Home latest ಬರೋಬ್ಬರಿ 500 ವಿದ್ಯಾರ್ಥಿನಿಗಳ ಮಧ್ಯೆ ತಾನೊಬ್ಬನೇ ವಿದ್ಯಾರ್ಥಿ | ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿ, ಮುಂದೇನಾಯ್ತು?

ಬರೋಬ್ಬರಿ 500 ವಿದ್ಯಾರ್ಥಿನಿಗಳ ಮಧ್ಯೆ ತಾನೊಬ್ಬನೇ ವಿದ್ಯಾರ್ಥಿ | ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿ, ಮುಂದೇನಾಯ್ತು?

Hindu neighbor gifts plot of land

Hindu neighbour gifts land to Muslim journalist

ಪರೀಕ್ಷೆ ಬರೆಯುವಾಗ ಕೆಲವು ವಿದ್ಯಾರ್ಥಿಗಳಿಗೆ ಅಳುಕು ಇರುತ್ತೆ. ಒಂದು ರೀತಿಯಲ್ಲಿ ಭಯನೂ ಕಾಡುತ್ತೆ. ಅಷ್ಟು ಮಾತ್ರವಲ್ಲದೇ ವರ್ಷಪೂರ್ತಿ ತನ್ನ ಜೊತೆ ಕಲಿತ ತನ್ನ ಸಹಪಾಠಿಗಳು ಬೇರೆ ಕ್ಲಾಸ್‌ ರೂಂ ನಲ್ಲಿ ಪರೀಕ್ಷೆ ಬರೆಯಲೆಂದು ಹೋದಾಗ ಮನಸ್ಸು ಸ್ವಲ್ಪ ತಳಮಳಗೊಳ್ಳುವುದು ಸಹಜ. ಆದರೂ ಇದೆಲ್ಲಾ ಸಹಜ ಎಂಬಂತೆ ಕೆಲವೊಂದು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಬರುತ್ತಾರೆ.

ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪರೀಕ್ಷಾ ಕೊಠಡಿ ತಲುಪುತ್ತಿದ್ದಂತೆ ತಲೆತಿರುಗಿ ಬಿದ್ದ ಘಟನೆಯೊಂದು ನಡೆದಿದೆ. ಈತ ಪರೀಕ್ಷಾ ಕೊಠಡಿಗೆ ಬಂದ ಕೂಡಲೇ ಕಂಡಿದ್ದು ಕೇವಲ ವಿದ್ಯಾರ್ಥಿನಿಯರು. ಅದು ಕೂಡಾ ಬರೋಬ್ಬರಿ 500 ವಿದ್ಯಾರ್ಥಿನಿಯರು. ಇಷ್ಟೊಂದು ಹೆಣ್ಮಕ್ಕಳನ್ನು ನೋಡಿ, ಒಬ್ಬನೇ ಒಬ್ಬ ವಿದ್ಯಾರ್ಥಿ ಇಲ್ಲದೇ ಇರುವುದನ್ನು ಕಂಡ ವಿದ್ಯಾರ್ಥಿ ಬಾಲಕ ತಳಮಳಗೊಂಡಿದ್ದಾನೆ. ತಾನೊಬ್ಬನೇ ಹುಡುಗ ಈ ಪರೀಕ್ಷಾ ಹಾಲ್‌ನಲ್ಲಿ ಎಂದು ತಿಳಿಯುತ್ತಲೇ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಈ ಘಟನೆ ಬಿಹಾರದಲ್ಲಿ ನಡೆದಿದೆ. 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಣಿ ಶಂಕರ್‌ ಎಂಬಾತ ಆಲಂ ಇಕ್ಬಾಲ್‌ ಕಾಲೇಜ್‌ ವಿದ್ಯಾರ್ಥಿಯಾಗಿದ್ದು, ಬ್ರಿಲಿಯಂಟ್‌ ಸ್ಕೂಲ್‌ ಎಂಬ ಇನ್ನೊಂದು ಸ್ಕೂಲ್‌ಗೆ ಪರೀಕ್ಷೆ ಬರೆಯಲು ಬಂದಿದ್ದ. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಬರೀ ಹುಡುಗಿಯರು ಇರುವುದನ್ನು ವಿದ್ಯಾರ್ಥಿ ಕಂಡು ಬೆಚ್ಚಿಬಿದ್ದಿದ್ದು, ಗಾಬರಿಗೊಂಡಿದ್ದಾನೆ. ಕೂಡಲೇ ಆತ ಪ್ರಜ್ಞೆ ತಪ್ಪಿದ್ದಾನೆ. ಆತನಿಗೆ ಜ್ವರ ಕೂಡಾ ಬಂದಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ವಿದ್ಯಾರ್ಥಿ ಚೇತರಿಸಿಕೊಳ್ಳುತ್ತಿದ್ದಾನೆ.