Home latest Crime: ದೇವರ ಕೋಣೆ ಎದುರು ಕಳ್ಳ ಮಾಡಿಕೊಂಡ ವಿಚಿತ್ರ ಎಡ್ವಟ್- ಮಾಲೀಕನ ಕೈಗೆ ತಗಲಾಕ್ಕೊಂಡ್ಬಿಟ್ಟ

Crime: ದೇವರ ಕೋಣೆ ಎದುರು ಕಳ್ಳ ಮಾಡಿಕೊಂಡ ವಿಚಿತ್ರ ಎಡ್ವಟ್- ಮಾಲೀಕನ ಕೈಗೆ ತಗಲಾಕ್ಕೊಂಡ್ಬಿಟ್ಟ

Crime

Hindu neighbor gifts plot of land

Hindu neighbour gifts land to Muslim journalist

Crime: ಬೆಂಗಳೂರಿನ ಉದ್ಯಮಿಯೊಬ್ಬರ( Bangalore industrialist) ಮನೆಗೆ ಕಳ್ಳರು ನುಗ್ಗಿದ್ದನ್ನು ಸೂಕ್ಷ್ಮವಾಗಿ ಅರಿತು ತಮ್ಮ ಜಾಣ್ಮೆಯಿಂದ ಕಳ್ಳರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಉದ್ಯಮಿ ಮತ್ತು ಕುಟುಂಬದವರು ವಾರಣಾಸಿ ಪ್ರವಾಸ ಮುಗಿಸಿಕೊಂಡು ತಡರಾತ್ರಿ 1.30 ರ ಸುಮಾರಿಗೆ ಮನೆಗೆ ಬೆಂಗಳೂರಿನ ಸದಾಶಿವನಗರದ ತಮ್ಮ ಮನೆಗೆ ಮರಳಿದ್ದಾರೆ.

ನಂತರ ಇಲ್ಲಿದೆ ನೋಡಿ ಕಳ್ಳತನದ (Crime) ಟ್ವಿಸ್ಟ್, ಸದ್ಯ ತಡರಾತ್ರಿಯಾಗಿದ್ದರಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತದೆ ಎಂದು ಉದ್ಯಮಿ ಕುಟುಂಬ ಸದ್ದು ಮಾಡದೆ ನಿಧಾನವಾಗಿ ಬೀಗ ತೆಗೆದು ಮನೆ ಪ್ರವೇಶಿಸಿದಾಗ ಮನೆಯೊಳಗಿನಿಂದ ಸದ್ದು ಕೇಳಿದೆ. ನೋಡಿದಾಗ ವಾರ್ಡ್ ರೋಬ್ ತಡಕಾಡುತ್ತಿರುವ ದೃಶ್ಯ ಕಂಡು ಬಂದಿದೆ. ಈ ದೃಶ್ಯವನ್ನು ಕಂಡು ತಕ್ಷಣ ಬೇರೆ ಯಾರೇ ಆಗಿದ್ದರೂ ಕೂಗಾಡಿ ಕಿರುಚಾಡಿ ಕಳ್ಳರು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದರು. ಆದರೆ ಇವರು ಹಾಗೆ ಮಾಡಲಿಲ್ಲ. ತುಂಬಾ ಬುದ್ದಿವಂತಿಕೆಯನ್ನು ಉಪಯೋಗಿಸಿ ಕಳ್ಳರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮೊದಲು ಇವರು ವಾರಣಾಸಿಯಿಂದ ತಂದಿದ್ದ ಪವಿತ್ರ ವಸ್ತುಗಳನ್ನು ಇಡಲು ಪೂಜಾ ಕೋಣೆಯತ್ತ ತೆರಳಿದ್ದಾರೆ. ಆದರೆ ಅವರಿಗೆ ಅಲ್ಲಿ ಶಾಕ್ ಕಾದಿತ್ತು. ದೇವರ ಕೋಣೆಯ ಹೊರಗೆ ಎರಡು ಜೊತೆ ಶೂ ಗಳಿದ್ದದ್ದು ಕಂಡು ಬಂದಿದೆ.
ತಕ್ಷಣವೇ ಮನೆಗೆ ದರೋಡೆಕೋರರು ನುಗ್ಗಿದ್ದಾರೆ ಎನ್ನುವುದು ಇವರಿಗೆ ಅರ್ಥವಾಗಿದೆ. ಜೊತೆಗೆ ಮೊದಲ ಮಹಡಿಯಿಂದ ಸದ್ದು ಕೇಳಿ ಬಂದಿದೆ. ಕೂಡಲೇ ಏನು ಮಾಡಬೇಕು ಎನ್ನುವುದು ಅರ್ಥವಾಗಿತ್ತು. ಸದ್ದುಮಾಡದೆ ಮೊದಲ ಮಹಡಿಗೆ ಹೋಗಿ ಕಳ್ಳರು ಇದ್ದ ಕೊಠಡಿಯ ಬಾಗಿಲು ಹಾಕಿದ್ದಾರೆ. ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

ನಂತರ ಇಬ್ಬರೂ ಕಳ್ಳರು ಮನೆ ಮಾಲೀಕರ ಬಳಿ ಬಿಟ್ಟು ಬಿಡುವಂತೆ ಕೈಕಾಲು ಹಿಡಿದಿದ್ದಾರೆ. ನಾವು ಕಳ್ಳರಲ್ಲ, ಹೊಟ್ಟಪಾಡಿಗೆ ತಿಳಿಯದೆ ಮಾಡಿಬಿಟ್ಟಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ. ಮನೆ ಮಾಲೀಕ ಅವರೂ ಸಹ ಕಳ್ಳರ ಮಾತಿಗೆ ಮರುಗಿ ಬಿಟ್ಟುಬಿಡಲು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಕಳ್ಳರನ್ನು ಬಿಡಲು ಒಪ್ಪಿಲ್ಲ. ಸಿಕ್ಕಿಹಾಕಿಕೊಂಡ ಎಲ್ಲ ಕಳ್ಳರೂ ತಾವು ಅಮಾಯಕರು, ತಿಳಿಯದೆ ಮಾಡಿದ್ದೇವೆ ಬಿಟ್ಟುಬಿಡಿ ಎಂದು ಅಂಗಾಲಾಚುತ್ತಾರೆ ಎಂದು ಯಜಮಾನರಿಗೆ ತಿಳಿಹೇಳಿ ಕಳ್ಳರನ್ನು ಕರೆದೊಯ್ದಿದ್ದಾರೆ.

ಇದನ್ನು ಓದಿ: Sports Shocking News: ಕ್ರಿಕೆಟ್ ಲೋಕಕ್ಕೇ ಊಹಿಸದ ಆಘಾತ- ಒಂದೇ ದಿನ ಇಬ್ಬರು ಸ್ಟಾರ್ ಕ್ರಿಕೆಟಿಗರ ನಿಧನ

24 ವರ್ಷದ ಅರುಣ್ ಕುಮಾರ್ ಮತ್ತು 23 ವರ್ಷದ ವಿನಯ್ ರೇವಂಕರ್ ಎಂಬ ಬಂಧಿತರಾದ ಇಬ್ಬರ ಬಳಿಯೂ 1.6 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳು ಮತ್ತು ಮೊಬೈಲ್ ಪತ್ತೆಯಾಗಿದೆ. ಇವು ದೇವರ ವಿಗ್ರಹಗಳಿಗೆ ಹಾಕಿದ್ದ ಸರಗಳು ಎಂದು ತಿಳಿದು ಬಂದಿದೆ.