Home Interesting ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರ ಸೇವಾ ಅವಧಿ ವಿಸ್ತರಣೆ ಕುರಿತಂತೆ ಮಹತ್ವದ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್

ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರ ಸೇವಾ ಅವಧಿ ವಿಸ್ತರಣೆ ಕುರಿತಂತೆ ಮಹತ್ವದ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್

Hindu neighbor gifts plot of land

Hindu neighbour gifts land to Muslim journalist

ನವದೆಹಲಿ : ಸುಪ್ರೀಂಕೋರ್ಟ್ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದವರ ಸೇವಾ ಅವಧಿಯನ್ನು ವಿಸ್ತರಣೆ ಮಾಡುವ ಬಗ್ಗೆ ಮಹತ್ವದ ಆದೇಶ ನೀಡಿದ್ದು, ವಿಸ್ತರಣೆ ಮಾಡುವಂತಿಲ್ಲ ಎಂದು ತಿಳಿಸಿದೆ.

ಮರಣ ಹೊಂದಿದ ಉದ್ಯೋಗಿಯ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಕುಟುಂಬದಲ್ಲಿ ಒಬ್ಬರಿಗೆ ನೀಡುವ ಅನುಕಂಪದ ಉದ್ಯೋಗದ ಸೇವಾ ಅವಧಿ ವಿಸ್ತರಣೆ ಮಾಡಿದರೆ ಅದು ಸಂವಿಧಾನದ 14 ಮತ್ತು 15 ನೇ ವಿಧಿಗಳ ಉಲ್ಲಂಘನೆ ಆಗುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಬಿ.ವಿ. ನಾಗರತ್ನ ಅವರ ಪೀಠ ಅಭಿಪ್ರಾಯಪಟ್ಟಿದೆ.

ಸರ್ಕಾರಿ ನೌಕರರು ಅಕಾಲಿಕ ಮರಣಕ್ಕೀಡಾದ ಸಂದರ್ಭದಲ್ಲಿ ಅನುಕಂಪ ಆಧಾರಿತ ಹುದ್ದೆಗಳನ್ನು ಮೃತರ ಮಗಳಿಗೂ ನೀಡಬಹುದು. ಮೃತ ನೌಕರರ ಪತಿ ಅಥವಾ ಪತ್ನಿ ಸೂಚಿಸುವ ಅವಿವಾಹಿತ, ವಿವಾಹಿತ ಅಥವಾ ವಿಚ್ಛೇದಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬಹುದು.

ಇಂತಹ ಅನುಕಂಪದ ಉದ್ಯೋಗ ಪಡೆದವರ ಸೇವಾ ಅವಧಿ ವಿಸ್ತರಣೆ ಮಾಡಿದರೆ ಸಂವಿಧಾನದ 14 ಮತ್ತು 15 ನೇ ವಿಧಿಗಳ ಉಲ್ಲಂಘನೆ ಜೊತೆಗೆ ಹೊಸ ನೇಮಕಾತಿಗೆ ಇದರಿಂದ ಅಡಚಣೆ ಆಗುತ್ತದೆ ನ್ಯಾಯಪೀಠ ಹೇಳಿದೆ.