Home latest ಕೇರಳದ ರೂಪದರ್ಶಿ ನಿಗೂಢ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ|ಕೊಲೆ ಶಂಕೆ- ಪತಿ ಪೊಲೀಸ್...

ಕೇರಳದ ರೂಪದರ್ಶಿ ನಿಗೂಢ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ|ಕೊಲೆ ಶಂಕೆ- ಪತಿ ಪೊಲೀಸ್ ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

ದೇವರನಾಡು ಎಂದೇ ಪ್ರಸಿದ್ಧಿಗೊಂಡಿರುವ ಕೇರಳದಲ್ಲಿ ಯುವ ರೂಪದರ್ಶಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಗುರುವಾರ ರಾತ್ರಿ 11.30ರ ಸುಮಾರಿಗೆ ಪರಂಬಿಲ್ ಬಜಾರ್‌ನಲ್ಲಿರುವ ತಮ್ಮದೇ ಅಪಾರ್ಟ್‌ಮೆಂಟ್‌ನ ಕಿಟಕಿಯ ಗ್ರಿಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೂಪದರ್ಶಿ ಪತ್ತೆಯಾಗಿದ್ದಾರೆ. ಕಾಸರಗೋಡು ಮೂಲದ ಈ ರೂಪದರ್ಶಿ ಕೊಜಿಕೋಡ್‌ನ ಪರಂಬಿಲ್ ಬಜಾರ್ ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ಶಹ್ನಾ ಸಜದ್ ( 21 ವರ್ಷ)ಎಂಬಾಕೆಯೇ ಸಾವಿಗೀಡಾದ ರೂಪದರ್ಶಿ.

ಶಹ್ನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ. ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೇ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದರು.

ಸಾವಿಗೀಡಾದ ಘಟನೆ ತಿಳಿದ ನಂತರ ಶಹ್ನಾ ಪೋಷಕರು ತಮ್ಮ ಪುತ್ರಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗಾಗಿ ಈ ದೂರಿನ ಹಿನ್ನೆಲೆಯಲ್ಲಿ ಶಹ್ನಾ ಪತಿ ಸಜದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ಶಹಾ ಸಾವನ್ನಪ್ಪಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಶಹ್ನಾ ಪೋಷಕರು ಗಂಭೀರ ಆರೋಪವನ್ನು ಕೂಡಾ ಮಾಡಿದ್ದಾರೆ.

ಶಹ್ನಾ ಉದಯೋನ್ಮುಖ ನಟಿ ಆಗಿದ್ದು, ತಮಿಳು ಸಿನಿಮಾ ಇಂಡಸ್ಟ್ರಿಗೆ ಇತ್ತೀಚೆಗೆ ಸೇರಿದ್ದರು. ಒಂದೂವರೆ ವರ್ಷಗಳ ಹಿಂದೆ ಆಕೆ ಸಜದ್‌ನನ್ನು ವಿವಾಹವಾಗಿದ್ದಳು. ಆಕೆಗೆ ಹಲವು ಬಾರಿ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ಆಕೆಯ ಕುಟುಂಬ ಸದಸ್ಯರು ಹೇಳಿದ್ದಾರೆ. ಸ್ಥಳ ಮಹಜರು ವೇಳೆ ಸ್ಥಳೀಯರು ಕೂಡ ಈ ಜೋಡಿಯ ಸಂಬಂಧ ಚೆನ್ನಾಗಿರಲಿಲ್ಲ. ಇಬ್ಬರ ನಡುವೆ ಹಲವು ಬಾರಿ ಕಲಹ ನಡೆದಿದೆ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.