Home latest LPG Cylinder Price: ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ!

LPG Cylinder Price: ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ!

LPG Cylinder

Hindu neighbor gifts plot of land

Hindu neighbour gifts land to Muslim journalist

LPG Cylinder : ಹೊಸ ಹಣಕಾಸು ವರ್ಷ(Financial Year )ಏಪ್ರಿಲ್ ಮೊದಲ ದಿನದಂದು ಸಾಮಾನ್ಯ ಜನತೆಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನರಿಗೆ ಕೊಂಚ ಮಟ್ಟಿಗೆ ರಿಲೀಫ್ ಆಗುವ ಸುದ್ಧಿ ಹೊರ ಬಿದ್ದಿದೆ. ಹೌದು!! ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್(LPG Cylinder) ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದ್ದು, ಇದೀಗ ಬೆಲೆಯನ್ನು ಕಡಿತ ಮಾಡಲಾಗಿದೆ. 2023- 24 ರ ಆರ್ಥಿಕ ವರ್ಷದ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತ ಮಾಡಲಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder Price)ಬೆಲೆಯನ್ನು ಸರ್ಕಾರ ಕಡಿಮೆ ಮಾಡಲಾಗಿದೆ.

ಏಪ್ರಿಲ್ 1 ರ ಹೊಸ ಆರ್ಥಿಕ ವರ್ಷದ ಶುರುವಾಗುತ್ತದೆ. ಈ ಸಮಯದಲ್ಲಿ ಸರ್ಕಾರ ಬಂಪರ್ ಕೊಡುಗೆಯನ್ನ ನೀಡಿದ್ದು, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಸದ್ಯ, ಈ ಬೆಲೆಯನ್ನು 91.50 ರೂಪಾಯಿ ಕಡಿತ ಮಾಡಲಾಗಿದೆ. ಇಂದಿನಿಂದಲೇ ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಎಲ್‌ಪಿಜಿ ಬೆಲೆಯನ್ನು ಮುಖ್ಯವಾಗಿ ಸರ್ಕಾರಿ ತೈಲ ಕಂಪನಿಗಳು ತೀರ್ಮಾನಿಸುತ್ತವೆ.

ಜಾಗತಿಕ ಕಚ್ಚಾ ಇಂಧನ ದರಗಳ ಆಧಾರದ ಮೇಲೆ ಮಾಸಿಕ ಆಧಾರದ ಮೇಲೆ ಬದಲಾವಣೆಗೆ ತರಲಾಗುತ್ತದೆ. ಕಚ್ಚಾ ತೈಲದ ಏರಿಕೆಯು ಎಲ್‌ಪಿಜಿ ದರಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದಲ್ಲದೆ, ಕಚ್ಚಾ ತೈಲದ ಏರಿಕೆಯು ಬೆಲೆ ಇಳಿಕೆ ಸಿಲಿಂಡರ್‌ ದರ ಇಳಿಕೆಗೆ ಕಾರಣವಾಗುತ್ತದೆ. ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್‌ (14.2 kgs) ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನಲಾಗಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಕರ್ನಾಟಕದಲ್ಲಿ ಅಂದರೆ,ಬೆಂಗಳೂರಿನಲ್ಲಿ ರೂ. 1,105.50 ಆಗಿದೆ.

2024 ರ ಆರ್ಥಿಕ ವರ್ಷದ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತ ಮಾಡಲಾಗಿದೆ. ಈ ಬದಲಾವಣೆಯನ್ನು ವಾಣಿಜ್ಯ ಅನಿಲ ಸಿಲಿಂಡರ್‌ಗಳ ವೆಚ್ಚದಲ್ಲಿ ಮಾತ್ರ ಮಾಡಲಾಗಿದ್ದು, ಮನೆಗಳಲ್ಲಿ ಬಳಸುವ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ತಂದಿಲ್ಲ ಎಂಬುದನ್ನು ಗಮನಿಸಬೇಕು. ಮಾರ್ಚ್‌ನಲ್ಲಿ ಸರ್ಕಾರವು ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಎಲ್‌ಪಿಜಿಯ ತೂಕ 19 ಕೆ.ಜಿ. ಆಗಿರುತ್ತದೆ. ಇಂಡಿಯನ್ ಆಯಿಲ್ ವೆಬ್‌ಸೈಟ್ ಮಾಹಿತಿ ಅನುಸಾರ, ಈ ಹಿಂದೆ ವಾಣಿಜ್ಯ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ರೂ 2119.50, ಕೋಲ್ಕತ್ತಾದಲ್ಲಿ ರೂ 2221.50 ಮತ್ತು ಮುಂಬೈನಲ್ಲಿ ರೂ 2071.50 ಆಗಿತ್ತು. ಇದೀಗ, ಏಪ್ರಿಲ್ 1 ಅಂದರೆ, ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2028 ರೂ., ಕೋಲ್ಕತ್ತಾದಲ್ಲಿ 2132 ರೂ., ಮುಂಬೈನಲ್ಲಿ 1980 ರೂ. ಮತ್ತು ಚೆನ್ನೈನಲ್ಲಿ 2192.50 ರೂ.ಗೆ ದೊರೆಯಲಿದೆ.