

ಫುಡ್ ಡೆಲಿವರಿ ಕಂಪನಿ ಜೊಮ್ಯಾಟೊ ದಲ್ಲಿ ಉದ್ಯೋಗವಕಾಶವಿದ್ದು, ಇಂಟರ್ನ್ ಹಾಗೂ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಪದವಿ, ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ವರ್ಕ್ ಫ್ರಮ್ ಹೋಮ್ ಹುದ್ದೆಯಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಜಾಬ್ ಹೆಸರು : ಕಸ್ಟಮರ್ ಸಪೋರ್ಟ್ – ಚಾಟ್ ಪ್ರೋಸೆಸ್
ವೇತನ : ವಾರ್ಷಿಕ ರೂ.2,94,000. ಆರಂಭದಲ್ಲಿ ನೀಡಲಾಗುತ್ತದೆ.
ವಿದ್ಯಾರ್ಹತೆ : ಪದವಿ / ಸ್ನಾತಕೋತ್ತರ ಪದವಿ
ಉದ್ಯೋಗ ವಿಧ : ವರ್ಕ್ ಫ್ರಮ್ ಹೋಮ್.
ಜೊಮ್ಯಾಟೊ ಕಂಪನಿಯ ಕರಿಯರ್ ಪೇಜ್‌ನಲ್ಲಿ ನೇರವಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಕಾರಣ, ಕಂಪನಿಯೇ ಅರ್ಜಿಯನ್ನು ನಾವು ಉದ್ಯೋಗಿಗಳ ರೆಫರೆಲ್ ಮೂಲಕ ಸ್ವೀಕಾರ ಮಾಡುವುದು ಎಂದಿದೆ. ಆದ್ದರಿಂದ ಉದ್ಯೋಗ ಬಯಸುವ ಅಭ್ಯರ್ಥಿಗಳು ಜೊಮ್ಯಾಟೊದಲ್ಲಿ ವರ್ಕ್ ಮಾಡುತ್ತಿರುವವರನ್ನು ಸಂಪರ್ಕಿಸಿ ಅವರ ರೆಫರೆನ್ಸ್ ಪಡೆಯಬಹುದು.
ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಫೇಸ್‌ಬುಕ್, ಟ್ವಿಟ್ಟರ್ ಮೂಲಕ ಹುಡುಕಿ ಸಂಪರ್ಕ, ಸಂವಹನ ನಡೆಸಿ ಉದ್ಯೋಗ ರೆಫರೆಲ್ ಕೇಳಬಹುದು. ಅಥವಾ careerupjob.com ನಲ್ಲಿ ಖಾತೆ ತೆರೆದು ಅರ್ಜಿ ಸಲ್ಲಿಸಲು ಅವಕಾಶ ಇದೆ.
ಜೊಮ್ಯಾಟೊ ಹುದ್ದೆ ಅರ್ಜಿ ಸಲ್ಲಿಕೆಗೆ ರೆಸ್ಯೂಮ್ ಅಗತ್ಯವಾಗಿದ್ದು, ಕಸ್ಟಮರ್ ಸಪೋರ್ಟ್ -ಚಾಟ್ ಪ್ರೊಸೆಸಿಂಗ್ ನಲ್ಲಿ ಉದ್ಯೋಗಿಗಳು ಜೊಮ್ಯಾಟೊ ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡಿ ಅವರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಜೊಮ್ಯಾಟೊ ಕರಿಯರ್ ಪೇಜ್, ವೆಬ್‌ಸೈಟ್ ವಿಳಾಸ https://www.zomato.com/careers ಗೆ ಭೇಟಿ ನೀಡಿ, ಅಧಿಕ ಮಾಹಿತಿಗಳನ್ನು ತಿಳಿಯಿರಿ.










