Home latest “ಮಾಡಿದ್ದುಣ್ಣೋ ಮಹಾರಾಯ” | ಮಾಡಿದ ಕೃತ್ಯಕ್ಕೆ ಕಣ್ಣೀರಿಡುತ್ತಿರುವ ಆ್ಯಸಿಡ್ ನಾಗ!!

“ಮಾಡಿದ್ದುಣ್ಣೋ ಮಹಾರಾಯ” | ಮಾಡಿದ ಕೃತ್ಯಕ್ಕೆ ಕಣ್ಣೀರಿಡುತ್ತಿರುವ ಆ್ಯಸಿಡ್ ನಾಗ!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನಲ್ಲಿ ಕೆಲವೊಂದು ದಿನ ಹಿಂದೆ ಆ್ಯಸಿಡ್ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣ ಇಡೀ ರಾಜ್ಯವನ್ನೇ ಅಲ್ಲೋಲ ಕಲ್ಲೋಲವಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ನಾಗೇಶ್ ತಲೆಮರೆಸಿಕೊಂಡಿದ್ದು, ನಂತರ ಪೊಲೀಸರು ಈತನನ್ನು ಬಂಧಿಸಿದ್ದರು. ಈಗ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ.

ಕೃತ್ಯ ನಡೆದ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಕಚೇರಿಯಿಂದ, ಆರೋಪಿ ನಾಗೇಶ್ ಆ್ಯಸಿಡ್ ಬಿಸಾಡಿದ ಜಾಗ, ವಕೀಲರನ್ನು ಭೇಟಿಯಾದ ಜಾಗ, ಬೈಕ್ ಬಿಟ್ಟು ಪರಾರಿಯಾದ ಜಾಗ ಸೇರಿದಂತೆ ಪ್ರತಿಯೊಂದು ಕಡೆಯೂ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಕೃತ್ಯದ ಬಳಿಕ ಆರೋಪಿ ಆಶ್ರಯ ಪಡೆದಿದ್ದ ತಿರುವಣ್ಣಾಮಲೈನ ರಮಣಾಶ್ರಮಕ್ಕೆ ಇಂದು ಬೆಳಗ್ಗೆ ಆತನನ್ನು ಕರೆದೊಯ್ಯಲಾಗಿದ್ದು, ಸ್ಥಳ ಮಹಜರು ಬಳಿಕ ಮತ್ತೆ ಆರೋಪಿಯನ್ನು ಪೊಲೀಸರು ಕರೆತರಲಿದ್ದಾರೆ.

ಇನ್ನು ಈಗಾಗಲೇ ಆರೋಪಿ ನಾಗೇಶನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ‘ನಾನು ದೊಡ್ಡ ಪ್ರಮಾದ ಮಾಡಿದ್ದೇನೆ, ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಹ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು’ ಅಂದಿರುವ ನಾಗೇಶ್ ನಾನು ಮಾಡಿದ ತಪ್ಪಿಗೆ ನನಗೆ ಸಿಕ್ಕಿರುವ ಶಿಕ್ಷೆ ಕಡಿಮೆ, ಇನ್ನೂ ಶಿಕ್ಷೆ ಆಗಬೇಕು ಎಂದು ಕಣ್ಣೀರಿಟ್ಟಿದ್ದಾನೆ ಎನ್ನಲಾಗಿದೆ.
ಯಾವ ಕಾರಣಕ್ಕೂ ಇಂತಹ ತಪ್ಪು ಮಾಡಲ್ಲ ಶಿಕ್ಷೆ ಅನುಭವಿಸಿಕೊಂಡು, ಒಳ್ಳೆಯವನಾಗಿಯೇ ಇರ್ತೇನಿ, ಮದುವೆಯಾಗಲು ಸಹ ನಾನು ಅರ್ಹನಲ್ಲ ಎಂದು ಪೊಲೀಸರ ಮುಂದೆ ನಾಗೇಶ್ ಹೇಳಿದ್ದಾನೆ ಎನ್ನಲಾಗಿದೆ.