Home latest Gas Cylinder ಡೆಲಿವರಿ ಶುಲ್ಕ ನೀಡುವಂತಿಲ್ಲ | ಜಾಸ್ತಿ ಹಣ ಕೇಳಿದ್ರೆ ಇಲ್ಲಿ ದೂರು ಸಲ್ಲಿಸಿ

Gas Cylinder ಡೆಲಿವರಿ ಶುಲ್ಕ ನೀಡುವಂತಿಲ್ಲ | ಜಾಸ್ತಿ ಹಣ ಕೇಳಿದ್ರೆ ಇಲ್ಲಿ ದೂರು ಸಲ್ಲಿಸಿ

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಜಕ್ಕೂ ಜನರನ್ನು ಹೈರಾಣಾಗಿಸಿದೆ. ಅದರಲ್ಲೂ ಜನ ಸಾಮಾನ್ಯ ರಿಗೆ ಅಗತ್ಯವಾಗಿ ಬೇಕಾಗುವ ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಲೇ ಇದೆ. ಒಂದು ಕಡೆ ಬೆಲೆ ಏರಿಕೆಯ ಬಿಸಿ ತಾಗಿದರೆ, ಇನ್ನೊಂದು ಕಡೆ ಸಿಲಿಂಡರ್ ಬೆಲೆಯ ಜೊತೆಗೆ ಎಕ್ಸ್ಟ್ರಾ ಹಣ ನೀಡುವುದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸಿಲಿಂಡರ್ ವಿತರಣಾ ಶುಲ್ಕ ನಿಜಕ್ಕೂ ಬಡ ಜನರ ಹೊಟ್ಟೆಗೆ ಹೊಡೆಯೋ ಕೆಲಸ ಎಂದೇ ಹೇಳಬಹುದು.

ಎಲ್ಲಾ ಕಡೆ ಹೇಳುವ ಹಾಗೇ, ಸಿಲಿಂಡರ್ ಮೇಲಿನ ಬಿಲ್ ಮಾತ್ರ ಪಾವತಿಸಿದರೆ ಸಾಕು ಎಂಬುದು ನಿಯಮ. ಆದರೆ, ವಿತರಣಾ ಸಿಬ್ಬಂದಿಗೆ 20ರಿಂದ 40 ರೂ.ವರೆಗೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೆಲವೆಡೆ ಡೆಲಿವರಿ ಸಿಬ್ಬಂದಿ 60 ಅಥವಾ 80 ರೂ.ವರೆಗೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂಬ ದೂರುಗಳಿವೆ.

ಈ ನಡುವೆ ಬಿಲ್‌ನಲ್ಲಿ ನಮೂದಿಸಲಾದ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸದೆಯೇ ಕಟ್ಟಡ/ಫ್ಲಾಟ್‌ಗಳಲ್ಲಿ ನೆಲದ ಸ್ಥಳವನ್ನು ಲೆಕ್ಕಿಸದೆ ಗ್ಯಾಸ್ ಸಿಲಿಂಡರ್ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿಯಾಗಿದೆ. LPG ಸಿಲಿಂಡರ್‌ನ ನಗದು ಜ್ಞಾಪಕ ಪತ್ರದಲ್ಲಿ ಸೂಚಿಸಲಾದ ಚಿಲ್ಲರೆ ಮಾರಾಟದ ಬೆಲೆಗಿಂತ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸಲು ದೇಶೀಯ ಅನಿಲ ವಿತರಕರಿಗೆ ಯಾವುದೇ ನಿಯಮಗಳು ಅಥವಾ ಸೂಚನೆಗಳಿಲ್ಲ.

ಎಲ್‌ಪಿಜಿ ಸಿಲಿಂಡರ್‌ನ ವಿತರಣೆಯ ಮೇಲೆ ಯಾವುದೇ ವಿತರಣಾ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲ. ಇನ್‌ವಾಯ್ಸನಲ್ಲಿ ನಮೂದಿಸಲಾದ ಮೊತ್ತವನ್ನು ಮಾತ್ರ ಪಾವತಿಸಬೇಕಾಗುತ್ತದೆ ಒಂದು ವೇಳೆ ಹೆಚ್ಚಿನ ಹಣವನ್ನು ಕೇಳಿದ್ರೆ ಸಂಬಂಧಪಟ್ಟ ವಿತರಣೆ ಎಜೆನ್ಸಿಗೆ ದೂರು ನೀಡಬಹುದಾಗಿದೆ.

ಸಿಲಿಂಡರನ್ನು ಮನೆಗಳಲ್ಲಿ ಅಥವಾ ಎಷ್ಟೇ ಮಹಡಿ ಇದ್ದರೂ ತಲುಪಿಸುವ ಸಂದರ್ಭದಲ್ಲಿ ಯಾವುದೇ ಡೆಲಿವರಿ ಹುಡುಗ ಸಾರ್ವಜನಿಕರಲ್ಲಿ ಬಿಲ್ಲಿನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದ್ದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಗೆ ಅಥವಾ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ದೂರು ಸಲ್ಲಿಸಬಹುದು.