Home latest ಶಾಕಿಂಗ್ ನ್ಯೂಸ್! ತನ್ನ ಮೇಲೆ ಸಿಟ್ಟುಗೊಂಡು ತವರು ಮನೆ ಸೇರಿದ ಹೆಂಡತಿಯನ್ನು ಕೊನೆ ಬಾರಿಗೆ ತಬ್ಬಿಕೊಂಡು...

ಶಾಕಿಂಗ್ ನ್ಯೂಸ್! ತನ್ನ ಮೇಲೆ ಸಿಟ್ಟುಗೊಂಡು ತವರು ಮನೆ ಸೇರಿದ ಹೆಂಡತಿಯನ್ನು ಕೊನೆ ಬಾರಿಗೆ ತಬ್ಬಿಕೊಂಡು ಜಿಲೆಟಿನ್ ಸ್ಫೋಟಿಸಿದ ಗಂಡ |

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಇಷ್ಟೆಲ್ಲಾ ಮಾಡಿಸುತ್ತಾ ಅಂತಾ ಕೆಲವೊಮ್ಮೆ ನಾವು ಬೆರಗಾಗುವುದು ನಿಜ. ಆದರೆ ಪ್ರೀತಿ ಎಷ್ಟು ಖುಷಿ ಕೊಡುತ್ತೋ ಅಷ್ಟೇ ದುಃಖನೂ ಕೊಡುತ್ತೇ ಎನ್ನುವುದಕ್ಕೆ ಈ ಘಟನೆ‌ ಸಾಕ್ಷಿ.

ತನ್ನನ್ನು ಬಿಟ್ಟು ಹೋಗಿದ್ದ ಪತ್ನಿಯನ್ನು ತನ್ನೊಂದಿಗೆ ಮತ್ತೆ ಸಂಸಾರ ಮಾಡುವಂತೆ ಮನವೊಲಿಸಲು ಸಾಧ್ಯವಾಗದ ಪತಿರಾಯ ಒಂದು ಆಘಾತಕಾರಿ ನಿರ್ಧಾರ ತೆಗೆದುಕೊಂಡಿದ್ದಾನೆ. ಹೆಂಡತಿಯನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಆತನಿಗೆ ಹೆಂಡತಿ ಸಿಟ್ಟು ಮಾಡಿಕೊಂಡು ತವರು ಮನೆ ಸೇರಿದ್ದನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಆದರೂ ಆಕೆಯನ್ನು ಎಷ್ಟು ಮನವೊಲಿಸಿ ಬಾ ಎಂದರೂ ಒಪ್ಪದಿದ್ದಾಗ ಕೊನೆಯ ಬಾರಿಗೆ ನಿನ್ನನ್ನು ತಬ್ಬಿಕೊಳ್ಳಬೇಕೆಂದು ತನ್ನ ಆಸೆಯನ್ನು ಹೇಳಿದಾಗ, ಒಪ್ಪಿದ ಆಕೆ ಅಪ್ಪಿಕೊಳ್ಳುವಾಗ ಸ್ಫೋಟಕವನ್ನು ಸ್ಫೋಟಿಸಿದ್ದಾನೆ. ಇದರಿಂದ ಇಬ್ಬರ ದೇಹ ಕೂಡಾ ಗುರುತು ಸಿಗಲಾರದಷ್ಟು ಛಿದ್ರಗೊಂಡಿದೆ.

ಗುಜರಾತಿನ ಅರ್ವಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಮೊಡಸಾದಿಂದ ಸುಮಾರು 30 ಕಿ ಮೀ ದೂರದಲ್ಲಿರುವ ಮೇಘರಾಜ್ ತಾಲೂಕಿನ ಬಿಟಿ ಛಪ್ರಾ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲವೊಂದು ಕಡ್ಡಿಗಳು, ಡಿಟೋನೇಟರ್ ಸ್ವಿಚ್ ಮತ್ತು ಸಂಪರ್ಕದ ತಂತಿಗಳನ್ನು , ಲಾಲಾ ಪಾಗಿ ( 47) ಎಂಬಾತ ತನ್ನ‌ದೇಹಕ್ಕೆ ಸುತ್ತಿಕೊಂಡು ತನ್ನ ಹೆಂಡತಿ ಶಾರದಾ ಬೆನ್ ( 43) ಳನ್ನು ಮಾತನಾಡಿಸಲೆಂದು ಅತ್ತೆ ಮನೆಗೆ ಹೋಗಿದ್ದ. ಅಲ್ಲಿ ಹೋಗಿ ಈ ಕೃತ್ಯ ಮಾಡಿಕೊಂಡಿದ್ದಾನೆ.

ಹೆಂಡತಿ ತನ್ನ ಮೇಲೆ ಕೋಪಗೊಂಡಿದ್ದಾಗಿ ಹಾಗೂ ಆಕೆಯನ್ನು ಮನವೊಲಿಸಿ ಕರೆತರಲು ವಿಫಲರಾಗಿದ್ದ ಹತಾಶೆಯಲ್ಲಿ ಪಾಗಿ ಈ ರೀತಿ ಮಾಡಿದ್ದಾನೆ.

ಪಾಗಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ 20 ವರ್ಷದ ಹಿಂದೆನೇ ಮದುವೆಯಾಗಿತ್ತು. ಶಾರದಾಬೆನ್ ಎಂಬಾಕೆಯನ್ನು ವಿವಾಹವಾಗಿದ್ದ. ಹೆಂಡತಿಗೆ ಪದೇ ಪದೇ ಥಳಿಸುತ್ತಿದ್ದರಿಂದ ಆಕೆ ಕಳೆದ ಒಂದು ತಿಂಗಳಿನಿಂದ ತನ್ನ ತಾಯಿ ಮನೆ ಸೇರಿಕೊಂಡಿದ್ದಳು.

ಹೆಂಡತಿ ತನ್ನ ಮನೆಯಿಂದ ಹೊರಬಂದ ತಕ್ಷಣವೇ ಆಕೆಯನ್ನು ಕೊನೆಯ ಬಾರಿ ತಬ್ಬಿಕೊಳ್ಳುವ ಆಸೆ ವ್ಯಕ್ತಪಡಿಸಿದ ಪಾಗಿ ಆಕೆಯನ್ನು ತಬ್ಬಿಕೊಂಡಾಗ ಡಿಟೋನೇಟರ್ ಸ್ವಿಚ್ ಒತ್ತಿದ್ದಾನೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪೊಲೀಸರು ಪಾಗಿ ವಿರುದ್ಧ ಕೊಲೆ ಪ್ರಕರಣ ಕೇಸ್ ದಾಖಲು ಮಾಡಿದ್ದಾರೆ. ಪಾಗಿ ಬಳಸಿದ್ದ ಸ್ಫೋಟಕಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.