Home latest KSRTC News: ಹೊಸ ವರ್ಷಕ್ಕೆ KSRTC ಡ್ರೈವರ್ ಗಳಿಗೆ ಬಾಟಲ್ ವಿತರಣೆ !!

KSRTC News: ಹೊಸ ವರ್ಷಕ್ಕೆ KSRTC ಡ್ರೈವರ್ ಗಳಿಗೆ ಬಾಟಲ್ ವಿತರಣೆ !!

Image credit source: Star of Mysore

Hindu neighbor gifts plot of land

Hindu neighbour gifts land to Muslim journalist

Thermo Flasks: ಕೆ.ಎಸ್.ಆರ್.ಟಿ.ಸಿ ಬಸ್(KSRTC Bus) ಗಳಲ್ಲಿ ರಾತ್ರಿ ಪಾಳಿ ಕಾರ್ಯ ನಿರ್ವಹಿಸುವ 1,600 ಚಾಲಕರಿಗೆ(KSRTC Drivers) ಸಿಹಿ ಸುದ್ದಿ ಹೊರಬಿದ್ದಿದೆ. KSRTC ಗಳಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಅರ್ಧ ಲೀಟರ್ ನ ಥರ್ಮೋ ಪ್ಲಾಸ್ಕ್ ಗಳನ್ನು(Thermo Flasks) ವಿತರಿಸಲಾಗಿದೆ.

KSRTC ಬಸ್ ಚಾಲಕರಿಗೆ ರಾತ್ರಿ ಹೊತ್ತಲ್ಲಿ ನಿದ್ದೆ ಮಂಪರು ಬಂದರೆ ಕಾಫಿ ಟೀ ಕುಡಿಯಲು ನೆರವಾಗುವ ದೆಸೆಯಲ್ಲಿ ಥರ್ಮೋ ಪ್ಲಾಸ್ಕ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ಅಧ್ಯಯನದ ವರದಿ ಅನುಸಾರ, ಕೆಎಸ್‌ಆರ್ಟಿಸಿ ವಾಹನಗಳು ರಾತ್ರಿ ವೇಳೆ ಕಾರ್ಯಾಚರಣೆಯಲ್ಲಿದ್ದ ಸಂದರ್ಭ ಬೆಳಗ್ಗಿನ ಜಾವ ಮೂರರಿಂದ ನಾಲ್ಕು ಗಂಟೆ ಸಮಯದಲ್ಲಿ ಹೆಚ್ಚು ಅಪಘಾತ(Accident)ಸಂಭವಿಸುತ್ತಿರುವುದು ವರದಿಯಾಗಿದೆ. ಪ್ರಯಾಣಿಕರಿಗೆ ಸುರಕ್ಷತೆ ನೀಡುವ ನಿಟ್ಟಿನಲ್ಲಿ ಹಾಗೂ ಚಾಲಕರ ಕಾರ್ಯಕ್ಷಮತೆ ಉತ್ತಮಪಡಿಸಲು ಕಾರ್ಯ ನಿರ್ವಹಿಸುವ ಸಂದರ್ಭ ಕಾಫಿ, ಟೀ ಸೇವಿಸಲು ನೆರವಾಗುವ ನಿಟ್ಟಿನಲ್ಲಿ ಚಾಲಕರಿಗೆ ಥರ್ಮೋ ಪ್ಲಾಸ್ಕ್ ವಿತರಣೆ ಮಾಡಲಾಗುತ್ತದೆ. ಹೋಟೆಲ್ ಗಳಿಂದ ಕಾಫಿ, ಟೀ ತುಂಬಿಸಿಕೊಂಡು ಬೆಳಗಿನ ಜಾವ ಸೇವಿಸಬಹುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.