Home latest Karnataka Rain: ಚೌತಿ ಹಬ್ಬದಂದೇ ಬರಲಿದೆ ಬಿರುಸಾದ ಮಳೆ!! 5 ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನೆ-...

Karnataka Rain: ಚೌತಿ ಹಬ್ಬದಂದೇ ಬರಲಿದೆ ಬಿರುಸಾದ ಮಳೆ!! 5 ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನೆ- ಹವಾಮಾನ ಇಲಾಖೆ ನೀಡಿದೆ ಎಚ್ಚರಿಕೆಯ ಸಂದೇಶ!!!

Hindu neighbor gifts plot of land

Hindu neighbour gifts land to Muslim journalist

ಗಣೇಶನ ಹಬ್ಬ ಬಂದಿದೆ. ಇನ್ನೇನು ಎಲ್ಲರೂ ಹಬ್ಬದ ತಯಾರಿಯಲ್ಲಿದ್ದಾರೆ. ಆದರೆ ಹವಾಮಾನ ಇಲಾಖೆಯು ಗಣೇಶನ ಹಬ್ಬದಂದೇ ಕರ್ನಾಟಕದ ಐದು ಜಿಲ್ಲೆಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದ್ದು, ಯೆಲ್ಲೋ ಅಲರ್ಟ್‌ ಕೂಡಾ ಘೋಷಣೆ ಮಾಡಿದೆ.

ಸೆ.22ರವರೆಗೆ ಮಳೆ ಮುಂದುವರಿಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ ನಿಂದ 55 ಕಿ.ಮೀ. ವೇಗದಲ್ಲಿ ಜೋರಾಗಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಮುಖ್ಯವಾಗಿ ಮೀನುಗಾರರು ಸಮುದ್ರದಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಹಲವು ಕಡೆ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವನೀಯತೆ ಇದೆ. ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ.