Home latest 7th Pay Commission: ಹೊಸ ವರ್ಷಕ್ಕೆ ಕೇಂದ್ರ ನೌಕರರಿಗೆ ಡಬಲ್ ಧಮಾಕಾ: ಶೀಘ್ರದಲ್ಲೇ ತುಟ್ಟಿ ಭತ್ಯೆ,...

7th Pay Commission: ಹೊಸ ವರ್ಷಕ್ಕೆ ಕೇಂದ್ರ ನೌಕರರಿಗೆ ಡಬಲ್ ಧಮಾಕಾ: ಶೀಘ್ರದಲ್ಲೇ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಹೆಚ್ಚಳ!!

Hindu neighbor gifts plot of land

Hindu neighbour gifts land to Muslim journalist

7th Pay Commission: ಕೇಂದ್ರ ನೌಕರರಿಗೆ ಹೊಸ ವರ್ಷದ ಸಂಭ್ರಮಕ್ಕೆ ಗುಡ್ ನ್ಯೂಸ್ (Good News)ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. 7ನೇ ವೇತನ ಆಯೋಗದ( 7th Pay Commission)ಹೆಚ್ಚುವರಿ ವೇತನ ಸಿಗಲಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಈ ವರ್ಷ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (DA)ಮತ್ತು ಮನೆ ಬಾಡಿಗೆ ಭತ್ಯೆ (HRA) ಹೆಚ್ಚಳವಾಗಲಿದೆ ಎನ್ನಲಾಗಿದೆ.

 

ಪ್ರಸ್ತುತ, ಸರ್ಕಾರಿ ನೌಕರರು ತುಟ್ಟಿ ಭತ್ಯೆಯನ್ನು ಶೇಕಡಾ 46 ರ ದರದಲ್ಲಿ ಪಡೆಯುತ್ತಿದ್ದು, ಇನ್ನು, ಕೇಂದ್ರವು ಡಿಎಯನ್ನು ಶೇಕಡಾ 4ರಷ್ಟು ಹೆಚ್ಚಿಸಲಿದೆ ಎನ್ನಲಾಗಿದೆ. ಹೀಗಾಗಿ, ಇದಾದ ಬಳಿಕ ಡಿಎ ಶೇ. 50ಕ್ಕೆ ಏರಿಕೆಯಾಗಲಿದೆ(DA Hike)ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ DA ಮತ್ತು HRA ಎರಡನ್ನೂ ಹೆಚ್ಚಳ ಮಾಡಿದರೆ ಕೇಂದ್ರ ಸರ್ಕಾರಿ ನೌಕರರು ತಮ್ಮ ಸಂಬಳದಲ್ಲಿ ದೊಡ್ದ ಮಟ್ಟದ ಹೆಚ್ಚಳವನ್ನು  ಪಡೆಯುತ್ತಾರೆ.

 

ಎಚ್‌ಆರ್‌ಎ ಪ್ರಮಾಣವು ನಗರದಿಂದ ನಗರಕ್ಕೆ ಭಿನ್ನವಾಗಿದ್ದು, ಇದರ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಿಸುವ ಉದ್ಯೋಗಿಗಳು ಮಾತ್ರ ಎಚ್‌ಆರ್‌ಎ ಪ್ರಯೋಜನವನ್ನು ಪಡೆಯುತ್ತಾರೆ. ಶ್ರೇಣಿ-1 ನಗರಗಳಲ್ಲಿ ವಾಸಿಸುವ ಉದ್ಯೋಗಿಗಳು ಶ್ರೇಣಿ-II ಅಥವಾ ಶ್ರೇಣಿ-III ನಗರಗಳಲ್ಲಿ ವಾಸಿಸುವ ಉದ್ಯೋಗಿಗಳು ಹೆಚ್ಚಿನ HRA ಅನ್ನು ಪಡೆಯುತ್ತಾರೆ.