Home latest ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ಕೈಯಲ್ಲಿ ಮಚ್ಚು ಹಿಡಿದುಕೊಂಡು ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಯುವಕ |

‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ಕೈಯಲ್ಲಿ ಮಚ್ಚು ಹಿಡಿದುಕೊಂಡು ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಯುವಕ |

Hindu neighbor gifts plot of land

Hindu neighbour gifts land to Muslim journalist

ದೇವಸ್ಥಾನದ ಒಳಗೆ ವ್ಯಕ್ತಿಯೋರ್ವ ಕೈಯಲ್ಲಿ ಮಚ್ಚು ಹಿಡಿದುಕೊಂಡು ಏಕಾಏಕಿ ನುಗ್ಗಿ ಆತಂಕಕಾರಿ ವಾತಾವರಣ ನಿರ್ಮಾಣ ಮಾಡಿದ ಘಟನೆಯೊಂದು ಉತ್ತರ ಪ್ರದೇಶದ ಗೋರಖನಾಥ ಮಂದಿರದಲ್ಲಿ ನಡೆದಿದೆ.

ಈ ಘಟನೆ ಎಪ್ರಿಲ್ 3 ರಂದು ಸಂಜೆ 7.45 ರ ಸುಮಾರಿಗೆ ನಡೆದಿದೆ. ಅಹ್ಮದ್ ಮುರ್ತಜಾ ಅಬ್ಬಾಸಿ ಎಂಬ ಯುವಕ ಮಂದಿರದ ಪ್ರವೇಶದ ಬಳಿ ಮೊದಲು ತಪಾಸಣೆಗೆ ಒಳಗಾಗಲು ನಿರಾಕರಿಸಿದ್ದಾನೆ. ನಂತರ ಹರಿತವಾದ ಆಯುಧ ತೆಗೆದು ಪೊಲೀಸರ ವಿರುದ್ಧ ಬೀಸಿ, ಇಬ್ಬರನ್ನು ಗಾಯಗೊಳಿಸಿದ್ದಾನೆ. ಈ ವೇಳೆ ಅಲ್ಲಾಹು ಅಕ್ಬರ್ ಎಂಬ ಘೋಷಣೆ ಕೂಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಡೆಗೇ ಈತನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಯುವಕ ಐಐಟಿ ಬಾಂಬೆಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಪದವೀಧರ. ಪೊಲೀಸರಿಗೆ ಸಿಕ್ಕಿ ಬಿದ್ದ ನಂತರ ವಿಚಾರಣೆಯಲ್ಲಿ ತಾನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾನೆ.

ಈತನ ಈ ಹೇಳಿಕೆಯನ್ನು ಏಕಾಏಕಿ ನಂಬಬಾರದು ಎಂಬ ಮಾತು ಸಾಮಾಜಿಕ ಮಾಧ್ಯಮದಲ್ಲಿ ವಾದ ಒಂದು ಎದ್ದಿದೆ.