Home latest Wifes Affair : ಕಾರಿನಲ್ಲಿದ್ದ ಜಿಪಿಎಸ್‌ನಿಂದ ಗೊತ್ತಾಯ್ತು ಗಂಡನಿಗೆ ಹೆಂಡತಿಯ ಕಾಮದಾಟ! ಹೇಗೆ ಅಂತೀರಾ? ಇಲ್ಲಿದೆ...

Wifes Affair : ಕಾರಿನಲ್ಲಿದ್ದ ಜಿಪಿಎಸ್‌ನಿಂದ ಗೊತ್ತಾಯ್ತು ಗಂಡನಿಗೆ ಹೆಂಡತಿಯ ಕಾಮದಾಟ! ಹೇಗೆ ಅಂತೀರಾ? ಇಲ್ಲಿದೆ ವಿಶೇಷ ಸುದ್ದಿ!!

Wifes Affair

Hindu neighbor gifts plot of land

Hindu neighbour gifts land to Muslim journalist

Wifes Affair : ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅಪರಾಧ ಪ್ರಕರಣಗಳನ್ನ ಭೇದಿಸುವಲ್ಲಿ ಏನೇನೋ ತಂತ್ರಜ್ಞಾನಗಳು ನೆರವಾಗುತ್ತವೆ. ಇಂದು ಜಿಪಿಎಸ್ (Global Positioning System) ವ್ಯವಸ್ಥೆ ಅದೆಷ್ಟು ನೆರವಾಗುತ್ತದೆ ಎಂಬುದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ಮುನ್ನಲೆಗೆ ಬಂದಿದೆ.

ಈ ಜಿಪಿಎಸ್​ನಿಂದಾಗಿ (GPS) ನಮಗೆ ಗೊತ್ತೇ ಇಲ್ಲದ ಊರಿಗೆ ಹೋಗಲು ಅನುವು ಮಾಡಿಕೊಡುತ್ತದೆ. ಜಿಪಿಎಸ್​​ನ್ನು ನಿಮ್ಮ ಮೊಬೈಲ್​, ವಾಚ್​, ಕಾರುಗಳಿಗೂ ಅಳವಡಿಸಿಕೊಳ್ಳುವಷ್ಟು ಸೌಲಭ್ಯಗಳಿವೆ. ಸುಲಭವಾಗಿ ಎಲ್ಲೆಡೆ ಸಂಚಾರ ಮಾಡಲು ಮನುಷ್ಯನಿಗೆ ಜಿಪಿಎಸ್​ (GPS) ಅವಕಾಶ ಕಲ್ಪಿಸಿದೆ. ಇದೀಗ, ಜಿಪಿಎಸ್​ ಮೂಲಕ ವ್ಯಕ್ತಿಯೊಬ್ಬ ಆತನ ಹೆಂಡತಿ ಮಾಡುತ್ತಿದ್ದ ವಂಚನೆಯನ್ನು ಕಂಡುಹಿಡಿಯಲು ಅನುವು ಮಾಡಿಕೊಟ್ಟಿದೆ. ಅಷ್ಟಕ್ಕೂ ಏನು ಈ ಕಹಾನಿ ಅಂತೀರಾ?

ತನ್ನ ಪತ್ನಿಗೆ(Wifes affair) ಅಕ್ರಮ ಸಂಬಂಧದ ಇದ್ದ ಬಗ್ಗೆ ಜಿಪಿಎಸ್​​ನಿಂದ (GPS tracker) ಮೂಲಕ ಪತಿಗೆ (Husband)ಮಾಹಿತಿ ತಿಳಿದಿದ್ದು, ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪತಿ ಬೆಂಗಳೂರಿನ ಮಹಾಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ(Police Station) ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ದೂರು ನೀಡಿದ ವ್ಯಕ್ತಿ 2020ರಲ್ಲಿ ಕಾರು (Car)ಖರೀದಿ ಮಾಡಿದ್ದು, ಅದರಲ್ಲಿ ಜಿಪಿಎಸ್​ ಟ್ರ್ಯಾಕಿಂಗ (GPS Tracking) ವ್ಯವಸ್ಥೆ ಕೂಡ ಇತ್ತಂತೆ. ಹೀಗಾಗಿ, ವ್ಯಕ್ತಿ ಜಿಪಿಎಸ್ ಟ್ರ್ಯಾಕರ್ ಅನ್ನು ಮೊಬೈಲ್​ಗೆ ಕನೆಕ್ಟ್ ಮಾಡಿಟ್ಟುಕೊಂಡಿದ್ದಾರೆ. ಆದ್ರೆ, ಈ ವಿಷಯವನ್ನು ಪತಿ ಯಾರಿಗೂ ತಿಳಿಸಿಲ್ಲ. ಒಂದು ವೇಳೆ ಪತ್ನಿಗೆ ಹೇಳಿದ್ದರೆ ಬಹುಶಃ ಹೆಂಡತಿಯ ನಾಟಕದ ಬಗ್ಗೆ ಪತಿಗೆ ತಿಳಿಯಲು ಅವಕಾಶವೇ ಸಿಗುತ್ತಿರಲಿಲ್ಲವೇನೋ? ಈ ಜೋಡಿಗೆ 2014ರಲ್ಲಿ ಮದುವೆಯಾಗಿದ್ದು, 6ವರ್ಷದ ಮಗಳು ಕೂಡ ಇದ್ದರೂ ಕೂಡ ವಿವಾಹಿತ ಮಹಿಳೆ ಪರ ಪುರುಷನ ತೆಕ್ಕೆಯಲ್ಲಿ ಲೋಕ ಮರೆತಿದ್ದಾಳೆ.

ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರಂತೆ. ಹೆಚ್ಚಿನ ಸಂದರ್ಭದಲ್ಲಿ ರಾತ್ರಿಪಾಳಿಯಲ್ಲೇ(NightShift) ಕೆಲಸ ಮಾಡುತ್ತಿದ್ದರಂತೆ. ಹೀಗೆ ಇತ್ತೀಚೆಗೆ ಒಂದು ದಿನ ಎಂದಿನಂತೆ ರಾತ್ರಿ ಕೆಲಸ ಮಾಡುತ್ತಿದ್ದವರಿಗೆ ಮೊಬೈಲ್​ಗೆ ಜಿಪಿಎಸ್ ಟ್ರ್ಯಾ ಕರ್ ಕನೆಕ್ಟ್​ ಆಗಿದ್ದರಿಂದ ಇವರ ಕಾರು ಮನೆಯಿಂದ ಹೊರಗೆ ಹೋಗಿದ್ದು ಅರಿವಿಗೆ ಬಂದಿದೆ. ಅರೇ, ಈ ಮಧ್ಯರಾತ್ರಿಯಲ್ಲಿ(Midnight) ತನ್ನ ಕಾರನ್ನೂ ಎಲ್ಲಿಗೆ ಒಯ್ಯಲಾಗುತ್ತಿದೆ ಎಂಬ ಅನುಮಾನದ ಜೊತೆಗೆ ಕುತೂಹಲ ಕೂಡ ವ್ಯಕ್ತಿಗೆ ಉಂಟಾಗಿದೆ. ಹೀಗೆ ಇದನ್ನು ಗಮನಿಸುತ್ತಿದ್ದವರಿಗೆ, ಕಾರು ಹೋಟೆಲ್​(Hotel) ಒಂದರ ಮುಂದೆ ನಿಂತಿದ್ದು, ಬಳಿಕ ಮುಂಜಾನೆ 5ಗಂಟೆವರೆಗೆ ಕಾರು ಅಲ್ಲೇ ಇದ್ದದ್ದು ಕೂಡ ಅರಿವಿಗೆ ಬಂದಿದೆ.

5ಗಂಟೆ ಹೊತ್ತಿಗೆ ವಾಪಸ್ ಹೊರಟು ಮನೆಗೆ ತಲುಪಿದೆ. ಏನು ವಿಚಾರ ಎಂದು ಸಂಶಯ ಉಂಟಾಗಿ, ಹೋಟೆಲ್​ಗೆ ಹೋಗಿ ವಿಚಾರಿಸಿದ ಸಂದರ್ಭ ಈತನ ಪತ್ನಿ ತಮ್ಮ ವೋಟರ್ ಐಡಿ(Voter Id) ಬಳಸಿಕೊಂಡು ಹೋಟೆಲ್​​ನಲ್ಲಿ ರೂಮ್​ ಬುಕ್​ ಮಾಡಿ ಇನ್ನೊಬ್ಬನೊಂದಿಗೆ ರೂಮ್​ನಲ್ಲಿ ರಾತ್ರಿಯೆಲ್ಲ ತಂಗಿದ್ದಾಳೆ ಎಂಬ ವಿಚಾರ ಬಯಲಾಗಿ ಆ ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧವಿದ್ದ ವಿಷಯ ಬಯಲಾಗಿದೆ.

ಇತ್ತ ವಿವಾಹಿತ ಮಹಿಳೆಗೆ ಪತಿಗೆ ವಿಷಯ ಗೊತ್ತಾಗಿದೆ ಎಂಬ ವಿಚಾರ ತಿಳಿದ ಮೇಲೆ, ಪತ್ನಿ ಮತ್ತು ಆಕೆಯ ಪ್ರಿಯಕರ ಇಬ್ಬರು ವ್ಯಕ್ತಿಗೆ ಬೆದರಿಕೆ ಹಾಕಿದ್ದರಂತೆ. ಹೀಗಾಗಿ, ಪತಿ ತನ್ನ ಪತ್ನಿಯ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ ಬೆದರಿಕೆಯ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಆ ಮಹಿಳೆಗೆ ನೋಟಿಸ್ ಕೊಡಲಾಗಿದ್ದು, ವಿಚಾರಣೆಗೆ ಕರೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Aadhar – PAN Card Link: ನಿಮ್ಮ ಆಧಾರ್ ನಂಬರ್ ಪ್ಯಾನ್ ಕಾರ್ಡ್ ನೊಂದಿಗೆ ಜೋಡಣೆ ಆಗಿದೆಯಾ ಎಂಬುದನ್ನು ಹೀಗೆ ತಿಳಿಯಿರಿ