Home latest ಹಿಂದೂ ಎಂದು ಯುವತಿಯ ಮನೆಯವರನ್ನು ನಂಬಿಸಿ ಬಾದಾಮಿಗೆ ಬಸ್ ಹತ್ತಲಿದ್ದ ಅನ್ಯಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ...

ಹಿಂದೂ ಎಂದು ಯುವತಿಯ ಮನೆಯವರನ್ನು ನಂಬಿಸಿ ಬಾದಾಮಿಗೆ ಬಸ್ ಹತ್ತಲಿದ್ದ ಅನ್ಯಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಭಜರಂಗದಳ

Hindu neighbor gifts plot of land

Hindu neighbour gifts land to Muslim journalist

ತಾನೊಬ್ಬ ಹಿಂದೂ ಎಂದು ಯುವತಿಯೋರ್ವಳ ಪೋಷಕರನ್ನು ನಂಬಿಸಿ ಮಂಗಳೂರಿನಿಂದ ಬಾದಾಮಿ ಗೆ ಹೊರಟಿದ್ದ ಅನ್ಯಕೋಮಿನ ಜೋಡಿಯೊಂದನ್ನು ಭಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಬಾದಾಮಿಯ ಯುವತಿಯು ಇನೋಳಿಯಲ್ಲಿರುವ ಕಾಲೇಜಿಗೆ ಸೇರ್ಪಡೆಯಾಗಲು ಬಂದಿದ್ದು, ಈ ವೇಳೆ ಆಕೆಯ ಮನೆಯವರನ್ನು ನಾನೊಬ್ಬ ಹಿಂದೂ ಎಂದು ನಂಬಿಸಿ ತನ್ನೊಂದಿಗೆ ಕಳುಹಿಸುವಂತೆ ಹೇಳಿದ್ದು, ಅದರಂತೆ ಯುವತಿಯ ಪೋಷಕರು ಈತನೊಂದಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಬಳಿಕ ಯುವಕನು ಯುವತಿಯ ಅರಿವಿಗೆ ಬರದಂತೆ ಒಂದೇ ಕ್ಯಾಬಿನ್ ನಲ್ಲಿ ಸ್ಲೀಪಿಂಗ್ ಕೋಚ್ ಬುಕ್ ಮಾಡಿದ್ದು, ವಿಷಯ ತಿಳಿಯುತ್ತಿದ್ದಂತೆ ಭಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಅನ್ಯಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.