Home latest Physical Assault: ಅಪ್ರಾಪ್ತ ಬಾಲಕ, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ಅಪರಾಧಿಗೆ 189 ವರ್ಷ...

Physical Assault: ಅಪ್ರಾಪ್ತ ಬಾಲಕ, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ಅಪರಾಧಿಗೆ 189 ವರ್ಷ ಜೈಲುವಾಸ ವಿಧಿಸಿದ ಹೊಸದುರ್ಗ ಕೋರ್ಟ್ !! ಅರೆ ಏನಿದು ವಿಚಿತ್ರ ಶಿಕ್ಷೆ?

Physical Assault
Image credit: Times Of india

Hindu neighbor gifts plot of land

Hindu neighbour gifts land to Muslim journalist

Physical Assault: ಕಾಸರಗೋಡಿನಲ್ಲಿ ಏಳು ವರ್ಷದ ಬಾಲಕಿ ಮತ್ತು ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ(Physical Assault)ನಡೆಸಿದ ಆರೋಪದಡಿ ಅಪರಾಧಿಯೊಬ್ಬನಿಗೆ ಹೊಸದುರ್ಗ ವಿಶೇಷ ನ್ಯಾಯಾಲಯ ಪೋಕ್ಸೋ ಸೇರಿ 21 ಪ್ರಕರಣಗಳಡಿ ಒಟ್ಟು 189 ವರ್ಷಗಳ ಜೈಲುವಾಸ ವಿಧಿಸಿರುವ ಘಟನೆ ವರದಿಯಾಗಿದೆ.

2022ರಲ್ಲಿ ಏಳು ವರ್ಷದ ಬಾಲಕಿ ಹಾಗೂ ಆಕೆಯ 14 ವರ್ಷದ ಹಿರಿಯ ಸಹೋದರನಿಗೆ, 2019ರಲ್ಲಿ ಇನ್ನೊಬ್ಬ ಸಹೋದರನಿಗೆ ಕಿರುಕುಳ ನೀಡಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.ಎಲ್ಲ ಪ್ರಕರಣಗಳು ಏಕಕಾಲದಲ್ಲಿ ನಡೆದಿರುವ ಹಿನ್ನೆಲೆ ಒಟ್ಟು 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕು.

ಈ ಕೃತ್ಯ ಎಸಗಿದ ಆರೋಪಿಯನ್ನು ಬಳಾಲ್ ಗ್ರಾಮ ಪಂಚಾಯಿತ್ ನ ಅರಿಂಜಾಲ್ ನಿವಾಸಿ ಸುಧೀಶ್ ಯಾನೆ ಪಪ್ಪು(25) ಎಂದು ಗುರುತಿಸಲಾಗಿದೆ. ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಬೆದರಿಕೆ ಸೇರಿದಂತೆ ಒಟ್ಟು 21 ಪ್ರಕರಣದಡಿ ಈ ಶಿಕ್ಷೆ ವಿಧಿಸಲಾಗಿದ್ದು, ಎಲ್ಲ ಪ್ರಕರಣಗಳು ಏಕಕಾಲದಲ್ಲಿ ನಡೆದಿರುವ ಹಿನ್ನೆಲೆ ಆರೋಪಿ ಒಟ್ಟಾರೆ 20 ವರ್ಷ ಗಳ ಜೈಲು ಶಿಕ್ಷೆ ವಿಧಿಸಲಾಗಿರುವ ಕುರಿತು ನ್ಯಾಯಾಧೀಶರು ತಿಳಿಸಿದ್ದಾರೆ. ಈ ಶಿಕ್ಷೆ ಹೊರತುಪಡಿಸಿ ಆರೋಪಿಗೆ ಮೂರು ಪ್ರಕರಣಗಳಲ್ಲಿ 4.05 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಈ ದಂಡ ಪಾವತಿಸದೆ ಇದ್ದಲ್ಲಿ ಮತ್ತೆ 2 ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.

ನ್ಯಾಯಾಧೀಶ ಸಿ ಸುರೇಶ್ ಕುಮಾರ್ ಅವರು ಪೋಕ್ಸೋ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಒಟ್ಟು 189 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಇನ್ನು ಬಾಲಕಿಯನ್ನು ಅಪಹರಣ ಮಾಡಿರುವುದಕ್ಕಾಗಿ 3 ವರ್ಷಗಳ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತ ವಯಸ್ಕಳನ್ನು ಸಾಗಣೆ ಮಾಡಿದ ಅಪರಾಧದಡಿಯಲ್ಲಿ 10 ವರ್ಷ ಜೈಲು ಶಿಕ್ಷೆ, 20 ಸಾವಿರ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: Boota kola Mangaluru: ಭೂತಕೋಲದ ಮೂಲಕ ವ್ಯಾಪಾರಕ್ಕಿಳಿದ ಸಂಸ್ಥೆ – ನಿಮ್ಮ ತೀರ್ಮಾನ ನಮ್ಮ ಕೈಯಲ್ಲಿ ಎಂದ ಕರ್ನಾಟಕ ಜನ !!