Home Karnataka State Politics Updates D.K Suresh: ಕನಕಪುರದಿಂದ ಡಿಕೆ ಸುರೇಶ್ ನಾಮಪತ್ರ, ಹಾಗಾದ್ರೆ ಪದ್ಮನಾಭ ನಗರಕ್ಕೆ ಹೋಗ್ತಾರಾ ಡಿಕೆ ಶಿವಕುಮಾರ್...

D.K Suresh: ಕನಕಪುರದಿಂದ ಡಿಕೆ ಸುರೇಶ್ ನಾಮಪತ್ರ, ಹಾಗಾದ್ರೆ ಪದ್ಮನಾಭ ನಗರಕ್ಕೆ ಹೋಗ್ತಾರಾ ಡಿಕೆ ಶಿವಕುಮಾರ್ ?!

D.K Suresh

Hindu neighbor gifts plot of land

Hindu neighbour gifts land to Muslim journalist

D.K Suresh: ಚುನಾವಣಾ ಕಾವು ಎಲ್ಲೆಡೆ ಗರಿಗೆದರಿದ್ದು, ನಾಮ ಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಈ ನಡುವೆ, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಭರ್ಜರಿ ಗೆಲುವು ಸಾಧಿಸುವ ರಣತಂತ್ರ ರೂಪಿಸಿದ್ದಾರೆ. ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಶೋಕ್ ಅವರಿಗೆ ಕಾಂಗ್ರೆಸ್ ಎರಡು ಕ್ಷೇತ್ರಗಳಿಗೆ ಟಿಕೆಟ್  ನೀಡಿದ್ದು, ಅವರನ್ನು ಕನಕಪುರದಲ್ಲಿ ಡಿಕೆ. ಶಿವಕುಮಾರ್ ಅವರ ವಿರುದ್ಧ ಕಣಕ್ಕೆ ಇಳಿಸಲು ತಯಾರಿ ನಡೆಸಿದೆ. ಬಿಜೆಪಿಗೆ ತಿರುಗು ಬಾಣ ನೀಡಲು ಮುಂದಾಗಿರುವ  ಡಿಕೆಶಿ, ತಮ್ಮ ಸಹೋದರ ಡಿಕೆ ಸುರೇಶ್ ಅವರನ್ನು ಪದ್ಮನಾಭನಗರದಲ್ಲಿ ಆರ್. ಅಶೋಕ್ ವಿರುದ್ಧ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.

ರಾಮನಗರದ ಸಂಸದ ಡಿಕೆ ಸುರೇಶ್ ( D.K Suresh) ಕನಕಪುರ ವಿಧಾನಸಭಾ ಕ್ಷೇತ್ರದಿಂದ (Kanakapur Constituency) ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಹೋದರ ಡಿಕೆ ಶಿವಕುಮಾರ್  (KPCC President DK Shivakumar) ಅವರ ನಾಮಪತ್ರ ನಿರಾಕರಣೆ ಆಗುವ ಸಂಭವ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.ಡಿಕೆ ಶಿವಕುಮಾರ್ ಮೂರು ದಿನಗಳ ಹಿಂದೆ ಮೆಗಾ ರೋಡ್ ಶೋ ಮೂಲಕ ನಾಮಪತ್ರ (Nomination) ಸಲ್ಲಿಸಿದ್ದು, ಕೇವಲ ಆಪ್ತರ ಸಮ್ಮುಖದಲ್ಲಿ ಕನಕಪುರ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: KPSC ಕಿರಿಯ ಅಭಿಯಂತರರ ನೇಮಕಾತಿ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ!