Home latest BPL ಕುಟುಂಬಗಳ ಅನ್ನ ಭಾಗ್ಯದ ಅಕ್ಕಿ ಕಡಿತ | ಹೊಸ BPL ಕಾರ್ಡ್ ಗೆ ಅರ್ಜಿ...

BPL ಕುಟುಂಬಗಳ ಅನ್ನ ಭಾಗ್ಯದ ಅಕ್ಕಿ ಕಡಿತ | ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್

Hindu neighbor gifts plot of land

Hindu neighbour gifts land to Muslim journalist

ಬಿಪಿಎಲ್ ಕುಟುಂಬಗಳ ಅನ್ನಭಾಗ್ಯ ಯೋಜನೆ ಅಕ್ಕಿ ಪ್ರಮಾಣ ಕಡಿತವಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಆಹಾರಧಾನ್ಯವನ್ನು ಸೆಪ್ಟೆಂಬರ್ ವರೆಗೆ ವಿತರಿಸಲಾಗುವುದು. ಸೆಪ್ಟೆಂಬರ್ ಗೆ ಅವಧಿ ಮುಗಿಯುವ ಕಾರಣ ಬಿಪಿಎಲ್ ಕುಟುಂಬದ ತಲಾ ಸದಸ್ಯರಿಗೆ 5 ಕೆಜಿ ಅಕ್ಕಿ ಕಡಿತವಾಗುವ ನಿರೀಕ್ಷೆ ಇದೆ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಬಡವರಿಗೆ ಆಹಾರ ಭದ್ರತೆ ಒದಗಿಸಲು ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ಉಚಿತವಾಗಿ ಆಹಾರಧಾನ್ಯ ಪೂರೈಕೆ ಮಾಡುತ್ತಿದ್ದು, ಈ ಯೋಜನೆ ಸೆಪ್ಟೆಂಬರ್ ಗೆ ಮುಕ್ತಾಯವಾಗಲಿದ್ದು, ಅಕ್ಟೋಬರ್ ಗೆ ಅಕ್ಕಿ ಕಡಿತವಾಗಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಸುದ್ದಿಗಾರರೊಂದಿಗೆ ಮಾತನಾಡಿ,

ರಾಜ್ಯದ 4.01 ಕೋಟಿ ಬಿಪಿಎಲ್ ಕುಟುಂಬಗಳಿಗೆ ಈಗ 10 ಕೆಜಿ ಅಕ್ಕಿ, ಎರಡು ಕೆಜಿ ರಾಗಿ ಅಥವಾ ಜೋಳ ವಿತರಿಸಲಾಗುತ್ತಿದೆ. ಕೇಂದ್ರದಿಂದ ಮಾಸಿಕ 2.15 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಕೆಯಾಗುತ್ತಿದ್ದು ರಾಜ್ಯದ ಪಾಲು 2.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಗರೀಬ್ ಕಲ್ಯಾಣ ಯೋಜನೆ ಸ್ಥಗಿತಗೊಂಡ ನಂತರ 5 ಕೆಜಿ ಅಕ್ಕಿ ಹಾಗೂ ಎರಡು ಕೆಜಿ ರಾಗಿ ಅಥವಾ ಜೋಳ ವಿತರಣೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಆಹಾರ ಸಚಿವ ಉಮೇಶ್ ಕತ್ತಿ ಗುಡ್ ನ್ಯೂಸ್ ನೀಡಿದ್ದಾರೆ. ಶೀಘ್ರವೇ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು ಎಂಬ ಮಾಹಿತಿ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಗೆ 1.5 ಲಕ್ಷ ಹೊಸ ಅರ್ಜಿ ಸ್ವೀಕರಿಸಲಾಗಿದೆ. ಹೊಸ ಕಾರ್ಡುದಾರರಿಗೆ ಪಡಿತರ ವಿತರಿಸಿದಲ್ಲಿ ಸರ್ಕಾರಕ್ಕೆ ಆಗುವ ಹೆಚ್ಚುವರಿ ಹೊರೆ ಬಗ್ಗೆ ಚರ್ಚೆಯಾಗಿದೆ. ಹೊಸ ಬಿಪಿಎಲ್ ಕಾರ್ಡ್ ವಿತರಿಸುವ ಕುರಿತಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ಬಂದ ಕೂಡಲೇ ಕಾರ್ಡ್ ವಿತರಿಸುತ್ತೇವೆ ಎಂದು ತಿಳಿಸಿದ್ದಾರೆ.