Home latest ಅಭ್ಯಾಸ ನಿರತ ವಿದ್ಯಾರ್ಥಿ ಎಸೆದ ಜಾವೆಲಿನ್ ಭರ್ಚಿ, ಇನ್ನೊಬ್ಬ ವಿದ್ಯಾರ್ಥಿ ತಲೆಗೆ ಹೊಕ್ಕಿತು!!!

ಅಭ್ಯಾಸ ನಿರತ ವಿದ್ಯಾರ್ಥಿ ಎಸೆದ ಜಾವೆಲಿನ್ ಭರ್ಚಿ, ಇನ್ನೊಬ್ಬ ವಿದ್ಯಾರ್ಥಿ ತಲೆಗೆ ಹೊಕ್ಕಿತು!!!

Hindu neighbor gifts plot of land

Hindu neighbour gifts land to Muslim journalist

ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಅಭ್ಯಾಸ ನಿರತನಾಗಿದ್ದ ವಿದ್ಯಾರ್ಥಿ ಎಸೆದ ಜಾವೆಲಿನ್ ಭರ್ಚಿ ಅಲ್ಲಿಯೇ ಇದ್ದ ವಿದ್ಯಾರ್ಥಿಯೊಬ್ಬನ ತಲೆಗೆ ಹೊಕ್ಕಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ‌. ಈ ಘಟನೆ ತುಮಕೂರಿನ ಮಧುಗಿರಿ ಪಟ್ಟಣದ ಪಟ್ಟಣದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುತ್ತಿದ್ದ ಕ್ರೀಡಾಕೂಟ ಅಭ್ಯಾಸದಲ್ಲಿ ನಡೆದಿದೆ.

ಇಂದ್ರೇಶ್‌ ಎಂಬ ವಿದ್ಯಾರ್ಥಿಯೇ ಗಾಯಗೊಂಡ ವಿದ್ಯಾರ್ಥಿ‌. ಈತನನ್ನು ಆ ಕೂಡಲೇ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಇದೀಗ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ನಿಮ್ಹಾನ್ಸ್ ವೈದ್ಯರು ವಿದ್ಯಾರ್ಥಿಯ ಪ್ರಾಣ ಉಳಿಸಿದ್ದಾರೆ.

ಕ್ರೀಡಾಂಗಣದಲ್ಲಿ ಜಾವೆಲಿನ್ ತ್ರೋ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ವೇಗವಾಗಿ ಎಸೆದ ಭರ್ಚಿ ಗುರಿತಪ್ಪಿ ಅಲ್ಲೇ ಕುಳಿತಿದ್ದ ಇಂದ್ರೇಶ್ ತಲೆಗೆ ಹೊಕ್ಕಿದೆ. ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ. ತಕ್ಷಣ ದೈಹಿಕ ಶಿಕ್ಷಣ ಶಿಕ್ಷಕ ಪ್ರತಾಪ್ ಹಾಗೂ ಇತರ ವಿದ್ಯಾರ್ಥಿಗಳು ಆತನನ್ನು ತಾಲ್ಲೂಕು ಆಸ್ಪತ್ರೆಗೆ ಕೊರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ವೈದ್ಯರ ಸೂಚನೆಯಂತೆ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ನಿಮ್ಹಾನ್ಸ್ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅವರ ಜೀವವನ್ನು ಉಳಿಸಿದ್ದು, ಗಾಯಾಳು ವಿದ್ಯಾರ್ಥಿಯ ನರಗಳಿಗೆ ಹಾನಿಯಾಗಿರುವುದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅದೃಷ್ಟವಶಾತ್, ವಿದ್ಯಾರ್ಥಿ ಮೆದುಳಿಗೆ ಯಾವುದೇ ಗಾಯವಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.