Home latest Asha worker: ಆಂಬ್ಯುಲೆನ್ಸ್ ಅಟ್ಟಿಸಿಕೊಂಡು ಬಂದ ಆನೆ ಸಮಯ ಪ್ರಜ್ಞೆಯಿಂದ ಹೆರಿಗೆ ಮಾಡಿಸಿದ ಆಶಾ...

Asha worker: ಆಂಬ್ಯುಲೆನ್ಸ್ ಅಟ್ಟಿಸಿಕೊಂಡು ಬಂದ ಆನೆ ಸಮಯ ಪ್ರಜ್ಞೆಯಿಂದ ಹೆರಿಗೆ ಮಾಡಿಸಿದ ಆಶಾ ಕಾರ್ಯಕರ್ತೆ

Asha worker
Image source: Tripadvisor

Hindu neighbor gifts plot of land

Hindu neighbour gifts land to Muslim journalist

Asha worker : ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಸಾಗಿಸುತ್ತಿದ್ದಾಗ ಆನೆಯೊಂದು ದಾಳಿ ನಡೆಸಿರುವ ಘಟನೆ ನಡೆದಿದ್ದು, ಆನೆಯ ದಾಳಿಗೆ ಬೆರಗಾದ ವಾಹನ ಚಾಲಕ ಮುಂದೆ ಚಲಿಸಲು ಹಿಂದೇಟು ಹಾಕಿದ್ದಾರೆ.

ಲಂಬಾಣಿ ಸಮುದಾಯದ ಜಿಎಂ ಹಳ್ಳಿಯ ತುಂಬು ಗರ್ಭಿಣಿ ಸುಚಿತ್ರ ಎಂಬುವವರು ಹೆರಿಗೆ (Delivery) ನೋವಿನಿಂದ ಬಳಲುತ್ತಿದ್ದಾರೆ. ಅವರ ಮನೆಯವರು 108 ಆಂಬುಲೆನ್ಸ್ ಗೆ ರಾತ್ರಿ ಕರೆ ಮಾಡಿದ್ದು, ಅದರಂತೆ ಎಚ್‌ಡಿ ಕೋಟೆ ಸರ್ಕಾರಿ ಆಸ್ಪತ್ರೆಯಿಂದ ಜಿಎಂ ಹಳ್ಳಿಗೆ ತೆರಳುವಾಗ ಮಾರ್ಗಮಧ್ಯೆ ಒಂಟಿ ಸಲಗವೊಂದು ಎದುರಾಗಿದೆ.

ಅದರ ಚಾಲಕ ಶರತ್ ಸ್ವಲ್ಪ ಕಾಲ ನಿಲ್ಲಿಸಿ ಆನೆ ಹೋಗುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಆನೆ ವಾಹನವನ್ನು ಜಖಂಗೊಳಿಸಲು ಮುಂದಾಗಿದೆ. ತಕ್ಷಣ ವಾಹನವನ್ನು ಹಿಂದೆ ಸರಿಸಿ, ಅನ್ಯಮಾರ್ಗದ ಮೂಲಕ ಗ್ರಾಮಕ್ಕೆ ತಲುಪಿದ್ದಾರೆ. ನಂತರ ಗರ್ಭಿಣಿಯನ್ನು ಸುರಕ್ಷಿತ ಮಾರ್ಗದ ಮೂಲಕ ಕರೆತರುವಾಗ ಹೆರಿಗೆ ನೋವು ತೀವ್ರಗೊಂಡಿದ್ದು, ಆಯಂಬುಲೆನ್ಸ್‌ನಲ್ಲೇ ಇದ್ದ ಆಶಾ ಕಾರ್ಯಕರ್ತೆ (Asha worker) ಸಾವಿತ್ರಿಬಾಯಿ ಅವರು ಯಶಸ್ವಿ ಯಾಗಿ ಹೆರಿಗೆ ಮಾಡಿಸಿದ್ದಾರೆ.

ಸದ್ಯ ಸುಚಿತ್ರ ಎಂಬಾಕೆಗೆ ಹೆಣ್ಣು ಜನಿಸಿದ್ದು, ಎಲ್ಲರೂ ಸಂತಸಗೊಂಡಿದ್ದಾರೆ. ನಂತರ ತಾಯಿ- ಮಗುವನ್ನು ಸುರಕ್ಷಿತವಾಗಿ ಸುಮಾರು 3 ಗಂಟೆ ವೇಳೆಗೆ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ.

ಸಮಯ ಪ್ರಜ್ಞೆ ಕಾಪಾಡಿರುವ ಚಾಲಕ ಹಾಗೂ ಆಶಾ ಕಾರ್ಯಕರ್ತೆಯರ ಸೇವಾ ನಿಷ್ಠೆಯನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಏಕಕಾಲದಲ್ಲಿ ಪಡಿಬೋದು ಎರಡೆರಡು ಡಿಗ್ರಿ