Home latest ನಾನು ವಿದ್ಯಾವಂತೆ, ನೀನು ಅವಿದ್ಯಾವಂತ…ನನಗೆ ನೀನು ಬೇಡ ಎನ್ನುತ್ತಾ ಹೂವಿನ ಹಾರವನ್ನೇ ಎಸೆದು ಹೊರ ನಡೆದ...

ನಾನು ವಿದ್ಯಾವಂತೆ, ನೀನು ಅವಿದ್ಯಾವಂತ…ನನಗೆ ನೀನು ಬೇಡ ಎನ್ನುತ್ತಾ ಹೂವಿನ ಹಾರವನ್ನೇ ಎಸೆದು ಹೊರ ನಡೆದ ವಧು !

Hindu neighbor gifts plot of land

Hindu neighbour gifts land to Muslim journalist

ಮದುವೆಗೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವೊಂದು ಫನ್ನಿ ವಿಡಿಯೋಗಳಾದರೆ, ಇನ್ನು ಕೆಲವು ಶಾಕಿಂಗ್ ವಿಡಿಯೋಗಳಾಗಿರುತ್ತವೆ. ಕೆಲವೊಮ್ಮೆ ಮದುವೆ ಮಂಟಪದಲ್ಲೇ ವಧು-ವರ ಮದುವೆ ರದ್ದು ಮಾಡಿಕೊಂಡ ವಿಡಿಯೋಗಳನ್ನು ನೋಡಿದ್ದೇವೆ.

ಈ ಮದುವೆ ವಿಡಿಯೋದಲ್ಲಿ ವಧು-ವರ ಮಂಟಪದ ವೇದಿಕೆಯಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ವರ, ವಧುವಿನ ಕೊರಳಿಗೆ ಹಾರ ಹಾಕಿರುತ್ತಾನೆ. ಇನ್ನೇನು ವಧು ಹಾರ ಹಾಕಬೇಕು ವೇದಿಕೆಯಲ್ಲೇ ಅನ್ನುವಷ್ಟರಲ್ಲಿ ಮಾತಿನ ಚಕಮಕಿ ನಡೆಯುತ್ತದೆ. ಮದುವೆ ಯಾಕೆ ಮಾಡಿಕೊಳ್ಳಲ್ಲ ಎಂದು ಯಾರೋ ವಧುವನ್ನು ಪ್ರಶ್ನಿಸುವುದು ವಿಡಿಯೋದಲ್ಲಿ ಇದೆ. ಇದಕ್ಕೆ ಉತ್ತರಿಸಿದ ವಧು, ವರ ಅನಕ್ಷರಸ್ಥ, ನಾನು ಹೇಗೆ ಮದುವೆ ಮಾಡಿಕೊಳ್ಳಲಿ, ನಾನು ವಿದ್ಯಾವಂತೆ ಮತ್ತು ಬಿ.ಎಡ್ ಮಾಡಿದ್ದೇನೆ ಎಂದು ಈ ಮದುವೆ ಬೇಡ ಎಂದು ನಾನು ಮೊದಲೇ ತಿಳಿಸಿದ್ದೇನೆ ಎಂದು ಹಾರವನ್ನು ಕೆಳಗೆ ಎಸೆದು ಹೋಗುತ್ತಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.