Home latest ಕಾಳುಮೆಣಸು ಕೊಯ್ಯುವಾಗಲೇ ಹುಲಿ ದಾಳಿ | ವ್ಯಕ್ತಿಯನ್ನು ಎರಡು ಭಾಗ ಮಾಡಿದ ಹೆಬ್ಬುಲಿ| ಶವ ಇಟ್ಟು...

ಕಾಳುಮೆಣಸು ಕೊಯ್ಯುವಾಗಲೇ ಹುಲಿ ದಾಳಿ | ವ್ಯಕ್ತಿಯನ್ನು ಎರಡು ಭಾಗ ಮಾಡಿದ ಹೆಬ್ಬುಲಿ| ಶವ ಇಟ್ಟು ಗ್ರಾಮಸ್ಥರಿಂದ ಪ್ರತಿಭಟನೆ!

Hindu neighbor gifts plot of land

Hindu neighbour gifts land to Muslim journalist

ಕಾಳು ಮೆಣಸು ಕೊಯ್ಯುವ ಸಂದರ್ಭದಲ್ಲಿ ವ್ಯಕ್ತಿಯೋರ್ವನ ಮೇಲೆ ಹುಲಿ ದಾಳಿ ಮಾಡಿದ್ದು, ವ್ಯಕ್ತಿಯನ್ನು ಸೀಳಿ ಹಾಕಿದ ಘಟನೆ ವಿರಾಜಪೇಟೆ ತಾಲ್ಲೂಕಿನ ರುದ್ರಗುಪ್ಪೆ ಸಮೀಪದ ವಿ. ಬಾಡಗ ಗ್ರಾಮದಲ್ಲಿ ನಡೆದಿದೆ.

ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದೆ. ಮೃತರನ್ನು ಗದ್ದೆಮನೆ ಗಣೇಶ್ ಗುರುತಿಸಲಾಗಿದೆ. ಸೋಮವಾರ (29) ಸಂಜೆ ಎಂದು ಘಟನೆ ನಡೆದಿದೆ.

ಗ್ರಾಮಸ್ಥರು, ರೈತ ಸಂಘದ ಪ್ರತಿನಿಧಿಗಳು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಹುಲಿಯನ್ನು ಹಿಡಿಯಬೇಕು, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಆಗ್ರಹ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರೀ ಜನರು ಸೇರಿದ್ದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ಇಂದು ಅರಣ್ಯ ಸಿಬಂದಿ ಸ್ಥಳದಲ್ಲಿ ಸೇರಿದ್ದು ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಎರಡು ಸಾಕಾನೆಗಳನ್ನು ಬಳಸಿ ಹುಲಿ ಸೆರೆಗೆ ಕಾರ್ಯಾಚರಣೆ ಶುರು ಆಗಿದೆ. ಪಶು ವೈದ್ಯರು, ಅರಿವಳಿಕೆ ಮದ್ದು ನೀಡುವ ವೈದ್ಯರು ಸ್ಥಳಕ್ಕೆ ಬಂದಿದ್ದಾರೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಗ್ರಾಮಸ್ಥರು ಹುಲಿಯನ್ನು ಕೊಲ್ಲಲು ಅವಕಾಶ ನೀಡಲು ಒತ್ತಾಯಿಸಿದ್ದಾರೆ. ಜನರ ಆಕ್ರೋಶ ಕಡಿಮೆ ಆಗುತ್ತಿಲ್ಲ. ಮೃತ ಗಣೇಶ್ ಶವವನ್ನು ಇವತ್ತು ಕೂಡಾ ಇರಿಸಿದ್ದು, ಜವಾಬ್ದಾರಿ ಇಲ್ಲದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.