Home latest ಬಾಯಿ ವಾಸನೆ ಬರ್ತಿದೆ, ಮುತ್ತಿಡಬೇಡ ಅಂದ ಹೆಂಡತಿ | ಕೊನೆಗೆ ಮುಟ್ಟಿದ್ದೆಲ್ಲಿಗೇ?

ಬಾಯಿ ವಾಸನೆ ಬರ್ತಿದೆ, ಮುತ್ತಿಡಬೇಡ ಅಂದ ಹೆಂಡತಿ | ಕೊನೆಗೆ ಮುಟ್ಟಿದ್ದೆಲ್ಲಿಗೇ?

Hindu neighbor gifts plot of land

Hindu neighbour gifts land to Muslim journalist

ಕ್ಷುಲ್ಲಕ ಕಾರಣವೊಂದಕ್ಕೆ, ಪತಿ ಮತ್ತು ಪತ್ನಿಯ ನಡುವೆ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಸಿಟ್ಟು ನೆತ್ತಿಗೇರಿದ ಪತಿಮಹಾಶಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆತಂಕಕಾರಿ ಘಟನೆಯೊಂದು ಕೇರಳದ ಮನ್ನಾರ್‌ಕಾಡ್ ನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ದೀಪಿಕಾ (28) ಎಂದು ಗುರುತಿಸಲಾಗಿದೆ. ಗಂಡ ಅವಿನಾಶ್‌ನನ್ನು ಬಂಧಿಸಲಾಗಿದೆ.

ಬಾಯಿ ವಾಸನೆ ಬರ್ತಿದೆ, ಮಗನಿಗೆ ಮುತ್ತಿಡಬೇಡಿ. ಹಲ್ಲು ಉಜ್ಜದೇ ಮಗನಿಗೆ ಮುತ್ತು ಕೊಡಬೇಡಿ ಎಂದು ಹೆಂಡತಿ ದೀಪಿಕಾ ಹೇಳಿದ ಒಂದೇ ಮಾತು, ಗಂಡನ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಮಾತಿಗೆ ಮಾತು ಬೆಳೆದು, ಹೆಂಡತಿಯೊಂದಿಗೆ ಅವಿನಾಶ್ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿ ದೀಪಿಕಾ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ದಂಪತಿಗಳ ಏಕೈಕ ಪುತ್ರ ಐವಿನ್ ಎದುರೇ ಕೊಲೆ ನಡೆದಿದೆ. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಿಕಾ ಅವರನ್ನು ನೆರೆಹೊರೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನೆರೆ ಮನೆಯವರು ನೋಡಿದಾಗ ಆಕೆಯ ಮಗ ಐವಿನ್ ತಾಯಿಯ ಮೃತದೇಹವನ್ನು ಅಪ್ಪಿಕೊಂಡು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಆರೋಪಿ ಅವಿನಾಶ್ ಮಚ್ಚು ಹಿಡಿದು ದೀಪಿಕಾ ಪಕ್ಕದಲ್ಲಿ ನಿಂತಿದ್ದನ್ನು ಸ್ಥಳೀಯರು ನೋಡಿದ್ದಾರೆ. ಘಟನೆಯ ಬಳಿಕ ತಕ್ಷಣ ದೀಪಿಕಾ ಅವರನ್ನು ಪೆರಿಂತಲ್ಮನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ. ದೀಪಿಕಾ ಅವರ ಕುತ್ತಿಗೆ, ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸ್ಥಳೀಯರು ಅವಿನಾಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.