Home latest 7th Pay Commission : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ;

7th Pay Commission : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ;

7th-Pay Commission HRA hike

Hindu neighbor gifts plot of land

Hindu neighbour gifts land to Muslim journalist

7th-Pay Commission HRA hike : ಈ ಹಿಂದೆ ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಇದೀಗ ಕೇಂದ್ರ ನೌಕರರಿಗೆ (7th-Pay Commission HRA hike ) ಮತ್ತೊಂದು ಸಂತಸದ ಸುದ್ದಿ ಸಿಗಲಿದೆ. ಹೌದು, ಕೇಂದ್ರ ಸರ್ಕಾರ ಇದೀಗ ಸರ್ಕಾರಿ ನೌಕರರ (Central Govt Employees) ಎಚ್‌ಆರ್‌ಎ (HRA) ಅಂದರೆ, ಮನೆ ಬಾಡಿಗೆ ಭತ್ಯೆಯನ್ನೂ ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.

ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ (DA hike) ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ನೌಕರರ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆ ಆಗಿದೆ. ಆದರೆ, ಇದೀಗ ಕೇಂದ್ರ ನೌಕರರಿಗೆ ಮತ್ತೊಂದು ಉಡುಗೊರೆ ಸಿಗಲಿದೆ. ಸರ್ಕಾರ ಮನೆ ಬಾಡಿಗೆ ಭತ್ಯೆಯನ್ನು ಶೇ 3ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಸದ್ಯ ನೌಕರರು ಶೇ.27ರಷ್ಟು ಎಚ್‌ಆರ್‌ಎ ಪಡೆಯುತ್ತಿದ್ದು, ಅದು ಶೇ.30ಕ್ಕೆ ಏರಿಕೆಯಾಗಲಿದೆ. ಸರಕಾರದಿಂದ ಬಂದಿರುವ ಮಾಹಿತಿ ಪ್ರಕಾರ, ನೌಕರರ ತುಟ್ಟಿ ಭತ್ಯೆ ಶೇ.50ಕ್ಕೆ ಏರಿದಾಗ ಇದು ಶೇ.30 ಆಗಲಿದೆ ಎನ್ನಲಾಗಿದೆ.

ಎಚ್‌ಆರ್‌ಎ ಬಗ್ಗೆ ಈಗಾಗಲೇ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, 2023-24 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ಸರ್ಕಾರವು HRA ಅನ್ನು ಹೆಚ್ಚಿಸುವ ನಿರೀಕ್ಷೆಯಿದೆ. ತುಟ್ಟಿಭತ್ಯೆಯು ಶೇಕಡಾ 50 ರ ಮಟ್ಟವನ್ನು ತಲುಪಿದರೆ, ಆ ಸಂದರ್ಭದಲ್ಲಿ ಸರ್ಕಾರವು HRA ಅನ್ನು ಪರಿಷ್ಕರಿಸಬಹುದು.

ಈ ವೇಳೆ ನೌಕರರು ಪಡೆಯುವ ಡಿಎ ಶೇ.42ರಷ್ಟಿದೆ. ಜುಲೈ 2021 ರಲ್ಲಿ, ಕೇಂದ್ರ ನೌಕರರ ತುಟ್ಟಿಭತ್ಯೆ ಶೇ. 25ರ ಗಡಿ ದಾಟಿದಾಗ, ಸರ್ಕಾರವು ಕೊನೆಯ ಬಾರಿಗೆ HRA ಅನ್ನು ಪರಿಷ್ಕರಿಸಿತ್ತು. ಪ್ರಸ್ತುತ, DA 50 ಪ್ರತಿಶತವನ್ನು ತಲುಪಿದಾಗ, ಸರ್ಕಾರವು ಮತ್ತೊಮ್ಮೆ HRA ಅನ್ನು ಪರಿಷ್ಕರಿಸಬಹುದು ಎನ್ನಲಾಗಿದೆ.