Home latest ತನ್ನ ಚಿಕ್ಕಮ್ಮನನ್ನೇ ಮದುವೆಯಾದ ಯುವಕ| ಅಮ್ಮನ ಸ್ಥಾನದಲ್ಲಿರುವವಳನ್ನು ಮದುವೆಯಾದ ಮಗನನ್ನು ಕಂಡು ಅಳುತ್ತಾ ನಿಂತ...

ತನ್ನ ಚಿಕ್ಕಮ್ಮನನ್ನೇ ಮದುವೆಯಾದ ಯುವಕ| ಅಮ್ಮನ ಸ್ಥಾನದಲ್ಲಿರುವವಳನ್ನು ಮದುವೆಯಾದ ಮಗನನ್ನು ಕಂಡು ಅಳುತ್ತಾ ನಿಂತ ಹೆತ್ತಮ್ಮ!

Hindu neighbor gifts plot of land

Hindu neighbour gifts land to Muslim journalist

ಸಂಬಂಧಗಳು ವಿಚಿತ್ರವಾಗಿರುತ್ತದೆ ಕೆಲವೊಮ್ಮೆ. ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಹಾಗೆಯೇ ಇಲ್ಲೊಬ್ಬ ತನ್ನ ತಾಯಿಯ ಸ್ಥಾನದಲ್ಲಿರುವ ಚಿಕ್ಕಮ್ಮ ನನ್ನೇ ಪ್ರೀತಿಸಿ ಮದುವೆಯಾಗಿದ್ದಾನೆ.

ಈ ಘಟನೆ ನಡೆದಿರುವುದು ಝಾರ್ಕಾಂಡ್ ನಲ್ಲಿ. ಅದೆಂಥಾ ಪ್ರೀತಿಯೋ ಇವರಿಗೆ ತಮ್ಮ ನಡುವಿನ ಸಂಬಂಧ ಕೂಡಾ ಪ್ರೀತಿಗಿಂತ ದೊಡ್ಡದಲ್ಲ ಎಂದು ಸಾಬೀತು ಮಾಡಿದ್ದಾರೆ.

ತಾಯಿಯ ತಂಗಿಯನ್ನು ಈ ವ್ಯಕ್ತಿ ಮದುವೆಯಾಗಿದ್ದಾನೆ. ಹೈದರಾಬಾದ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನೊಂದಿಗೆ ಪ್ರೇಮವಿವಾಹ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.

ತನ್ನ ಚಿಕ್ಕಮ್ಮನೊಂದಿಗೆ ಹರುವಾ ನದಿಯ ದಡದಲ್ಲಿರುವ ಶಿವ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಈ ವಿವಾಹದ ಬಗ್ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದಾಗ ನವ ದಂಪತಿಗಳು ಮನೆ ಬಿಟ್ಟು ಓಡಿ ಹೋಗಬೇಕಾಯಿತು. ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರಿಂದ ತಲೆಮರೆಸಿಕೊಂಡಿದ್ದ ಇವರು ಸದರ್ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾರೆ. ಯುವಕ ಹಾಗೂ ಯುವತಿ ವಯಸ್ಕರಾಗಿದ್ದು ಪೊಲೀಸರು ಕೂಡಾ ಇಬ್ಬರ ಕುಟುಂಬದವರನ್ನು ಕರೆಸಿ ವಿವರಣೆ ನೀಡಿದ್ದಾರೆ.

ಪೊಲೀಸ್ ಠಾಣೆಯಿಂದ ಚಿಕ್ಕಮ್ಮನ ಜೊತೆ ಬಂದ ಮಗನನ್ನು ನೋಡಿದ ತಾಯಿ ಅಳುತ್ತಾ ನಿಂತಿದ್ದರು. ತಾಯಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾಳೆ. ನಿಮ್ಮಿಬ್ಬರ ಸಂಬಂಧ ಏನು ಎಂದು. ಆದರೆ ಯಾರ ಮಾತಿಗೂ ಜಗ್ಗದ ಈ ಯುವ ಪ್ರೇಮಿಗಳು ಒಟ್ಟಿಗೆ ಬಾಳುವ ಕನಸನ್ನು ಕಾಣುತ್ತಿದ್ದಾರೆ.