Home latest ನೀವು ಆಯುಷ್ಮಾನ್ ಕಾರ್ಡ್ ಹೊಂದಿದ್ದೀರಾ? ನಿಮಗೊಂದು ಗುಡ್ ನ್ಯೂಸ್!

ನೀವು ಆಯುಷ್ಮಾನ್ ಕಾರ್ಡ್ ಹೊಂದಿದ್ದೀರಾ? ನಿಮಗೊಂದು ಗುಡ್ ನ್ಯೂಸ್!

Aayushman Bharat

Hindu neighbor gifts plot of land

Hindu neighbour gifts land to Muslim journalist

Aayushman Bharat : ಆಯುಷ್ಮಾನ್ ಭಾರತ್ ಅನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದೂ ಕರೆಯಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಅಥವಾ ಮೋದಿ ಕೇರ್ (modi care )ಎಂದೂ ಕರೆಯಲಾಗುತ್ತದೆ. ಇನ್ನು ಆಯುಷ್ಮಾನ್ ಭಾರತ್ ಯೋಜನೆಯು ಆರೋಗ್ಯ ಸೌಲಭ್ಯಗಳ ಅಗತ್ಯವಿರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ.
ಆಯುಷ್ಮಾನ್ ಭಾರತ್ (Aayushman Bharat) ಡಿಜಿಟಲ್ ಮಿಷನ್(ABDM) ಅಡಿಯಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕರಿಗೆ ಇದೊಂದು ಖುಷಿಯ ವಿಚಾರ ಆಗಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್(ABDM) ಅಡಿಯಲ್ಲಿ ವೇಗವಾಗಿ OPD ನೋಂದಣಿಗಾಗಿ (register )ಸ್ಕ್ಯಾನ್ ಮತ್ತು ಹಂಚಿಕೆ ಸೇವೆ ಅಕ್ಟೋಬರ್, 2022 ರಲ್ಲಿ ಪ್ರಾರಂಭವಾದಾಗಿನಿಂದ 365 ಆಸ್ಪತ್ರೆಗಳು ಅಳವಡಿಸಿಕೊಂಡಿವೆ ಎಂದು ಆರೋಗ್ಯ (health )ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ.

ಸದ್ಯ QR-ಕೋಡ್ ಆಧಾರಿತ ತ್ವರಿತ ನೋಂದಣಿ ಸೇವೆಯು ಭಾಗವಹಿಸುವ ಆಸ್ಪತ್ರೆಗಳ(ಔಟ್ ಪೇಷಂಟ್ ಡಿಪಾರ್ಟ್ಮೆಂಟ್) OPD ನೋಂದಣಿ ಪ್ರದೇಶಗಳಲ್ಲಿ ಕಾಯುವ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುವ ಮೂಲಕ 5 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸಮಯವನ್ನು ಉಳಿಸಲು ಸಹಾಯ ಮಾಡಿದೆ ಎಂದು ತಿಳಿಸಲಾಗಿದೆ.

ಹೌದು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ, 5 ಲಕ್ಷಕ್ಕೂ ಹೆಚ್ಚು ರೋಗಿಗಳು ಸ್ಕ್ಯಾನ್ ಮತ್ತು ಶೇರ್ ಸೇವೆಯನ್ನು ಬಳಸಿಕೊಂಡು ವೇಗವಾಗಿ OPD ನೋಂದಣಿಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಸದ್ಯ ಈ ಯೋಜನೆ ಪ್ರಾರಂಭವಾದ ಐದು ತಿಂಗಳೊಳಗೆ, ದೇಶಾದ್ಯಂತ 365 ಆಸ್ಪತ್ರೆಗಳು ಸೇವೆ ಅಳವಡಿಸಿಕೊಂಡಿವೆ. ಆಸ್ಪತ್ರೆಗಳು ರೋಗಿಗಳ ನೋಂದಣಿ ಪ್ರದೇಶಗಳಲ್ಲಿ ತಮ್ಮ ವಿಶಿಷ್ಟ QR ಕೋಡ್‌ಗಳನ್ನು ಪ್ರದರ್ಶಿಸುತ್ತವೆ.

QR ಕೋಡ್‌ಗಳನ್ನು ಬಳಸಿ ರೋಗಿಗಳು ತಮ್ಮ ಆಯ್ಕೆಯ ಯಾವುದೇ ಆರೋಗ್ಯ ಅಪ್ಲಿಕೇಶನ್ ಅನ್ನು ಬಳಸಿಕೊಂಡು QR ಕೋಡ್ ಸ್ಕ್ಯಾನ್ ಮಾಡಬಹುದು(ಉದಾಹರಣೆಗೆ ABHA ಅಪ್ಲಿಕೇಶನ್, Aarogya Setu App, EkaCare, DRiefcase, Bajaj Health, PayTM) ಮತ್ತು ಆಸ್ಪತ್ರೆಯ ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ (HMIS) ಜೊತೆಗೆ ಅವರ ABHA ಪ್ರೊಫೈಲ್ ಹಂಚಿಕೊಳ್ಳಬಹುದು.

ರೋಗಿಯ ಆರೋಗ್ಯ ದಾಖಲೆಗಳನ್ನು ಅವರ ABHA(ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ) ಗೆ ಡಿಜಿಟಲ್ ಲಿಂಕ್ ಮಾಡಲಾಗುತ್ತದೆ, ಅದನ್ನು ಅವರು ತಮ್ಮ ಫೋನ್‌ನಿಂದ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ನಿರ್ವಹಿಸಬಹುದು ಮತ್ತು ಪ್ರವೇಶಿಸಬಹುದು ಎಂದು ಸಚಿವಾಲಯ ತಿಳಿಸಿದೆ. ಅನೇಕ ಫಲಾನುಭವಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದು, ನೀವು ಸಹ ಇದರ ಪ್ರಯೋಜನ ಪಡೆಯಬಹುದಾಗಿದೆ.

ಇದನ್ನೂ ಓದಿ : ದಪ್ಪ, ಸುಂದರವಾದ ಹುಬ್ಬು ಬೇಕೆ? ಈ ಮನೆಮದ್ದು ಅನುಸರಿಸಿ!