Home latest ಚಿನ್ನ ಖರೀದಿಸುವವರಿಗೆ ಚಿನ್ನದಂತಹ ಸುದ್ದಿ

ಚಿನ್ನ ಖರೀದಿಸುವವರಿಗೆ ಚಿನ್ನದಂತಹ ಸುದ್ದಿ

Hindu neighbor gifts plot of land

Hindu neighbour gifts land to Muslim journalist

ಭಾರತ ಚಿನ್ನ ಪ್ರಿಯದೇಶ. ಇಲ್ಲಿ ನಿರಾಭರಣ ಸುಂದರಿಗಳಿದ್ದರೂ, ಆಭರಣಪ್ರಿಯರು ಹೆಚ್ಚಿದ್ದಾರೆ. ಆಭರಣಪ್ರಿಯರಿಗೆ ಸಿಹಿಯಾದ ಸುದ್ದಿ ಇದಾಗಿದೆ. ಇನ್ನಷ್ಟು ಆಭರಣ ಕೊಂಡುಕೊಂಡು ರಮಣೀಯತೆ ಹೆಚ್ಚಿಸಿಕೊಳ್ಳಲು ಸುಅವಕಾಶ ಒದಗಿಬಂದಿದೆ.

ಕಳೆದ ಕೆಲದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಮುಂದುವರೆದಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮವು ಜಾಗತಿಕ ಮಟ್ಟದಲ್ಲಿ ಚಿನ್ನ  ಬೆಳ್ಳಿ ದರಗಳ  ಮೇಲೆ ಬೀರುತ್ತಿರುವುದನ್ನು ಗಮನಿಸಬಹುದಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಒಂದು ರೀತಿಯಲ್ಲಿ ಕಣ್ಣು ಮುಚ್ಚಾಲೆ ಆಟ ಆಡುತ್ತಿದೆ.

ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಕುಸಿತವಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 100 ರೂ. ಇಳಿಕೆ ಕಂಡಿದೆ. ಭಾರತದಲ್ಲಿ 3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇದ್ದುದು 47,800 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,460 ರೂ. ಇದ್ದುದು 52,140 ರೂ. ಆಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 66,300 ರೂ. ಇದ್ದುದು ಇಂದು 66,200 ರೂ.ಗೆ ಕುಸಿತವಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 70,700 ರೂ, ಮೈಸೂರು- 70,700 ರೂ., ಮಂಗಳೂರು- 70,700 ರೂ.

ಇಂದಿನ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಬೆಂಗಳೂರು- 52,140 ರೂ, ಮಂಗಳೂರು- 52,140 ರೂ, ಮೈಸೂರು- 52,140 ರೂ. ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ – ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ.