Home latest Flipkart Big Bachat Dhamaal : ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ನಾಳೆಯಿಂದ ಪ್ರಾರಂಭ,...

Flipkart Big Bachat Dhamaal : ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ನಾಳೆಯಿಂದ ಪ್ರಾರಂಭ, ಸ್ಮಾರ್ಟ್‌ಫೋನ್‌ಗಳಿಂದ ಲ್ಯಾಪ್‌ಟಾಪ್‌ಗಳವರೆಗಿನ ವಸ್ತುಗಳು ಅತೀ ಅಗ್ಗದ ದರದಲ್ಲಿ!

Flipkart Big Bachat Dhamaal

Hindu neighbor gifts plot of land

Hindu neighbour gifts land to Muslim journalist

Flipkart Big Bachat Dhamaal : ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಒಂದೊಳ್ಳೆ ಶಾಪಿಂಗ್‌ ಅವಕಾಶ ನೀಡಿದೆ. ಇ-ಕಾಮರ್ಸ್ ದೈತ್ಯ ನಾಳೆಯಿಂದ ಅಂದರೆ ಮಾರ್ಚ್ 3 ರಿಂದ ಹೋಳಿ ಹಬ್ಬದಂದು ʼಬಿಗ್ ಬಚತ್ ಧಮಾಲ್ʼ (Flipkart Big Bachat Dhamaal) ಮಾರಾಟವನ್ನು ಪ್ರಾರಂಭಿಸುತ್ತಿದೆ. ಇಲ್ಲಿ ನೀವು ಉತ್ಪನ್ನಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಈ ಫ್ಲಿಪ್‌ಕಾರ್ಟ್ ಮಾರಾಟವು ಮಾರ್ಚ್ 5 ರವರೆಗೆ ನಡೆಯಲಿದೆ.

ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಗ್ರಾಹಕರು ತಮಗಿಷ್ಟ ಬಂದ 1 ಲಕ್ಷ ಉತ್ಪನ್ನಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಪಡೆಯಬಹುದು. ಹೌದು, ಇಲ್ಲಿ ಗ್ರಾಹಕ 1,000 ಬ್ರಾಂಡ್‌ಗಳ ಉತ್ಪನ್ನಗಳಲ್ಲಿ ರಿಯಾಯಿತಿ ಪಡೆಯಬಹುದು. ಈ ಸೇಲ್‌ನಲ್ಲಿ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್ ಟಿವಿಗಳಲ್ಲಿ ಭಾರಿ ಉಳಿತಾಯವನ್ನು ಮಾಡಬಹುದು. ಪ್ರಸ್ತುತ, ಉತ್ಪನ್ನಗಳ ಮೇಲೆ ಫ್ಲಿಪ್‌ಕಾರ್ಟ್ ನೀಡುವ ಡೀಲ್‌ಗಳನ್ನು ಬಹಿರಂಗಪಡಿಸಲಾಗಿಲ್ಲ.

ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ದೊಡ್ಡ ಮೊತ್ತವನ್ನು ಉಳಿಸಿ : ವರದಿಗಳ ಪ್ರಕಾರ, ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಪೀಠೋಪಕರಣಗಳು, ಹಾಸಿಗೆಗಳು, ಶೂ ರ್ಯಾಕ್‌ಗಳು ಮತ್ತು ಪೋರ್ಟಬಲ್ ಲ್ಯಾಪ್‌ಟಾಪ್‌ಗಳಂತಹ ಉತ್ಪನ್ನಗಳ ಮೇಲೆ ರಿಯಾಯಿತಿಗಳು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಗ್ರಾಹಕರು ಮಲಗುವ ಕೋಣೆ ಮತ್ತು ಲಿವಿಂಗ್ ರೂಮ್ ಪೀಠೋಪಕರಣಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿ ಪಡೆಯಬಹುದು. ಅದೇ ಸಮಯದಲ್ಲಿ, ಕೆಲವು ಪ್ರೀಮಿಯಂ ಉತ್ಪನ್ನಗಳನ್ನು 60% ಕಡಿಮೆ ಬೆಲೆಗೆ ಖರೀದಿಸಬಹುದು. ಇದಲ್ಲದೆ, ಗೃಹೋಪಯೋಗಿ ವಸ್ತುಗಳ ಮೇಲೆ 75 ಪ್ರತಿಶತದವರೆಗೆ ಮತ್ತು ಟಿವಿಗಳಲ್ಲಿ 60 ಪ್ರತಿಶತದವರೆಗೆ ಉಳಿತಾಯ ಮಾಡಬಹುದು.

ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ನಲ್ಲಿ ಆಹಾರ ಪದಾರ್ಥಗಳು, ಆಟಿಕೆಗಳು, ಕ್ರೀಡಾ ವಸ್ತುಗಳು ಮತ್ತು ಸೌಂದರ್ಯ ಉತ್ಪನ್ನಗಳ ಮೇಲೂ ರಿಯಾಯಿತಿ ನೀಡಲಾಗುತ್ತದೆ. ಇದರೊಂದಿಗೆ ಗೃಹಾಲಂಕಾರ, ಅಡುಗೆ ಉಪಕರಣಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳ ಮೇಲೆ ಪ್ರಚಾರದ ಕೊಡುಗೆಗಳನ್ನು ನೀಡಲಾಗುವುದು. ಅಷ್ಟೇ ಅಲ್ಲ, ಈ ಸೇಲ್‌ನಲ್ಲಿ ಬ್ಯಾಂಕ್‌ಗಳು ಕೆಲವು ಹೆಚ್ಚುವರಿ ರಿಯಾಯಿತಿ ಕೊಡುಗೆಗಳನ್ನು ಸಹ ನೀಡುತ್ತವೆ.

ಎಸಿ ಮೇಲೆಯೂ ರಿಯಾಯಿತಿ ದೊರೆಯಲಿದೆ

ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ, ಫ್ಲಿಪ್‌ಕಾರ್ಟ್ ಮಾರಾಟದಲ್ಲಿ AC ಗಳ (ಏರ್ ಕಂಡಿಷನರ್) ಮೇಲೆ 55% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಅಂದರೆ ಬರುತ್ತಿರುವ ಬಿಸಿಲಿನ ತಾಪವನ್ನು ತಪ್ಪಿಸಲು ನೀವು ಈಗ ಕಡಿಮೆ ಬೆಲೆಗೆ ಹವಾನಿಯಂತ್ರಣವನ್ನು ಖರೀದಿಸಬಹುದು.

ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳು

ಮಾರಾಟದ ಸಮಯದಲ್ಲಿ ಕೆಲವು ಉತ್ತಮ ಮಾರಾಟವಾಗುವ ಲ್ಯಾಪ್‌ಟಾಪ್‌ಗಳನ್ನು 45 ಪರ್ಸೆಂಟೇಜ್‌ ಕಡಿಮೆಗೆ ಖರೀದಿಸಬಹುದು. ಅದೇ ಸಮಯದಲ್ಲಿ, Apple, Samsung, POCO ಮತ್ತು Realme ನಿಂದ ಸ್ಮಾರ್ಟ್‌ಫೋನ್‌ಗಳನ್ನು ಸಹ ರಿಯಾಯಿತಿಯಲ್ಲಿ ಖರೀದಿಸಬಹುದು.