Home latest ಮಾತನಾಡುವವರಿಗಿಂತ ಮೌನಿಗಳಲ್ಲಿ ಕೊರೊನಾ ಸಾಧ್ಯತೆ ಹೆಚ್ಚು !!!

ಮಾತನಾಡುವವರಿಗಿಂತ ಮೌನಿಗಳಲ್ಲಿ ಕೊರೊನಾ ಸಾಧ್ಯತೆ ಹೆಚ್ಚು !!!

Hindu neighbor gifts plot of land

Hindu neighbour gifts land to Muslim journalist

ಇಬ್ಬರು ವ್ಯಕ್ತಿಗಳು ಮಾಸ್ಕ್ ಇಲ್ಲದೆ ಮಾತನಾಡುತ್ತಿದ್ದರೆ, ಒಬ್ಬ ವ್ಯಕ್ತಿ ಮಾತನಾಡುತ್ತಿದ್ದು, ಮತ್ತೊಬ್ಬ ವ್ಯಕ್ತಿ ಮೌನವಾಗಿದ್ದರೆ ಮೌನವಾಗಿರುವ ವ್ಯಕ್ತಿಗೆ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೌದು. ಇಬ್ಬರೂ ವ್ಯಕ್ತಿಗಳು ಮಾತನಾಡುತ್ತಿದ್ದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂಬ ಹೊಸ ವಿಷಯವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.

ಗಾಳಿಯ ಮೂಲಕ ಕೊರೊನಾ ಸೋಂಕು ಹರಡುತ್ತದೆ, ಈ ಕಾರಣಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡುವಾಗ ಬಾಯಿಂದ ಚಿಮ್ಮುವ ಡ್ರಾಪ್‌ಲೆಟ್ಸ್‌ನಿಂದ ಯಾವ ರೀತಿ ಸೋಂಕು ಹರಡುತ್ತದೆ ಎಂಬ ಬಗ್ಗೆ ಐಐಎಸ್‌ಸಿ ಬಾಹ್ಯಾಕಾಶ ಎಂಜಿನಿಯರಿಂಗ್ ವಿಭಾಗವು ಸ್ಟಾಕ್‌ಹೋಮ್‌ನ ನಾರ್ಡಿಕ್ ಇನ್‌ಸ್ಟಿಟ್ಯೂಟ್ ಫಾರ್ ಥಿಯೋರಿಟಿಕಲ್ ಫಿಸಿಕ್ಸ್ ಮತ್ತು ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಥಿಯೋರಿಟಿಕಲ್ ಸೈನ್ಸಸ್‌ನ ವಿಜ್ಞಾನಿಗಳ ಸಹಯೋಗದಲ್ಲಿ ಸಂಶೋಧನೆ ನಡೆಸಿದೆ. ಇದು ಜರ್ನಲ್‌ನಲ್ಲಿ ಪ್ರಕಟವಾಗಿದೆ.

ನಾಲ್ಕು ಅಡಿ ಅಂತರದಲ್ಲಿ ನಿಂತು ವ್ಯಕ್ತಿಗಳು ಪರಸ್ಪರ ಮಾತನಾಡಿದರೆ ಎಂಜಲಿನ ಸಣ್ಣ ಹನಿ (ಡ್ರಾಪ್‌ಲೆಟ್) ಹರಡುವ ರೀತಿ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಪ್ರಕಾರ ಇಬ್ಬರು ವ್ಯಕ್ತಿಗಳು ಮಾತನಾಡುವಾಗ ಪರಸ್ಪರ ಕಣ್ಣಿನ ಸಂಪರ್ಕ ಇಟ್ಟುಕೊಂಡೆ ತಲೆಯನ್ನು ಪರಸ್ಪರ ವಿರುದ್ಧ ದಿಕ್ಕಿಗೆ 9 ಡಿಗ್ರಿ ವಾಲಿಸಿ ಮಾತನಾಡಿದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಕಂಪ್ಯೂಟರ್ ಸಿಮ್ಯುಲೇಷನ್ ಬಳಸಿ ಇಬ್ಬರು ಮಾಸ್ಕ್ ಧರಿಸದ ವ್ಯಕ್ತಿಗಳು ನಾಲ್ಕರಿಂದ ಆರು ಆಡಿ ಅಂತರದಲ್ಲಿ ನಿಂತು ಒಂದು ನಿಮಿಷ ಮಾತನಾಡಿದರೆ ಆಗ ಡ್ರಾಪ್‌ಲೆಟ್ಸ್ ಚಿಮ್ಮುವಿಕೆ ಹಾಗೂ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲಾಗಿದೆ.

ಮಾತನಾಡುವ ಇಬ್ಬರು ವ್ಯಕ್ತಿಗಳ ಎತ್ತರವೂ ಸೋಂಕು ಹರಡುವಿಕೆಯನ್ನು ನಿರ್ಧರಿಸುತ್ತದೆ. ಇಬ್ಬರು ಸಮಾನ ಎತ್ತರದ ವ್ಯಕ್ತಿಗಳು ಮತ್ತು ಒಂದು ಅಡಿಗಿಂತ ಹೆಚ್ಚು ಎತ್ತರದ ವ್ಯತ್ಯಾಸ ಇರುವ ವ್ಯಕ್ತಿಗಳು ಪರಸ್ಪರ ಮುಖಾಮುಖಿ ಸಂವಹನ ನಡೆಸಿದಾಗ ಅವರಲ್ಲಿ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಅದೇ ಇಬ್ಬರ ಎತ್ತರದ ವ್ಯತ್ಯಾಸವು ಅರ್ಧ ಅಡಿ ಮಾತ್ರ ಇದ್ದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕೊರೋನಾ ವೈರಾಣು ಹರಡಲು ಧ್ವನಿಯ ಮಟ್ಟಮತ್ತು ಆ ಪ್ರದೇಶದಲ್ಲಿನ ಗಾಳಿಯ ಚಲನ ವಲನದ ಪ್ರಭಾವವನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಸಂಶೋಧಕರ ಮಾತು.