Home latest ಗ್ಯಾಸ್ ಸಿಲಿಂಡರ್ ಬದಲಿಗೆ ಬಂತು ನೀರು ತುಂಬಿದ ಸಿಲಿಂಡರ್ |ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ...

ಗ್ಯಾಸ್ ಸಿಲಿಂಡರ್ ಬದಲಿಗೆ ಬಂತು ನೀರು ತುಂಬಿದ ಸಿಲಿಂಡರ್ |ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ :ನ್ಯಾಯತರ್ಪುನ ನಿವಾಸಿ ಗ್ಯಾಸ್ ಸಂಸ್ಥೆಯ ಮೂಲಕ ಅಡುಗೆ ಅನಿಲವನ್ನು ಖರೀದಿಸಿದ್ದು, ಅದು ಉಪಯೋಗಿಸಲು ಆಗದ ಹಿನ್ನೆಲೆಯಲ್ಲಿ ಪರೀಕ್ಷಿಸಿದಾಗ ಗ್ಯಾಸ್ ಬದಲು ನೀರು ತುಂಬಿಸಿ ನೀಡಿದ ಘಟನೆ ವರದಿಯಾಗಿದೆ.

ಬೆಳ್ತಂಗಡಿಯ ಗ್ಯಾಸ್ ಸಂಸ್ಥೆಯ ಮೂಲಕ ಅಡುಗೆ ಅನಿಲವನ್ನು ಜಾರಿಗೆ ಬೈಲು ನಿವಾಸಿ ಅಬ್ದುಲ್ ರಹೀಂ ಎಂಬವರು 3 ದಿನಗಳ ಮೊದಲು ಗ್ಯಾಸ್ ಸಿಲಿಂಡರ್ ಖರೀದಿಸಿದ್ದರು. ಮನೆಯಲ್ಲಿ ಅಡುಗೆ ಮಾಡಲು ಸ್ಟವ್
ಉರಿಸಲು ಮುಂದಾದಾಗ ಸಿಲಿಂಡರ್‌ನಲ್ಲಿ ಗ್ಯಾಸ್ ಬರುವುದಿಲ್ಲ ಎಂದು ಸರಿಯಾಗಿ ಪರೀಕ್ಷಿಸಲು ಮುಂದಾದರು. ಆಗ ಗ್ಯಾಸ್ ಇಲ್ಲ,ಬರೀ ನೀರು ತುಂಬಿದ ಸಿಲಿಂಡರ್ ಎಂದು ತಿಳಿದು ಬಂದಿದೆ.

ಇದರ ಜೊತೆ ಜೊತೆಗೆ ಇಲ್ಲಿನ ಉರುವಾಲು ಸಮೀಪದ ನಿವಾಸಿ ಹಾಗೂ ಗೇರುಕಟ್ಟೆ ಸಮೀಪದ ಎರುಕಡಪ್ಪು ವ್ಯಕ್ತಿಯೋರ್ವರು ಕೂಡ ಅನಿಲ ಸಿಲಿಂಡರ್ ಸರಬರಾಜು ಮಾಡುವ ಸಂಸ್ಥೆಯ ಮೇಲೆ
ದೂರು ನೀಡಲು ಮುಂದಾಗಿದ್ದಾರೆ.ಬಡವರ ಜೊತೆ ಚೆಲ್ಲಾಟ ನಡೆಸುವ ಸಂಸ್ಥೆಯ ವಂಚನೆಯನ್ನು ತಡೆಯಲು ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಬೇಸರದಲ್ಲಿ
ಹೇಳಿದ್ದಾರೆ. ಈ ಸಂದರ್ಭದಲ್ಲಿ, ಕಳಿಯ ಗ್ರಾಮ ಪಂಚಾಯತು ಮಾಜಿ ಸದಸ್ಯ ಇಲ್ಯಾಸ್, ಸ್ಥಳೀಯರಾದ ಅಕ್ಷ ಅಲಿ ಉಪಸ್ಥಿತರಿದ್ದರು.