Home latest Kalaburgi: ನಿಲ್ದಾಣದಲ್ಲೇ ಬಸ್ ಚಾಲಕನ ಹತ್ಯೆ!! ಅಟ್ಟಾಡಿಸಿ ಕೊಂದ ದುಷ್ಕರ್ಮಿ;ಭೀಕರ ಕೃತ್ಯಕ್ಕೆ ಬೆಚ್ಚಿದ ಜನತೆ

Kalaburgi: ನಿಲ್ದಾಣದಲ್ಲೇ ಬಸ್ ಚಾಲಕನ ಹತ್ಯೆ!! ಅಟ್ಟಾಡಿಸಿ ಕೊಂದ ದುಷ್ಕರ್ಮಿ;ಭೀಕರ ಕೃತ್ಯಕ್ಕೆ ಬೆಚ್ಚಿದ ಜನತೆ

Murder of bus driver

Hindu neighbor gifts plot of land

Hindu neighbour gifts land to Muslim journalist

Murder of bus driver: ಕಲಬುರಗಿ:ಸರ್ಕಾರಿ ಬಸ್ ಚಾಲಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಬಸ್ ನಿಲ್ದಾಣದಲ್ಲೇ ಅಟ್ಟಾಡಿಸಿ ಕೊಂದ ಘಟನೆಯೊಂದು ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಘಟನೆಯನ್ನು ಕಣ್ಣಾರೆ ಕಂಡ ಅಸಾಹಾಯಕ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಹತ್ಯೆಗೀಡಾದ ಚಾಲಕನನ್ನು ಮೂಲತಃ ಅಫಜಲ್ ಪುರ ನಿವಾಸಿ, ಮಹಾದೇವ ನಗರದಲ್ಲಿ ವಾಸ್ತವ್ಯಹೂಡಿದ್ದ ನಾಗಯ್ಯಸ್ವಾಮಿ(45) ಎಂದು ಗುರುತಿಸಲಾಗಿದೆ.ಎಂದಿನಂತೆ ಘಟನೆ ನಡೆದ ದಿನವೂ ಟ್ರಿಪ್ ಮಾಡಿ (Murder of bus driver) ಕೊಂಡು ನಿಲ್ದಾಣಕ್ಕೆ ಬಂದಿದ್ದ ಚಾಲಕ ಬಸ್ ನಿಂದ ಇಳಿಯುತ್ತಿದ್ದಂತೆ ಅಲ್ಲೇ ದುಷ್ಕರ್ಮಿಗಳ ತಂಡ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ.

ದಾಳಿಯಲ್ಲಿ ಚಾಲಕನ ಬೆರಳು ತುಂಡಾಗಿದ್ದು, ರಕ್ತ ಹರಿಸಿಕೊಂಡೇ ನಿಲ್ದಾಣದಲ್ಲಿ ಜೀವ ಉಳಿಸಿಕೊಳ್ಳಲು ಓಡಿದ್ದು,ಕೂಡಲೇ ಅಟ್ಟಾಡಿಸಿದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಂದು, ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಇನ್ನೊಂದು ಬಸ್ಸಿನಲ್ಲಿಟ್ಟು ಪರಾರಿಯಾಗಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ ಅದಾಗಲೇ ಆತ ಅಸುನೀಗಿದ್ದ ಎನ್ನಲಾಗಿದೆ. ಘಟನೆಯನ್ನು ಕಣ್ಣಾರೆ ಕಂಡ ಅಸಹಾಯಕ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದು, ಪೊಲೀಸರು ಹಂತಕರ ಪತ್ತೆಗೆ ತಂಡಗಳನ್ನು ರಚಿಸಿ ಶೀಘ್ರ ಬಂಧನದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ: Personal loan: ನೀವು ಪರ್ಸನಲ್​ ಲೋನ್​ ತೆಗೆದುಕೊಳ್ಳಲು ಬಯಸುತ್ತೀರಾ? ಹಾಗಾದ್ರೆ ಈ ವಿಷಯ ನಿಮಗಾಗಿ