ಲ. ಆತನ ಶಿಶ್ನವು ಇನ್ನು ಯಾವಾಗಲೂ ನೆಟ್ಟಗೆ ನಿಂತಿರುತ್ತದೆ. ಈ ಉಬ್ಬುವಿಕೆಯನ್ನು ಮರೆಮಾಡಲು ಅವನು ಶಾಶ್ವತವಾಗಿ ಬಿಗಿಯಾದ ಬಟ್ಟೆಯನ್ನು ಧರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಜಾಸ್ತಿ ಮಾಡಲು ಹೋಗಿ ಮತ್ತು ಗೆಳೆಯರ ಮಾತು ಕೇಳಿ ಜೀವಕ್ಕೆ ಮತ್ತು ಜೀವ ಸೃಷ್ಟಿಯ ಅಂಗಕ್ಕೆ ಸಂಚಕಾರ ಬರಿಸಿಕೊಂಡಿದ್ದಾನೆ.