Home latest ಇಂಗ್ಲೀಷ್ ನಲ್ಲಿ ಮಾತಾಡಿದ್ದಕ್ಕೆ ನಾಯಿ ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಹಿಂದಿ ವ್ಯಕ್ತಿ !

ಇಂಗ್ಲೀಷ್ ನಲ್ಲಿ ಮಾತಾಡಿದ್ದಕ್ಕೆ ನಾಯಿ ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಹಿಂದಿ ವ್ಯಕ್ತಿ !

Hindu neighbor gifts plot of land

Hindu neighbour gifts land to Muslim journalist

ವ್ಯಕ್ತಿಯೋರ್ವ ಇಂಗ್ಲೀಷ್ ನಲ್ಲಿ ಮಾತನಾಡಿದ ಎಂಬ ಒಂದೇ ಒಂದು ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿ ಆತನ ಮೇಲೆ ನಾಯಿ ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ಮಾಡಿಸಿದ ಘಟನೆಯೊಂದು ನಡೆದಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.

ಮಾಜಿ ಲೆಫ್ಟಿನೆಂಟ್ ಸಿ.ವಿ. ಬಹದ್ದೂರ್ ಅವರ ಮೊಮ್ಮಗ ಅಂಶುಮಾನ್ ಅವರು ನಾಯಿ ಕಚ್ಚಿಸಿಕೊಂಡ ವ್ಯಕ್ತಿ. ಡೆಹ್ರಾಡೂನ್ ನಿವಾಸಿಯಾಗಿರುವ ಅಂಶುಮಾನ್ ದೆಹಲಿಯ ನಿವಾಸಿ. ಅಂಶುಮಾನ್ ಅಂಗಡಿಗೆ ಹೋದಾಗ ಇಂಗ್ಲೀಷ್ ನಲ್ಲಿ ಮಾತನಾಡಿದ್ದಾರೆ. ಇದನ್ನು ಕೇಳಿ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ಸಿಟ್ಟುಗೊಂಡಿದ್ದಾನೆ. ನೀನು ನೇಪಾಳಿಗನಾ ಎಂದು ಕೇಳಿದ್ದಾನೆ. ಆಗ ಅಂಶುಮಾನ್ ಅವರು ತಮ್ಮ ಪರಿಚಯ ಮಾಡಿಕೊಂಡು, ನೇಪಾಳಿಗ ಅಲ್ಲ ಎಂದಿದ್ದಾರೆ.

ಆದರೂ ಸುಮ್ಮನೆ ಇರದ ವ್ಯಕ್ತಿ, ನೀನು ನೇಪಾಳಿಗನೇ. ಅದಕ್ಕೆ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿರುವೆ, ಮಗನೇ ನಿಲ್ಲು ನಿನಗೆ ಮಾಡಿಸುವೆ ಎಂದು ತನ್ನ ಜತೆ ತಂದಿರುವ ನಾಯಿಯನ್ನು ಅಂಶುಮಾನ್ ಮೇಲೆ ಭೂ ಬಿಟ್ಟಿದ್ದಾನೆ. ಅದು ಹೋಗಿ ಕಚ್ಚಿದೆ. ಇದರಿಂದ ಹೆದರಿದ ಅಂಶುಮಾನ್ ಅವರು ಅಂಗಡಿಯೊಳಕ್ಕೆ ಓಡಿಹೋಗಿದ್ದಾನೆ. ಆದರೂ ಬಿಡದ ವ್ಯಕ್ತಿ ನಾಯಿಯನ್ನು ಅಲ್ಲಿಯೇ ಬಿಟ್ಟು ನಾಲ್ಕಾರು ಬಾರಿ ಕಚ್ಚಿಸಿದ್ದಾನೆ.

ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋದ ಅಂಶುಮಾನ್ ಚಿಕಿತ್ಸೆ ಪಡೆದು ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.