Home latest ಆಸ್ತಿಗಾಗಿ ತಾಯಿಗೇ ಸ್ಲೋಪಾಯ್ಸನ್ ಕೊಡ್ತಾ ಇದ್ದ ಮಗಳು..! ಕೊನೆಗೆ?

ಆಸ್ತಿಗಾಗಿ ತಾಯಿಗೇ ಸ್ಲೋಪಾಯ್ಸನ್ ಕೊಡ್ತಾ ಇದ್ದ ಮಗಳು..! ಕೊನೆಗೆ?

Hindu neighbor gifts plot of land

Hindu neighbour gifts land to Muslim journalist

ಹಣ, ಆಸ್ತಿ, ಭೂಮಿ ಇವೆಲ್ಲ ಆಸೆಗಳಿಗಾಗಿ ಹಲವು ಕೊಲೆ, ವಂಚನೆ, ಮೋಸ ನಡೆಯುವುದನ್ನು ನೀವು ಕೇಳಿರಬಹುದು. ನೋಡಿರಬಹುದು. ಆದರೆ ಇಲ್ಲಿ ನಡೆದಿರುವುದು ಕೊಲೆ ಮಾತ್ರವಲ್ಲ, ಸಂಬಂಧಗಳ ಕೊಲೆ. ಹೆತ್ತ ತಾಯಿಯನ್ನೇ ಮಗಳು ಹಂತ ಹಂತವಾಗಿ ಸಾಯಿಸಿದ್ದಾಳೆ. ನಿಜಕ್ಕೂ ಹೀಗೂ ಮಾಡ್ತಾರಾ? ಸ್ವಂತ ತಾಯಿಯನ್ನು ಮಗಳು ಹಿಡಿ ಮಣ್ಣಿಗೋಸ್ಕರ ಈ ರೀತಿ ಮಾಡಿದ್ದು ನಿಜಕ್ಕೂ ಖೇದಕರ. ತಾಯಿ ಪ್ರೀತಿಗಿಂತ ಹಣದ ವಾಸನೆ ಹೆಚ್ಚು ಪ್ರಿಯ ಅಂತ ಮನಸ್ಥಿತಿ ಇರುವವರು ಮಾತ್ರ ಈ ಕೃತ್ಯ ಮಾಡಲು ಸಾಧ್ಯ.

ಅಷ್ಟಕ್ಕೂ ಈ ಘಟನೆ ನಡೆದಿರುವುದು ಕೇರಳದ ಕುನ್ನಂಕುಳಂನ ಕಿಜೂರ್‌ನಲ್ಲಿ ನಡೆದಿದ್ದು. ಆಸ್ತಿಗಾಗಿ ಸ್ವಂತ ಮಗಳೇ ತನ್ನ ತಾಯಿಗೆ ವಿಷ ಉಣಿಸಿ ಕೊಂದಿದ್ದಾಳೆ.
ಚೋಳಿಯಟ್ಟು ನಿವಾಸಿ ಚಂದ್ರನ್ ಎಂಬವರ ಪತ್ನಿ ರುಕ್ಮಿಣಿ (57) ಮೃತ ದುರ್ದೈವಿ. ಮಗಳು ಇಂದುಲೇಖಾ (40) ಬಂಧಿತಳು.

ಕೆಲ ದಿನಗಳ ಹಿಂದೆ ರುಕ್ಮಿಣಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಅವರನ್ನು ಮಗಳೇ ತ್ರಿಶೂರ್‌ನ ಖಾಸಗಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾಳೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಆದರೆ ಅನಂತರ ನಡೆದ ವಿವರವಾದ ತಪಾಸಣೆಯಿಂದ, ವಿಷಪ್ರಾಶನದಿಂದಾಗಿ ಸಾವು ಸಂಭವಿಸಿದೆ ಎಂದು ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸರು ಮಗಳನ್ನು, ವಶಕ್ಕೆ ಪಡೆದುಕೊಂಡು, ಪ್ರಶ್ನಿಸಿದಾಗ ವಿಷಪ್ರಾಶನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಇಂದುಲೇಖಾ ತನ್ನ ತಾಯಿ ರುಕ್ಮಿಣಿ ಅವರಲ್ಲಿ ಆಸ್ತಿಯನ್ನು ಕೇಳಿದ್ದಾಳೆ. ಆದರೆ ತಾಯಿ ನಿರಾಕರಿಸಿದ್ದಾರೆ. ಹಾಗಾಗಿ ಆಸ್ತಿ ಕೊಡದ ಸಿಟ್ಟು ದ್ವೇಷಕ್ಕೆ ತಿರುಗಿ ಕೊನೆಗೆ ಕೊಲೆಯಲ್ಲಿ ಸಮಾಪ್ತಿಯಾಗಿದೆ. ಮಗಳು ಇಂದುಲೇಖಾ, ತಂದೆ ಮತ್ತು ತಾಯಿಗೆ ಬಹಳ ಸಮಯದಿಂದ ಆಹಾರದಲ್ಲಿ ವಿಷಪೂರಿತ ಮಾತ್ರೆಗಳನ್ನು ಹಾಕಿ ಕೊಡುತ್ತಿದ್ದಳು. ದೇಹದ ಮೇಲೆ ಯಾವ ವಿಷವು ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿಯಲು ಈಕೆ ಫೋನ್ ನಲ್ಲಿ ಹುಡುಕಿದ ವಿವರಗಳು ಪೊಲೀಸರಿಗೆ ಲಭ್ಯವಾಗಿದೆ.

ಆದರೆ ಮೃತ ರುಕ್ಮಿಣಿ ಅವರ ಗಂಡ, ಅಂದರೆ ಇಂದುಲೇಖಾ ಅಪ್ಪನೇ ಮಗಳ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಶಯದ ಆಧಾರದಲ್ಲಿ ದೂರು ನೀಡಿದಾಗ, ಪೊಲೀಸರ ವಿಸ್ತ್ರತವಾದ ತನಿಖೆಯಲ್ಲಿ ಈ ಸತ್ಯ ಬಯಲುಗೊಂಡಿದೆ.