Home latest ಭಕ್ತರ ಮೇಲೆಯೇ ಉರುಳಿ ಬಿದ್ದ ‘ದೇವರ ರಥ”: ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ

ಭಕ್ತರ ಮೇಲೆಯೇ ಉರುಳಿ ಬಿದ್ದ ‘ದೇವರ ರಥ”: ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ

Hindu neighbor gifts plot of land

Hindu neighbour gifts land to Muslim journalist

ದೇವರ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಮಿಳುನಾಡು ಗಡಿಭಾಗದ ಮಾದೇನಹಳ್ಳಿಯಲ್ಲಿ ನಡೆದಿದೆ.

ಮೃತರು ಮಾದೇನಹಳ್ಳಿ ಮನೋಹರಂ ಮತ್ತು ಶರವಣನ್.

ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಳಿಯಮ್ಮ ದೇವಾಲಯದ ರಥೋತ್ಸವದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರತಿವರ್ಷದಂತೆ ಈ ವರ್ಷವೂ ಕಾಳಿಯಮ್ಮ ರಥೋತ್ಸವವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ರಥವನ್ನು ನೂರಾರು ಭಕ್ತರು ಎಳೆದುಕೊಂಡು ಹೋಗುವ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದಿದೆ.

ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಜಾತ್ರೆಯಲ್ಲಿ ಸುಮಾರು 18 ಹಳ್ಳಿಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪಾಪರಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.