Home latest ಹೆಣ್ಮಕ್ಕಳು ಬಾಗಿಲು ಹಾಕಿ ಡ್ರೆಸ್‌ ಮಾಡೋದು, ಹೊರಗೆ ಬರುವಾಗ ಎಲ್ಲಾ ತೋರಿಸೋದಕ್ಕಾ? ಫೇಸ್‌ಬುಕ್‌ನಲ್ಲಿ ಚರ್ಚೆಯಾಗಿದೆ ಈ...

ಹೆಣ್ಮಕ್ಕಳು ಬಾಗಿಲು ಹಾಕಿ ಡ್ರೆಸ್‌ ಮಾಡೋದು, ಹೊರಗೆ ಬರುವಾಗ ಎಲ್ಲಾ ತೋರಿಸೋದಕ್ಕಾ? ಫೇಸ್‌ಬುಕ್‌ನಲ್ಲಿ ಚರ್ಚೆಯಾಗಿದೆ ಈ ಪ್ರಶ್ನೆ!!!

Hindu neighbor gifts plot of land

Hindu neighbour gifts land to Muslim journalist

Viral News:ಸೋಷಿಯಲ್ ಮೀಡಿಯಾದಲ್ಲಿ (Social Media)ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್( Viral News) ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ವಿಚಾರವೊಂದು ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮಹಿಳೆಯರ ಉಡುಗೆ ತೊಡುಗೆಯ ಕುರಿತು ಅನೇಕ ಬಾರಿ ಚರ್ಚೆಗಳು ನಡೆಯುವುದುಂಟು. ಹಿಂದೆ ಹೆಣ್ಣು ನಾಲ್ಕು ಗೋಡೆಯ ಒಳಗಷ್ಟೇ ಸೀಮಿತ ಎಂಬ ಮನಸ್ಥಿತಿಯಿತ್ತು. ಆದರೆ, ಈಗ ಕಾಲ ಬದಲಾಗಿದೆ. ಇಂದು ಎಲ್ಲೇ ನೋಡಿದರೂ ಮಾಡ್ರನ್ ಡ್ರೆಸ್ಗಳನ್ನು ತೊಡುವುದು ಮಾಮೂಲಿ. ಇಂದಿನ ಫ್ಯಾಶನ್ ಜಗತ್ತಿನಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಹುಟ್ಟಿಕೊಂಡು ತರಹೇವಾರಿ ಉಡುಗೆಗಳನ್ನು ತೊಡುವುದು ಸಹಜ ಎಂಬಂತೆ ಆಗಿದೆ.ಅದರಲ್ಲಿಯೂ ಕೆಲವರು ನಾಮಕಾವಸ್ಥೆ ರೂಪದಲ್ಲಿ ಬಟ್ಟೆಗಳನ್ನು ತೊಡುವುದು ಕೂಡ ಇದೆ.

ಇದೀಗ, ತಮಾಷೆಯ ಪ್ರಶ್ನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಂಚಲನ ಮೂಡಿಸುತ್ತಿದೆ. ಮ್ಯಾಡ್ ಮಡ್ ಟಿವಿ (Mad Mud TV) ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಕೇಳಲಾದ ಪ್ರಶ್ನೆ ಭಾರೀ ಚರ್ಚೆಗೆ ಕಾರಣವಾಗಿದೆ.ಅಷ್ಟಕ್ಕೂ ಆ ಪ್ರಶ್ನೆ ಏನು ಗೊತ್ತಾ?ಹುಡುಗಿಯರು ಡ್ರೆಸ್ ಮಾಡಿಕೊಳ್ಳುವಾಗ ಬಾಗಿಲು ಹಾಕಿಕೊಳ್ಳುವುದು ಸರಿ!!ಅದೇನು ದೊಡ್ಡ ಸಮಸ್ಯೆಯ ರೀತಿ ಕಾಣಿಸುವುದಿಲ್ಲ. ಆದರೆ ಬಾಗಿಲು ತೆರೆದು ಹೊರಕ್ಕೆ ಬರುವಾಗ ಮಾತ್ರ ಅರೆನಗ್ನರಾಗಿ ಬಂದಿರುತ್ತಾರಲ್ಲ!! ಅರೆನಗ್ನರಾಗಿ ಹೊರ ಬರುವುದಾದರೆ ಬಾಗಿಲು ಮುಚ್ಚಿಕೊಂಡು ಡ್ರೆಸ್ ಹಾಕಿಕೊಳ್ಳುವುದಾದರು ಯಾಕೆ ? ಎಂದು ಫೇಸ್ಬುಕ್ ನಲ್ಲಿ ಕೇಳಲಾಗಿದೆ.

ಈ ಪ್ರಶ್ನೆಗೆ ಸಾವಿರಾರು ಮಂದಿ ಕಾಮೆಂಟ್ಸ್ (Comments) ಮಾಡಿದ್ದು, ಇನ್ನರ್ಧ ಮಾತ್ರ ಮುಚ್ಚಿಕೊಳ್ಳಲು ಇರಬಹುದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಪ್ರಶ್ನೆ ನೆಟ್ಟಿಗರ ಗಮನ ಸೆಳೆದಿದ್ದು, ತರಹೇವಾರಿ ಕಾಮೆಂಟ್ಸ್ಗಳು ಬರುತ್ತಿವೆ. ನಿಮಗೇನಾದರು ಇದಕ್ಕೆ ಉತ್ತರ ತಿಳಿದಿದೆಯೇ ಎಂದು ಮತ್ತೆ ಕೆಲವರು ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.